ಅಂದು ಟಿಪ್ಪು ವೇಷಧರಿಸಿ ಇಂದು ವಿರೋಧಿಸುತ್ತಿರುವುದೇಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಂಗಳವಾರ, 24 ಅಕ್ಟೋಬರ್ 2017 (16:07 IST)

ಬೆಂಗಳೂರು:  ರಾಜ್ಯದಲ್ಲಿ ಟಿಪಪ್ಉ ಜಯಂತಿ ಆಚರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ವಿಚಾರ ಗದ್ದಲ ಎಬ್ಬಿಸುತ್ತಿದೆ. ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್, ಅಶೋಕ್ ಮೊದಲಾದವರು ಈ ಹಿಂದೆ ಟಿಪ್ಪು ವೇಷಧಾರಿಗಳಾಗಿ ಜಯಂತಿ ಆಚರಣೆ ಮಾಡಿದ್ದು ಏನೆ ಎಂದು ಪ್ರಶ್ನಿಸಿದ್ದಾರೆ.


ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿಯವರದ್ದು ಎರಡು ನಾಲಿಗೆ ಅಲ್ಲವೇ? ಜನ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇ ಎಂದರು.

ಈ ಹಿಂದೆ ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು ಅಲ್ಲಾಹನ ಮೇಲಾಣೆ  ನಾನು ಮತ್ತೆ ಬಿಜೆಪಿ ಸೇರುವುದಿಲ್ಲ ಎಂದು ಕೂಗಿದ್ದೇ ಕೂಗಿದ್ದು. ಇಂತಹ ರಾಜಕೀಯ ಇಬ್ಬಂದಿತನ ಜನರಿಗೂ ಗೊತ್ತಾಗುತ್ತದೆ. ಆಗೊಂದು, ಈಗೊಂದು ನಾಟಕವಾಡುವ ಯಡಿಯೂರಪ್ಪ ಅವರ ಮಾತಿಗೆ ಏನಾದರೂ ಕಿಮ್ಮತ್ತು ಇದೆಯೇ ಎಂದರು.

ಸಿಎಂ ಆಗಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಯಾಗಿ ಅಶೋಕ್ ಟಿಪ್ಪು ವೇಷಧಾರಿಗಳಾಗಿಯೇ ಜಯಂತಿ ಆಚರಿಸಿದ್ದರು. ಟಿಪ್ಪು ಕುರಿತಾದ ಪುಸ್ತಕಕ್ಕೆ ಮುನ್ನುಡಿ ಬರೆದು ಶೆಟ್ಟರ್ ಅವರು ಟಿಪ್ಪುವನ್ನು ಹಾಡಿಹೊಗಳಿದ್ದಾರೆ. ಅವರೆಲ್ಲ ಈಗ ವಿರೋಧ ಮಾಡುತ್ತಿರುವುದು ರಾಜಕೀಯ ಪ್ರೇರಿತ ಅಷ್ಟೇ ಎಂದರು. ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿ ನಾಯಕರು ಹಿಂದೂ ಮುಸ್ಲಿಂರ ನಡುವೆ ಬೆಂಕಿ ಹಚ್ವುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಜ್‌ಮಹಲ್‌‌ನ್ನು ತಾಜ್‌ಮಂದಿರ್‌ನೆಂದು ಘೋಷಿಸಿ: ಬಿಜೆಪಿ ಸಂಸದ

ಅಯೋಧ್ಯೆ: ತಾಜ್ಮಹಲ್ ವಿರುದ್ಧದ ವಿವಾದ ಅಂತ್ಯವಾಗುವಂತೆ ಕಾಣುತ್ತಿಲ್ಲ. ಇದೀಗ ಬಿಜೆಪಿ ನಾಯಕ ವಿನಯ್ ...

news

ಟೆರರ್ ಫಂಡಿಂಗ್ ಕೇಸ್: ಸೈಯದ್ ಸಲಾವುದ್ದೀನ್ ಪುತ್ರ ಯೂಸುಫ್ ಅರೆಸ್ಟ್

ನವದೆಹಲಿ: 2011ರ ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ...

news

ನಾಳೆ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಣೆ

ನವದೆಹಲಿ: ನಾಳೆ ಕೇಂದ್ರ ಚುನಾವಣೆ ಆಯೋಗ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಲಿದೆ ಎಂದು ಆಯೋಗದ ...

news

ಅವರು ಕೇಳಿದಾಗ ನಾನು ಒಪ್ಪಬಾರದಿತ್ತು: ಟಿ.ಎನ್.ಸೀತಾರಾಂ

ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಸಾಕ್ಷ್ಯಚಿತ್ರಕ್ಕೆ ಕೋಟಿ ರೂ. ಖರ್ಚು ಮಾಡುವ ಅಗತ್ಯವೇನಿತ್ತು ಎಂದು ...

Widgets Magazine
Widgets Magazine