Widgets Magazine
Widgets Magazine

ಶಾಂತಿಭಂಗ ಮಾಡುತ್ತಿದ್ದ ಇಬ್ಬರು ಆರೋಪಿಗಳ ಗಡಿಪಾರು

ಹುಬ್ಬಳ್ಳಿ, ಗುರುವಾರ, 21 ಸೆಪ್ಟಂಬರ್ 2017 (18:41 IST)

Widgets Magazine

ಹುಬ್ಬಳ್ಳಿ: ಸಮಾಜದ ಸ್ವಾಸ್ಥ್ಯ, ಸಮಾಜ ಘಾತಕ ಚಟುವಟಿಕೆಯಲ್ಲಿ ಭಾಗಿಯಾಗಿ ಶಾಂತಿ‌ ಕದಡುತ್ತಿದ್ದ ಆರೋಪದ ಮೇಲೆ ಇಬ್ಬರು ಕೊಲೆ ಆರೋಪಿಗಳನ್ನು ಗಡಿಪಾರು ಮಾಡಿ ಹುಬ್ಬಳ್ಳಿ-ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್  ಆದೇಶ ಹೊರಡಿಸಿದ್ದಾರೆ.


ಮುಕ್ತುಂ ಸೊಗಲದ ಹಾಗೂ ಇರ್ಫಾನ್ ಹಂಚಿನಾಳ ಗಡಿಪಾರಾದ ಆರೋಪಿಗಳು. ಇವರು ಸಮಾಜದ ಶಾಂತಿಭಂಗವನ್ನುಂಟು ಮಾಡುವ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗಡಿಪಾರಿಗೆ ಆದೇಶ ನೀಡಲಾಗಿದೆ. ಮುಕ್ತುಂ ಸೊಗಲದ್ ಕೊಲೆ ಹಾಗೂ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದು, ಸೆ. 14ರಂದು ಜಾಮೀನಿನ ಮೇಲೆ ಹೊರಬಂದಿದ್ದ.‌ ಧಾರವಾಡ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರೊಂದಿಗೆ ಜೈಲಿನಿಂದ ಮನೆಯವರೆಗೂ ತೆರೆದ ಕಾರಿನಲ್ಲಿ ರೋಡ್ ಶೋ ಮಾಡಿದ್ದ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಇನ್ನು ಇರ್ಫಾನ್ ಧಾರವಾಡದಲ್ಲಿ ನಡೆದಿದ್ದ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಮತ್ತೆ ಹಲವು ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪವಿದೆ.‌ ಹೀಗಾಗಿ ಈತನನ್ನು ಗಡಿಪಾರು  ಮಾಡಿ ಆದೇಶ ನೀಡಿದ್ದಾರೆ. ಪೊಲೀಸ್ ಕಮೀಷನರ್ ಈ ನಡೆಯನ್ನು ನಗರದ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕಾನೂನು ಬಾಹಿರ ಚಟುಚಟಿಕೆಯಲ್ಲಿ ಭಾಗಿಯಾಗಿರುವವರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇಂಜಿನಿಯರಿಂಗ್ ವಿದ್ಯಾರ್ಥಿ ಅನುಮಾನಸ್ಪದ ಸಾವು...?

ಕಲಬುರ್ಗಿ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಪಿಡಿಎ ...

news

ಬುರ್ಖಾ ತೊಟ್ಟು ಡಾನ್ಸ್ ಮಾಡಿದ ಯುವತಿ: ಮುಸ್ಲಿಂ ಮೌಲ್ವಿಗಳ ಆಕ್ರೋಶ

ಮಂಗಳೂರು: ನಗರದ ಶಾಪಿಂಗ್ ಮಾಲ್‌ವೊಂದರಲ್ಲಿ ಬುರ್ಖಾ ಧರಿಸಿದ ಯುವತಿಯೊಬ್ಬಳು ತನ್ನ ಮುಸ್ಲಿಂ ...

news

ರಾಜ ವೈಭವದ ಖಾಸಗಿ ದರ್ಬಾರ್ ಸಂಭ್ರಮ ಹೇಗಿತ್ತು…?

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಇತ್ತ ಅಂಬಾವಿಲಾಸ ಅರಮನೆಯಲ್ಲಿ ...

news

ಪ್ರೇಮಿಯ ಗುಪ್ತಾಂಗ ಕತ್ತರಿಸಿ ಹಾಕಿದ ಹಾಟ್ ಪ್ರಿಯತಮೆ

ಕೊಚ್ಚಿ: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು, ಮಲ್ಲಪುರಂ ನಗರದ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬನ ...

Widgets Magazine Widgets Magazine Widgets Magazine