ರಾಜ್ಯಪಾಲರ ವರ್ತನೆ ಖಂಡಿಸಿ ಭಾರಿ ಪ್ರತಿಭಟನೆ

ಬೆಳಗಾವಿ, ಶುಕ್ರವಾರ, 18 ಮೇ 2018 (15:53 IST)

ವಿಧಾನಸಭೆ ಚುನಾವಣೆ ನಂತರ ರಾಜ್ಯ ಸರಕಾರ ರಚನೆ ವಿಚಾರದಲ್ಲಿ ಗವರ್ನರ್ ವಜುಭಾಯಿ ವಾಲಾ ಹೆಜ್ಜೆ ಇಟ್ಟಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಈ ಕೂಡಲೇ ಮಧ್ಯಸ್ಥಿಕೆ ವಹಿಸಿ ಬಿಕ್ಕಟ್ಟು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
 
 ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ & ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ರವಾಣಿಸಿದರು. 
 
ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ನಿಗದಿತ ಬಹುಮತ ಪಡೆದಿಲ್ಲ. ಬಿಜೆಪಿ ಪಕ್ಷ ಬರೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣಕ್ಕೆ ಬಿಜೆಪಿಗೆ ಕರ್ನಾಟಕ ಗವರ್ನರ್ ವಾಲಾ ಸರಕಾರ ರಚನೆಗೆ ಆಹ್ವಾನ ನೀಡಿರುವುದು ಚಿಂತಾಜನಕ ಎಂದರು.
 
117 ಶಾಸಕರ ಸಂಖ್ಯೆ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಅಲೈನ್ಸ್ ಪಕ್ಷಕ್ಕೆ ಸರಕಾರ ರಚಣೆಗೆ ಅನುವು ಮಾಡದೇ, 104 ಶಾಸಕರ ಸಂಖ್ಯೆಯ ಬಿಜೆಪಿಗೆ ಗವರ್ನರ್ ಅವಕಾಶ ಕೊಟ್ಟಿದ್ದು ಆಕ್ಷೇಪಾರ್ಹ ಎಂದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇವತ್ತಿಗೂ ಸರಕಾರಿ ಬಸ್ ಬಾರದ ಊರು ಇದೆ ಎಂದ್ರೆ ನಂಬುತ್ತೀರಾ?

ದಾವಣಗೆರೆ: ಇಂದು ದಾವಣಗೆರೆ ಜಿಲ್ಲೆ ಸ್ಮಾರ್ಟ್ ಸಿಟಿಯತ್ತ ದಾಪುಗಾಲಿಟ್ಟಿದೆ. ಅಲ್ಲದೆ ಅಭಿವೃದ್ಧಿಯಲ್ಲಿ ...

news

ಕುದುರೆ ವ್ಯಾಪಾರ: ಬಿಜೆಪಿ ಹುಟ್ಟು ಗುಣ ಸುಟ್ಟರೂ ಹೋಗದು ಎಂದ ರಾಮಲಿಂಗಾರೆಡ್ಜಿ

ರಾಮನಗರ: ಬಿಜೆಪಿಯವರು ನಮ್ಮ ಶಾಸಕರಿಗೆ ತುಂಬಾ ಆಫರ್ ಕೊಟ್ಟಿದ್ದಲ್ಲದೇ ಹಾರ್ಸ್ ಟ್ರೇಡಿಂಗ್ ಮಾಡಲು ತುಂಬಾ ...

news

ನಾಳೆಯೇ ಯಡಿಯೂರಪ್ಪ ಸರ್ಕಾರದ ವಿಶ್ವಾಸ ಮತ: ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಾಳೆ ...

news

ನೀವೂ ಬಹುಮತ ಇದೆ ಅಂತೀರಿ, ಅವರೂ ಅಂತಾರೆ! ಇದು ಹೇಗೆ ಸಾಧ್ಯ? ಬಿಜೆಪಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ: ಕರ್ನಾಟಕ ರಾಜ್ಯ ಸರ್ಕಾರ ರಚನೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ...

Widgets Magazine
Widgets Magazine