ಮಂಡ್ಯದಲ್ಲಿ ಅಂಬಿಗೆ ನುಡಿನಮನ ನಾಳೆ

ಮಂಡ್ಯ, ಶುಕ್ರವಾರ, 11 ಜನವರಿ 2019 (17:15 IST)

ಕಳೆದ ನವೆಂಬರ್ ನಲ್ಲಿ ವಿಧಿವಶರಾದ ಕಲಿಯುಗ ಕರ್ಣ, ರೆಬಲ್ ಸ್ಟಾರ್ ಅಂಬರೀಷ್ ಅವರ ಶ್ರದ್ಧಾಂಜಲಿ ಸಭೆ ಹಾಗೂ ಕಾರ್ಯಕ್ರಮವನ್ನ ಅಂಬಿ ಹುಟ್ಟೂರು ಮಂಡ್ಯದಲ್ಲಿ ಆಯೋಜಿಸಲಾಗಿದೆ.

ಜನವರಿ 12ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಸಮಾವೇಶಕ್ಕೆ ಅಂಬಿ ಕುಟುಂಬ ಸೇರಿದಂತೆ ರಾಜಕೀಯ ನಾಯಕರು, ಸಿನಿ ದಿಗ್ಗಜರು ಭಾಗವಹಿಸುತ್ತಿದ್ದಾರೆ.

ನಾಳೆ ಸಕ್ಕರೆ ನಾಡು ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ನಟ ದಿವಂಗತ ಅಂಬರೀಷ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸುಮಾರು ಒಂದು ಲಕ್ಷ ಹೆಚ್ಚು ಅಭಿಮಾನಿಗಳನ್ನು ಸೇರಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಈ ಕಾರ್ಯಕ್ರಮ ರೂಪಿಸಿದೆ. ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ.

ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಭಾಗವಹಿಸಲಿದ್ದು, ಇವರ ಜೊತೆಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಕೆ.ಶಿವಕುಮಾರ್, ಡಿ.ಸಿ.ತಮ್ಮಣ್ಣ ಸೇರಿದಂತೆ ಸ್ಯಾಂಡಲ್ ವುಡ್ ನಟರಾದ ದರ್ಶನ್, ಸುದೀಪ್, ಯಶ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಭಾಗವಹಿಸಲಿದ್ದಾರೆ. ಕನಗನಮರಡಿ ದುರಂತದಲ್ಲಿ ಸಾವನ್ನಪ್ಪಿದ 30 ಮಂದಿ ಹಾಗೂ ಅಂಬಿ ಮೃತಪಟ್ಟಾಗ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಅಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಡಿಯಲ್ಲಿ ಹೆಚ್ಚಿನ ಕಾಡಾನೆಗಳ ಹಾವಳಿ

ಗಡಿ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದೆ.

news

ಹಾಡ ಹಗಲೇ ಅಂಗಡಿಯಲ್ಲಿ ಹಣ ಕದ್ದ ಖದೀಮರು!

ಅಂಗಡಿಯೊಂದಕ್ಕೆ ನುಗ್ಗಿ ಹಾಡ ಹಗಲಲ್ಲೇ ಖದೀಮರು ಹಣ ಎಗರಿಸಿರುವ ಘಟನೆ ನಡೆದಿದೆ.

news

ಬಿ.ಎಂ.ರಸ್ತೆ ಒತ್ತುವರಿ ಕಟ್ಟಡ ತೆರವಿಗೆ ಮುಹೂರ್ತ ನಿಗದಿ?

ಜನನಿಬಿಡ ಪ್ರದೇಶವಾಗಿರುವ ಬಿ.ಎಂ.ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ತೆರವಿಗೆ ಕ್ಷಣಗಣನೆ ...

news

ಚಿರತೆ ದಾಳಿಗೆ ಬಲಿಯಾದದ್ದೇನು ಗೊತ್ತಾ?

ಹಂತಕ ಚಿರತೆ ದಾಳಿಗೆ ಸಾವಿರಾರು ರೂಪಾಯಿ ಮೌಲ್ಯದ ನಾಲ್ಕು ಕುರಿಗಳು ಬಲಿಯಾದ ಘಟನೆ ನಡೆದಿದೆ.