ರೆಡ್ ಹ್ಯಾಂಡ್ ಆಗಿ ಹೇಗೆ ಸರಗಳ್ಳ ಸಿಕ್ಕಿಬಿದ್ದ ಗೊತ್ತಾ?

ಮೈಸೂರು, ಗುರುವಾರ, 6 ಡಿಸೆಂಬರ್ 2018 (16:53 IST)

ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ್ದ ಕಳ್ಳನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ರೆಡ್ ಹ್ಯಾಂಡ್ ಆಗಿ ಸರಗಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೈಸೂರಿನ ಇ.ಎಸ್.ಐ.  ಆಸ್ಪತ್ರೆ ಬಳಿ ಘಟನೆ ನಡೆದಿದೆ.

ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನ ನಡೆಸಿದ್ದಾನೆ.  ಚಂದ್ರಕಲಾ ಎಂಬುವರ ಬಳಿ ಇದ್ದ 60 ಗ್ರಾಂ ಮಾಂಗಲ್ಯ ಸರ ಎಗರಿಸೋಕೆ ಆರೋಪಿ ಮುಂದಾಗಿದ್ದಾನೆ.

ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ಸರವನ್ನು ಗಟ್ಟಿಯಾಗಿ ಚಂದ್ರಕಲಾ ಹಿಡಿದುಕೊಂಡಿದ್ದಾರೆ. ಆ ಬಳಿಕ ಸ್ಥಳೀಯರ ನೆರವಿನಿಂದ ಚಾಮರಾಜನಗರ ಗಾಜನೂರು ಮನೋಜ್ (35) ಎಂಬ ಆರೋಪಿ ಬಂಧನಕ್ಕೆ ಒಳಗಾಗಿದ್ದಾನೆ. ಈ ಕುರಿತು ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಂಬರೀಶ್ ಸ್ವಗ್ರಾಮದಲ್ಲಿ ತಿಥಿ ಕಾರ್ಯ

ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಅವರ ಸ್ವಗ್ರಾಮ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬಿ ತಿಥಿ ಕಾರ್ಯ ...

news

ನಾನು ಸಿಎಂ ಆಕಾಂಕ್ಷಿಯಲ್ಲ ಅಂತ ಪ್ರಭಾವಿ ಸಚಿವ ಹೇಳಿದ್ದೇಕೆ?

ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ನಾನು ಸಿಎಂ ಆಕಾಂಕ್ಷಿಯಲ್ಲ ಅಂತ ಪ್ರಭಾವಿ ಸಚಿವರು ...

news

ಶ್ರೀಗಳ ಭೇಟಿ ಬಳಿಕ ಡಿಸಿಎಂ ಪರಮೇಶ್ವರ್

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿಗಳನ್ನು ಭೇಟಿ ಅವರ ಆರೋಗ್ಯವನ್ನು ಡಿಸಿಎಂ ವಿಚಾರಿಸಿದರು.

news

’ನನ್ನ ಕಡೆಯಿಂದ ಕಾಂಗ್ರೆಸ್ ನವರಿಗೆ ಯಾವುದೇ ತೊಂದರೆ ಆಗಿಲ್ಲ- ಸಚಿವ ಎಚ್.ಡಿ.ರೇವಣ್ಣ

ಹಾಸನ : ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಹಾಸನದಲ್ಲಿ ಇಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ...

Widgets Magazine
Widgets Magazine