ಫೇಸ್‌ಬುಕ್ ಗೆಳೆಯನಿಂದ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿ

ಬೆಂಗಳೂರು, ಶನಿವಾರ, 30 ಸೆಪ್ಟಂಬರ್ 2017 (18:14 IST)

ಶಾಲೆಗೆ ತೆರಳುತ್ತಿದ್ದ 15 ವರ್ಷದ ಬಾಲಕಿಯನ್ನು ಅಪಹರಿಸಿದ ಆಕೆಯ ಫೇಸ್‌ಬುಕ್ ಸ್ನೇಹಿತನೊಬ್ಬ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಆಕೆಯ ಫೇಸ್‌ಬುಕ್ ಗೆಳೆಯ ಮತ್ತು ಆತನ ಸ್ನೇಹಿತ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಶಾಲಾ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಆಳಂದಿ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಇಬ್ಬರು ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
 
ಕಳೆದ ಒಂದು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಬಾಲಕಿಗೆ ಯುವಕನೊಬ್ಬನ ಪರಿಚಯವಾಗಿತ್ತು. ನಂತರ ಚಾಟ್ ಹಾಗೇ ಸುತ್ತಾಟ ಮುಂದುವರಿದಿತ್ತು. ಗುರುವಾರದಂದು ಬಾಲಕಿ ಬಸ್‌ಗಾಗಿ ಕಾಯುತ್ತಾ ನಿಂತಿರುವಾಗ ಅಲ್ಲಿಗೆ ಬಂದ ಆರೋಪಿ 23 ವರ್ಷ ವಯಸ್ಸಿನ ಮಹೇಶ್ ಬಿಡವೆ, ಕಾರಿನಲ್ಲಿ ಬರುವಂತೆ ಒತ್ತಾಯಿಸಿದ್ದಾನೆ.
 
ಆದರೆ, ಬಾಲಕಿ ನಿರಾಕರಿಸಿ ಬಸ್‌ನಲ್ಲಿ ತೆರಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಮಹೇಶ್ ಬಸ್‌ನ್ನು ಹಿಂಬಾಲಿಸಿದ್ದಾನೆ. ಬಸ್ ಶಿವಾಜಿನಗರ್ ಬಸ್‌ನಿಲ್ದಾಣ ತಲುಪುತ್ತಿದ್ದಂತೆ ಕೆಳಗಿಳಿದ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕೂರಿಸಿಕೊಂಡು ಆಕೆಯನ್ನು ಆಳಂದಿ ಲಾಡ್ಜ್‌ಗೆ ಕರೆದುಕೊಂಡು ಬಂದಿದ್ದಾನೆ. ಇಬ್ಬರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅನೈಸರ್ಗಿಕ ಸೆಕ್ಸ್‌ಗಾಗಿ ಒತ್ತಾಯಿಸಿದ್ದಾರೆ. ತದನಂತರ ಬಾಲಕಿಯನ್ನು ಆಕೆಯ ಮನೆಗೆ ತಲುಪಿಸಿದ್ದಾರೆ.  
 
ಅತ್ಯಾಚಾರಕ್ಕೊಳಗಾದ ಬಾಲಕಿ ತನ್ನ ಪೋಷಕರೊಂದಿಗೆ ಸಂಗಾವಿ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ಕೂಡಲೇ ಆರೋಪಿ ಮಹೇಶ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಹೇಶ್ ಗೆಳೆಯ ಪರಾರಿಯಾಗಿದ್ದು ಆತನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ರದ್ದುಗೊಳಿಸಿದ ಗೋಏರ್‌ ಸಂಸ್ಥೆ

ಬೆಂಗಳೂರು: ಕನ್ನಡ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ಗೋಏರ್‌ ವಿಮಾನಯಾನ ಸಂಸ್ಥೆ ಪ್ರಯಾಣದ ಟಿಕೆಟ್ ...

news

ಬಾಲ್ಯದ ಗೆಳೆಯನ ಜತೆ ಗೊಂಬೆ ನೇಹಾ ಗೌಡ ನಿಶ್ಚಿತಾರ್ಥ

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ನೇಹಾಗೌಡ ನಿಶ್ಚಿತಾರ್ಥ ಅವರ ಬಾಲ್ಯದ ಗೆಳೆಯ ಚಂದನ್ ಜತೆ ...

news

ಬುಲೆಟ್ ರೈಲು ಯೋಜನೆ ನೋಟು ನಿಷೇಧದಂತೆ ವಿನಾಶಕಾರಿ: ಚಿದಂಬರಂ

ನವದೆಹಲಿ: ಕೇಂದ್ರ ಸರಕಾರದ ಬುಲೆಟ್ ರೈಲು ಯೋಜನೆ ಕೂಡಾ ನೋಟು ನಿಷೇಧದಂತಹ ನಡೆಯಾಗಿದ್ದು ಸರ್ವನಾಶ ಮಾಡಲಿದೆ. ...

news

ತಮಿಳುನಾಡು ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

ನವದೆಹಲಿ: ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಐವರು ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ

Widgets Magazine
Widgets Magazine