Widgets Magazine

ಮನೆ ಮುಂದೆ, ರಸ್ತೆಬದಿಯಲ್ಲಿ ಕಾರು, ಬೈಕ್ ನಿಲ್ಲಿಸಿದಲ್ಲಿ ಬೀಳುತ್ತೇ ಬಾರೀ ದಂಡ

ಬೆಂಗಳೂರು| pavithra| Last Modified ಶನಿವಾರ, 16 ಮಾರ್ಚ್ 2019 (13:17 IST)
ಬೆಂಗಳೂರು : ಇನ್ನು ಮುಂದೆ ಮನೆ ಮುಂದೆ ಕಾರು, ಬೈಕ್ ನಿಲ್ಲಿಸಿದಲ್ಲಿ ದಂಡ ವಿಧಿಸುವುದಾಗಿ ಹೊಸ ನಿಯಮ ಜಾರಿಗೆ ತರಲಿದೆ.


ಶೀಘ್ರವೇ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಗೆ ಬರಲಿದ್ದು, ವಸತಿ ಪ್ರದೇಶದ ಜೊತೆಗೆ ವಾಣಿಜ್ಯ ಪ್ರದೇಶ, ಮುಖ್ಯ ರಸ್ತೆ ಮೊದಲಾದ ಕಡೆಗಳಲ್ಲಿ ಏರಿಯಾವಾರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ನಂತರದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕಿದೆ.


ಒಂದು ವೇಳೆ ಮನೆ ಮುಂದೆ, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿದರೆ ಶುಲ್ಕ ಪಾವತಿಸಬೇಕಿದೆ. ಕಾರು, ಬೈಕ್, ಆಟೋ ಹೀಗೆ ವಿವಿಧ ವಾಹನಗಳನ್ನು ಆಧರಿಸಿ, 200 ರೂ. ನಿಂದ 2000 ರೂ. ವರೆಗೆ ದಂಡ ಶುಲ್ಕ ನಿಗದಿಪಡಿಸಲಾಗಿದೆ.


ಬೆಂಗಳೂರಿನಲ್ಲಿ ವಾಹನ ನಿಲುಗಡೆ ವ್ಯವಸ್ಥಾಪನೆ ಹಾಗೂ ನಿರ್ವಹಣೆ ನಿಯಮಾವಳಿಯನ್ನು ಸಾರಿಗೆ ಇಲಾಖೆ ರೂಪಿಸಿದ್ದು, ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :