ಬಿಜೆಪಿಯವರು ಆಪರೇಷನ್ ಜಪ ಮಾಡ್ತಿದ್ದಾರಂತೆ!

ಹಾಸನ, ಸೋಮವಾರ, 11 ಫೆಬ್ರವರಿ 2019 (14:15 IST)

ಬಿಜೆಪಿಯವರು ರಾಜ್ಯದ ಬರಗಾಲದ ಚಿಂತನೆ ಬಿಟ್ಟು‌ ಆಪರೇಷನ್ ಕಮಲದ ಬಗ್ಗೆ ಜಪ  ಮಾಡುತ್ತಿದ್ದಾರೆ ಎಂದು ಸಚಿವರೊಬ್ಬರು ಗುಡುಗಿದ್ದಾರೆ.

ಈ ಮೊದಲು ಆಡಿಯೋ ಮಿಮಿಕ್ರಿ ಅಂದವರು ಈಗ ಏಕೆ ಒಪ್ಪಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ ಸಚಿವರು,  ಮೊದಲು ಆಪರೇಷನ್ ಕಮಲದ ಬಗ್ಗೆ ಮಾತಾಡಿದ್ದ ಆಡಿಯೋ ನನ್ನದಲ್ಲ ಎಂದಿದ್ದ ಬಿಎಸ್ವೈ ಈಗ ಒಪ್ಪಿಕೊಂಡಿದ್ದೇಕೆ?  ಯಾರು ಯಾರನ್ನೇ ಕಳಿಸಲಿ ಯಡಿಯೂರಪ್ಪ ಹಾಗೆ ಮಾತನಾಡಿದ್ದು ತಪ್ಪಲ್ಲವೇ? ಎಂದು  ಶಾಸಕರ‌ ಖರೀದಿ ಕುರಿತು ಮಾತನಾಡಿದ್ದ ಆಡಿಯೋ ಬಗ್ಗೆ ಹೆಚ್.ಡಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ದೋಸ್ತಿ ಸರಕಾರದ ವಿರುದ್ಧ ಕೇಳಿಬರುತ್ತಿರುವ ಟೀಕೆ‌, ಆರೋಪಗಳಿಗೆ ಪ್ರತಿಕ್ರಿಯೆ ನೀಡಲ್ಲ. ಅವರಿಗೆ ನಾ ರಿಯಾಕ್ಟ್ ಮಾಡಿದ್ರೆ ಪೊಳ್ಳೆದ್ದು ಹೋಗ್ತೀನಿ ಎಂದರು.
ಬಿಜೆಪಿಯವರ  ಬಗ್ಗೆ ನಾಡಿನ ಜನರಿಗೆ ಬಿಡ್ತೇನೆ, ಅವರನ್ನು ನೆಗ್ಲೆಕ್ಟ್ ಮಾಡ್ತೇನೆ ಎಂದು  ಹಾಸನದಲ್ಲಿ ಲೋಕೋ ಪಯೋಗಿ ಸಚಿವ ಎಚ್.ಡಿ.ರೇವಣ್ಣ‌ ಕಿಡಿಕಾರಿದರು.

ನಮ್ಮ ಸರ್ಕಾರಕ್ಕೆ  ಏನೂ ಆಗಲ್ಲ‌. ಸರ್ಕಾರ ಸುಭದ್ರವಾಗಿದೆ. ರಾಜ್ಯದ 156 ತಾಲ್ಲೂಕಿನಲ್ಲಿ ಬರಗಾಲ‌ ಇದೆ. ನಾವು ಮೂರು ಸಾವಿರ ಕೋಟಿ ನೆರವು ಕೇಳಿದ್ದೆವು. ನಮಗೆ 900 ಕೋಟಿ, ಪಕ್ಕದ ಮಹಾರಾಷ್ಟ್ರ ಕ್ಕೆ 4 ಸಾವಿರ ಕೋಟಿ ಕೊಡ್ತಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಯಾವ ನೈತಿಕತೆಯಿಂದ ಮತ ಕೇಳುತ್ತಾರೆ?  ಐದು ವರ್ಷ ರಾಜ್ಯಕ್ಕೆ 
ಕೇಂದ್ರದ ಕೊಡುಗೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಕುಟುಂಬಕ್ಕೆ ಆಗಿದ್ದೇನು?

ಜಾತ್ರೆ ಹಾಗೂ ಸಭೆ ಸಮಾರಂಭಗಳಿಗಾಗಿಯೇ ಕಾಯುತ್ತಿದ್ದ ಅವರು ಮಾಡಬಾರದ ಕೆಲಸ ಮಾಡುತ್ತಲೇ ಜನರಿಗೆ ಶಾಕ್ ...

news

ಸಿಎಂ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಗರಂ ಆಗಿದ್ಯಾಕೆ?

ತುಮಕೂರು : ಬಜೆಟ್ ನಲ್ಲಿ ಗುಬ್ಬಿ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಘೋಷಣೆಯಾಗದಿದದ್ದಕ್ಕೆ ...

news

ಸದನದಿಂದ ಶಿವನಗೌಡ, ರೇಣುಕಾಚಾರ್ಯ ಎದ್ದು ಹೊರ ನಡೆದದ್ಯಾಕೆ?

ಮೈತ್ರಿ ಸರಕಾರದ ಪಕ್ಷಗಳು ಹಾಗೂ ಬಿಜೆಪಿ ಮುಖಂಡರು ಆಡಿಯೋ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ...

news

ಆಪರೇಷನ್ ಕಮಲ ಒಪ್ಪಿಕೊಂಡ ಸಿ.ಟಿ.ರವಿ?

ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು ಬಿ.ಎಸ್.ಯಡಿಯೂರಪ್ಪ ...