ಶಾಲಾ ವಿದ್ಯಾರ್ಥಿ ಮೇಲೆ ಕಂಡಕ್ಟರ್ ನಿಂದ ಹಲ್ಲೆ  

ಯಾದಗಿರಿ, ಶುಕ್ರವಾರ, 14 ಸೆಪ್ಟಂಬರ್ 2018 (18:31 IST)

ಬಸ್ ನಲ್ಲಿ ಶಾಲೆಗೆ ತೆರಳುತಿದ್ದ ವಿದ್ಯಾರ್ಥಿಗಳ ಮೇಲೆ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ  ಘಟನೆ ನಡೆದಿದೆ.
ಈಶಾನ್ಯ ಸಾರಿಗೆ ಸಂಸ್ಥೆಯ ಯಾದಗಿರಿ ಜಿಲ್ಲೆಯ ಶಹಾಪುರ ವಿಭಾಗದ ಕಂಡಕ್ಟರ್ ನೊಬ್ಬ ಶಾಲಾ ವಿದ್ಯಾರ್ಥಿಗೆ ಥಳಿಸಿದ್ದಾನೆ.

ಶಹಾಪುರನಲ್ಲಿ ಬಸ್ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಯಾದಗಿರಿಯಿಂದ ಶಹಾಪುರಗೆ ತೆರಳುತ್ತಿದ್ದ ಬಸ್ ಶಹಾಪುರ ತಾಲೂಕಿನ‌ ಗುಂಡಳ್ಳಿ ತಾಂಡಾದ ಕ್ರಾಸ್ ಹತ್ತಿರ ನಿಲ್ಲಿಸಿತ್ತು. ಈ ವೇಳೆ ದೋರನಹಳ್ಳಿ ಕ್ಯಾಂಪ್ ಗೆ ತೆರಳುವ ವಿದ್ಯಾರ್ಥಿಗಳು ಬಸ್ ಹತ್ತಿದ್ದರು. ಆದರೆ ಬಸ್ ದೋರನಹಳ್ಳಿ ಕ್ಯಾಂಪ್ ನಲ್ಲಿ ನಿಲ್ಲಿಸಬೇಕಾಗಿತ್ತು. ಈ ವೇಳೆ ಬಸ್ ನಿಲ್ಲಿಸದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಂಡಕ್ಟರ್ ಅವರನ್ನು ಬಸ್ ನಿಲ್ಲಿಸಿ ಅಂದಿದಕ್ಕೆ  ಅವಾಚ್ಯ ಶಬ್ದಗಳಿಂದ ನಿಂದಿಸಿ ಕಂಡಕ್ಟರ್ ಹಲ್ಲೆ ಮಾಡಿದ್ದಾನೆ. ನಂತರ ವಿದ್ಯಾರ್ಥಿಗಳನ್ನು ಶಹಾಪುರಗೆ ಕರೆದುಕೊಂಡು ಹೋಗಿದ್ದಾನೆ.

ಆದರೆ ಬೆಳಿಗ್ಗೆ ಶಾಲೆಗೆ ತೆರಳಬೇಕಾದ ವಿದ್ಯಾರ್ಥಿಗಳು ಪೋಷಕರ ಹಾಗೂ ಸಾರ್ವಜನಿಕ ರ ಸಹಾಯದಿಂದ ಮಧ್ಯಾಹ್ನ 2 ಗಂಟೆಗೆ ಶಾಲೆಗೆ ತೆರಳುವಂತಾಗಿದೆ. ಕಂಡಕ್ಟರ್ ನ ಕಾಟದಿಂದ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಡಿಯುವ ನೀರಿನ ಸಮಸ್ಯೆ: ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಕುಡಿಯುವ ನೀರಿಗಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಖಾಲಿ ಕೊಡ ಹಿಡಿದು ಗ್ರಾಮ ...

news

ನೂರಕ್ಕೆ ನೂರರಷ್ಟು ಸರಕಾರ ಭದ್ರ ಎಂದ ಮಾಜಿ ಸಿಎಂ

ಹೆಚ್.ಡಿ. ಕುಮಾರಸ್ವಾಮಿಯವರನ್ನ 5 ವರ್ಷ ಸಿಎಂ ಆಗಿರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಐದು ವರ್ಷ ...

news

ಶಾಸಕ ಸತೀಶ್ ಜಾರಕಿಹೊಳಿ ಹೇಳ್ತಿರೋದೇನು ಗೊತ್ತಾ?

ಕಾಂಗ್ರೆಸ್ ಹೈಕಮಾಂಡ್ ನಿಂದ ಜಾರಕಿಹೊಳಿ ಸಹೋದರರಿಗೆ ವಾರ್ನಿಂಗ್ ವಿಚಾರ ಬೆಳಗಾವಿಯಲ್ಲಿ ಶಾಸಕ ಸತೀಶ್ ...

news

ಕಲುಷಿತ ನೀರು ಸರಬರಾಜು ಮಾಡುತ್ತಿರುವ ಪುರಸಭೆ ವಿರುದ್ಧ ಆಕ್ರೋಶ

ಒಂದೆಡೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದೆ. ಇನ್ನೊಂದು ಕಡೆ ಕಲುಷಿತ ನೀರನ್ನು ಸರಬರಾಜು ...

Widgets Magazine