ಬಿಎಸ್ವೈ ಡೈರಿ ಬಗ್ಗೆ ಚರ್ಚೆಗೆ ಸಿದ್ಧ ಅಂತ ಕೈ ಪಾಳೆಯಕ್ಕೆ ಸವಾಲೆಸೆದ ಚೌಕಿದಾರರು

ಬೆಂಗಳೂರು, ಶನಿವಾರ, 23 ಮಾರ್ಚ್ 2019 (16:21 IST)

ಬಿ.ಎಸ್.ಯಡಿಯೂರಪ್ಪ ಅವರದ್ದು ಅಂತ ಕಾಂಗ್ರೆಸ್ ಹೇಳುತ್ತಿರುವ ಡೈರಿ ಕುರಿತು ವಾದ ಪ್ರತಿವಾದ ತೀವ್ರಗೊಂಡಿದೆ. ಡೈರಿ ಕುರಿತು ಎಲ್ಲಾ ಚೌಕಿದಾರರು ಚರ್ಚೆಗೆ ಸಿದ್ಧ ಅಂತ ಕಾಂಗ್ರೆಸ್ ಮುಖಂಡರಿಗೆ ಸವಾಲು ಹಾಕಿದ್ದಾರೆ.

ಹಲವಾರು ನಕಲಿ ಡೈರಿಗಳು ಹೊರಬರುತ್ತಲೇ ಇವೆ. ಕಳೆದ ಒಂದು ವರ್ಷದ ಹಿಂದೆ ಗೋವಿಂದ ರಾಜು ಮೇಲೆ ಐಟಿ ದಾಳಿ ಆದ ನಂತರ ಇಂತಹ ಫೇಕ್ ಡೈರಿಗಳು ಬರುತ್ತಿವೆ. ಬಿ.ಎಸ್.ಯಡಿಯೂರಪ್ಪನವರ ಮನೆಯ ಕೋಣೆಯೊಳಗೆ ಇರಬೇಕಾದ ಡೈರಿ ಕಾಂಗ್ರೆಸ್ ನಾಯಕರ ಕೈಗೆ ಹೇಗೆ ತಲುಪಿತು. ಕಾಂಗ್ರೆಸ್ ನ ಈ ಕೃತ್ಯದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಡೈರಿ ಸಂಬಂಧ ಯಾವುದೇ ತನಿಖೆಗೆ ನಾವು ಸಿದ್ಧ ಅಂತ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಇದು ನೋಟು ಅಮಾನ್ಯೀಕರಣದ ಮೊದಲು ಬರೆದಿರುವ ಡೈರಿ. ಹಾಗಾಗಿ ಹಣ ಹೆಚ್ಚು ನಮೂದು ಮಾಡಿದ್ದಾರೆ. ಕಾಂಗ್ರೆಸ್ಸಿಗರು ಮತ್ತೊಂದು ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ‌ .ಇದರ ವಿರುದ್ಧ ಬಿಜೆಪಿಯ ಎಲ್ಲ ಚೌಕಿದಾರರು ಚರ್ಚೆಗೆ ಸಿದ್ಧವಿದ್ದೇವೆ‌. ಇದನ್ನು ಚುನಾವಣಾ ವಿಷಯವಾಗಿಯೂ ತೆಗೆದುಕೊಳ್ಳುತ್ತೇವೆ‌. ಕರ್ನಾಟಕ ಸರ್ಕಾರದಲ್ಲಿ ಹಲವಾರು ದೊಡ್ಡ ಹಗರಣಗಳು ನಡೆದಿವೆ.

ಉತ್ತರ ಪ್ರದೇಶ ಚುನಾವಣೆಗೆ ಸ್ಟೀಲ್ ಬ್ರಿಡ್ಜ್ ಕಟ್ಟಲು ಹೊರಟಿದ್ದನ್ನು ನಾವು ಮರೆತಿಲ್ಲ. ಸಚಿವ ಪುಟ್ಟರಂಗಶೆಟ್ಟರ ಆಪ್ತ ಸಹಾಯಕನ ಬಳಿ ವಿಧಾನಸೌಧದಲ್ಲೇ ಹಣ ಸಿಕ್ಕಿದ್ದನ್ನು ನಾವು ಮರೆತಿಲ್ಲ. ಗ್ರಾಮೀಣಾಭಿವೃದ್ದಿ ಇಲಾಖೆಯ ಇಂಜಿನಿಯರ್ ಗಳ ಬಳಿ ಕರೆನ್ಸಿ ಸಿಕ್ಕಿದ್ದೂ ಮರೆತಿಲ್ಲ. ಜನ‌ಮೂರ್ಖರಲ್ಲ. ನಿಜವಾದ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ಗೂ ಎಚ್ಚರಿಸುತ್ತಿದ್ದೇನೆ ಅಂತ ಲಿಂಬಾವಳಿ ಹೇಳಿದ್ದಾರೆ.


 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಮೀಷನರ್ ನ ಜನ್ಮ ಜಾಲಾಡಿದ ಶಾಸಕ?

ಕಮಿಷನರ್ ಅವರ ಅಪ್ಪನಿಗೆ ಹುಟ್ಟಿದ್ದಾದ್ರೆ ನಿಜ ಹೇಳಲಿ. ಎಲುಬಿಲ್ಲದ ನಾಲಿಗೆ ಅವನದ್ದು ಎಂದು ಶಾಸಕರೊಬ್ಬರು ...

news

ಕೈ ನಾಯಕರಿಗೆ 10 ಪ್ರಶ್ನೆ ಎಸೆದ ಬಿಜೆಪಿ

ಬಿ.ಎಸ್.ಯಡಿಯೂರಪ್ಪ ಡೈರಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ...

news

ಬಿಜೆಪಿಯ ಎಲ್ಲಾ ಮುಖಂಡರು ಕಳ್ಳರು - ರಾಹುಲ್ ಗಾಂಧಿ ಟ್ವೀಟ್

ನವದೆಹಲಿ : ಬಿಎಸ್ ಯಡಿಯೂರಪ್ಪ ಅವರ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಎಲ್ಲಾ ಮುಖಂಡರು ಕಳ್ಳರು ...

news

ಬಿಜೆಪಿಯತ್ತ ಮುಖ ಮಾಡಿದ ಮತ್ತೊಬ್ಬ ಕಾಂಗ್ರೆಸ್ ನಾಯಕ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಪ್ಪಳದ ...

Widgets Magazine