ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ

ಕಲಬುರ್ಗಿ, ಮಂಗಳವಾರ, 11 ಸೆಪ್ಟಂಬರ್ 2018 (20:38 IST)

ರಾಜ್ಯ ಸಮ್ಮಿಶ್ರ ಸರಕಾರದ್ದು ಅನೈತಿಕ ಮದುವೆ ಎಂದು ಕೇಂದ್ರದ ಸಚಿವ ವಾಗ್ದಾಳಿ ನಡೆಸಿದ್ದಾರೆ.
 
ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ ಜಿಗಜಿಣಗಿ, ರಾಜ್ಯದ ಸಮ್ಮಿಶ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಲಾಗಿದೆ. ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ದಕ್ಷಿಣ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆ ಇಲ್ಲದೇ ಇದ್ದರೂ ಇತ್ತ ಗಮನ ಹರಿಸುತ್ತಿಲ್ಲ.

ಈ ಕಡೆ ಬರಲು ಸಿಎಂಗೇನು ದಾಡಿ ಬಡಿದಿದೆಯಾ? ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಆಪರೇಷನ್ ಕಮಲ ವಿಚಾರ ಕುರಿತು ಪ್ರತಿಕ್ರಿಯಿಸಿದ್ದು, ಬಿಜೆಪಿ ಆಪರೇಷನ್ ಕಮಲ ಮಾಡ್ತಿಲ್ಲ. ಅವರಾಗಿಯೇ ಬಿಜೆಪಿಗೆ ಬರ್ತಿದ್ದಾರೆ.
ಸರಿಯಾಗಿ ಕೆಲಸ ಮಾಡದ ಹಿನ್ನಲೆ ಸತೀಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.

 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ

ಬಿ ಆರ್ ಟಿ ಹುಲಿಯೋಜನೆ ವಿಭಾಗದಿಂದ ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆ ನಡೆಯಿತು.

news

ಬಸ್ ಪ್ರಯಾಣ ದರ ಶೇ. 18ರಷ್ಟು ಏರಿಕೆ: ಗ್ರಾಹಕರ ಜೇಬಿಗೆ ಬಿತ್ತು ಹೊರೆ

ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ. ಬಸ್ ಪ್ರಯಾಣ ದರದಲ್ಲಿ ಶೇ.18ರಷ್ಟು ಏರಿಕೆ ಮಾಡಿ ಆಗಿದೆ. ಈ ...

news

ಪೊಲೀಸರ ಭರ್ಜರಿ ಕಾರ್ಯಾಚರಣೆ: ಖತರ್ನಾಕ್ ಕಳ್ಳನ ಬಂಧನ

45 ಸುಲಿಗೆ ಪ್ರಕರಣಗಳಲ್ಲಿ ಬೇಕಿದ್ದ ಖತರ್ನಾಕ್ ಕಳ್ಳನ ಬಂಧನ ಮಾಡಲಾಗಿದೆ.

news

ಮಾಧ್ಯಮದವರಿಗೆ ಅವಮಾನಿಸಿದ ಕಾರ್ಮಿಕ ಸಚಿವ

ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಮಾಧ್ಯಮದವರಿಗೆ ಕಾರ್ಮಿಕ ಸಚಿವ ಅವಮಾನಿಸಿದ ಘಟನೆ ನಡೆದಿದೆ.

Widgets Magazine
Widgets Magazine