ಬೆಂಗಳೂರು ಮಳೆಗೆ ಅರ್ಚಕ ಸೇರಿ ಮೂವರು ಬಲಿ

ಬೆಂಗಳೂರು, ಶನಿವಾರ, 14 ಅಕ್ಟೋಬರ್ 2017 (08:37 IST)

ಬೆಂಗಳೂರು: ರಾಜಧಾನಿಯಲ್ಲಿ ವರುಣನ  ಅಬ್ಬರ ಮುಂದುವರಿದು ನಿನ್ನೆ ಸುರಿದ ಭಾರೀ ಮಳೆಗೆ ದೇವಸ್ಥಾನದ ಅರ್ಚಕ ಸೇರಿದಂತೆ ಮೂವರು ಬಲಿಯಾಗಿದ್ದಾರೆ.


 
ಕುರುಬರ ಹಳ್ಳಿ ವಾರ್ಡ್ ನ ಎಚ್ ಬಿಕೆ ಲೇಔಟ್ ಬಳಿಯ ದೇವಾಲಯದ ಅರ್ಚಕ ವಾಸುದೇವಾಚಾರ್ ರಾಜಾ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತದೇಹಕ್ಕಾಗಿ ಎನ್ ಡಿ ಆರ್ ಎಫ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದೆ.
 
ಇನ್ನೊಂದೆಡೆ ಲಗ್ಗೆರೆಯಲ್ಲಿ ರಾಜಾಕಾಲುವೆ ಬಳಿಯಲ್ಲೇ ಇದ್ದ ತಾಯಿ, ಮಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತರನ್ನು ಮೀನಾಕ್ಷಿ (57) ಮತ್ತು ಪುಷ್ಪಾ (22) ಎಂದು ಗುರುತಿಸಲಾಗಿದೆ. ಇದೇ ವೇಳೆ ಮಳೆಯಿಂದಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
 
ನಿನ್ನೆ ರಾತ್ರಿ ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಜನರು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ಸಮಸ್ಯೆಯಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೀಪಾವಳಿಗೆ ಪಟಾಕಿ ಹೊಡೆಯಲು ಇಲ್ಲಿ ಮೂರೇ ಗಂಟೆಗೆ ಪರ್ಮಿಟ್!

ನವದೆಹಲಿ: ದೀಪಾವಳಿ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪಟಾಕಿ ಸಿಡಿಸಬೇಕೇ? ಬೇಡವೇ ಎಂಬ ಬಗ್ಗೆ ಚರ್ಚೆ ...

news

ಹೇಮಮಾಲಿನಿ ಜೀವನಚರಿತ್ರೆಗೆ ಮುನ್ನುಡಿ ಬರೆದ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿ ಸಂಸದೆ, ನಟಿ ಹೇಮಮಾಲಿನಿ ಅವರ ಜೀವನ ಚರಿತ್ರೆ ಪುಸ್ತಕದ ರೂಪದಲ್ಲಿ ಬರಲಿದ್ದು, ಅದಕ್ಕೆ ...

news

ದೇವರ ಅಭಿಷೇಕಕ್ಕೆ ನೀರು ತರಲು ಹೋದ ಬಾಲಕ ನೀರುಪಾಲು

ಕಲಬುರ್ಗಿ: ದೇವರಿಗೆ ನೀರು ತರಲು ನದಿಗೆ ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ಅಫ್ಜಲ್ ಪುರ ತಾಲೂಕಿನ ...

news

ಆಧಾರ್ ನಿಂದ ಭಾರತಕ್ಕೆ 900 ಕೋಟಿ ಡಾಲರ್ ಉಳಿತಾಯ: ನಂದನ್ ನಿಲೇಕಣಿ

ಅಮೆರಿಕಾ: ಆಧಾರ್ ಕಾರ್ಡ್ ಯೋಜನೆಯಿಂದ ಭಾರತ ಸರ್ಕಾರಕ್ಕೆ 900 ಕೋಟಿ ಡಾಲರ್ ಉಳಿತಾಯವಾಗಿದೆ ಎಂದು ಆಧಾರ್ ...

Widgets Magazine
Widgets Magazine