ಅರಮನೆಯಲ್ಲಿ ಗರ್ಭವತಿ ತ್ರಿಷಿಕಾ ದೇವಿ ಒಡೆಯರ್ ಸೀಮಂತ ಶಾಸ್ತ್ರ

ಮೈಸೂರು, ಶುಕ್ರವಾರ, 29 ಸೆಪ್ಟಂಬರ್ 2017 (23:01 IST)

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮುಗಿಯುತ್ತಿದ್ದಂತೆ ಅರಮನೆ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ವಿಜಯದಶಮಿ ಮುಗಿದ ಮರುದಿನವೇ ತ್ರಿಷಿಕಾ ದೇವಿ ಒಡೆಯರ್ ನಡೆಯಲಿದೆ.


ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಒಡೆಯರ್ ಸದ್ಯ ಗರ್ಭವತಿ. ಹೀಗಾಗಿ ಬೆಂಗಳೂರಿನ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ದಸರಾ ಅಂಗವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇತ್ತೀಚೆಗಷ್ಟೆ ಮೈಸೂರಿಗೆ ಆಗಮಿಸಿದ್ದರು. ನಾಳೆ ವಿಜೃಂಭಣೆಯ ದಸರಾ ಮಹೋತ್ಸವಕ್ಕೆ ತೆರೆಬೀಳಲಿದ್ದು, ಮಾರನೆ ದಿನ ಅಂದರೆ ಅ. 1ರಂದು ಅರಮನೆಯಲ್ಲಿ ತ್ರಿಷಿಕಾ ದೇವಿ ಒಡೆಯರ್ ಸಿಮಂತ ಕಾರ್ಯ ನಡೆಯಲಿದೆ.

ರಾಜವಂಶಸ್ಥರು ಹಾಗೂ ಸಂಬಂಧಿಕರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಪ್ರಮೋದಾ ದೇವಿ ಒಡೆಯರ್ ಸೇರಿದಂತೆ ತ್ರಿಷಿಕಾ ದೇವಿಯವರ ಕುಟುಂಬ ಸದಸ್ಯರು, ಗಣ್ಯರು ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜಮನೆತನ ಮೂಲಗಳು ತಿಳಿಸಿವೆ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೊಮ್ಮಕಳ ಜತೆ ಏರ್ ಶೋ ವೀಕ್ಷಿಸಿ ಖುಷಿಪಟ್ಟ ಸಿಎಂ

ಮೈಸೂರು: ದಸರಾ ಮಹೋತ್ಸವದ ಸಂದರ್ಭದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಆಗಸದಲ್ಲಿ ತಮ್ಮ ಶಕ್ತಿ ...

news

ಜಂಬೂಸವಾರಿ ವೇಳೆ ಹಳೆಯ ಕಟ್ಟಡ ಮೇಲಿಂದ ವೀಕ್ಷಣೆ ನಿಷೇಧ

ಮೈಸೂರು: ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಪ್ರಮುಖ ಆಕರ್ಷಣೆ ಸವಾರಿ ಸಹ ನಾಳೆಯೇ ...

news

ಸೋರುತಿಹುದು ಅಂಬಾವಿಲಾಸ ಅರಮನೆಯ ಮಾಳಿಗೆ…!

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಇದರ ಮಧ್ಯೆ ಮೂರು ...

news

ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳ: ಸಿಎಂ

ಬೆಂಗಳೂರು: ದಸರಾ ಹಬ್ಬದ ಅಂಗವಾಗಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರಕಾರಿ ನೌಕಕರಿಗೆ ಬಂಪರ್ ಕೊಡುಗೆ ...

Widgets Magazine
Widgets Magazine