ಜನರಕ್ಷಾ ಯಾತ್ರೆ: ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿ

ಮಂಗಳೂರು, ಬುಧವಾರ, 4 ಅಕ್ಟೋಬರ್ 2017 (08:44 IST)

ಮಂಗಳೂರು: ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಾಲು ಸಾಲು ಹತ್ಯೆ ಖಂಡಿಸಿ ಕಣ್ಣೂರಿನ ಪಯ್ಯನೂರಿನಲ್ಲಿ ಹಮ್ಮಿಕೊಂಡಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿನ್ನೆ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.


ರಾತ್ರಿ ಸುಮಾರು 11.45ರ ಹೊತ್ತಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನ ಸಂಸದ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದ್ರು. ಈ ವೇಳೆ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಬಳಿಕ ಯೋಗಿ ಅಲ್ಲಿಂದ ನೇರವಾಗಿ ರಸ್ತೆ ಮೂಲಕ ಕೇರಳದ ಕಣ್ಣೂರಿಗೆ ತೆರಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ನಿನ್ನೆ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಫೈರ್ ಬ್ರಾಂಡ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಂದು ನಡೆಯಲಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ಇಂದು ಕೇಚೆರಿಯಿಂದ ಕಣ್ಣೂರುವರೆಗೆ ಜನರಕ್ಷಾ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಜನರಕ್ಷಾ ಯಾತ್ರೆ ಕೇರಳದ ವಿವಿಧ ಭಾಗದಲ್ಲಿ ಸಂಚರಿಸಿ, ಅ. 17ರಂದು ತಿರುವನಂತಪುರಂನಲ್ಲಿ ಕೊನೆಗೊಳ್ಳಲಿದೆ.ಇದರಲ್ಲಿ ಇನ್ನಷ್ಟು ಓದಿ :  
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಜನರಕ್ಷಾ ಯಾತ್ರ Bjp Up Cm Janaraksha Yatra Yogi Adithyanath

ಸುದ್ದಿಗಳು

news

ಯಕ್ಷಲೋಕದ ಮಹಾನ್ ಪ್ರತಿಭೆ ಚಿಟ್ಟಾಣಿ ಹೆಗಡೆ ಇನ್ನಿಲ್ಲ

ಬೆಂಗಳೂರು: ಗಂಡು ಕಲೆ ಯಕ್ಷಗಾನದ ರಾಜಕುಮಾರ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ...

news

ಯಕ್ಷಗಾನದ ಮೇರು ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗಡೆ ವಿಧಿವಶ

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಯಕ್ಷಗಾನದ ಮೇರು ಪ್ರತಿಭೆ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ...

news

ಬಿಜೆಪಿಯ ವಿಸ್ತಾರಕ, ಕಾಂಗ್ರೆಸ್‌ನ ಮನೆ ಮನೆ ಕಾರ್ಯಕ್ರಮಕ್ಕೆ ಜೆಡಿಎಸ್ ಸೆಡ್ಡು

ಬೆಂಗಳೂರು: ಬಿಜೆಪಿಯ ವಿಸ್ತಾರಕ, ಕಾಂಗ್ರೆಸ್‌ನ ಮನೆ ಮನೆ ಕಾರ್ಯಕ್ರಮಕ್ಕೆ ಜೆಡಿಎಸ್ ಪಕ್ಷ ಸೆಡ್ಡು ಹೊಡೆಯಲು ...

news

ಓಟ್ ಹಾಕ್ತಿವಿ ಅಂತ ಆಣೆ ಮಾಡಿ: ಕರುಣಾಕರ ರೆಡ್ಡಿ ಫರ್ಮಾನ್

ಬಳ್ಳಾರಿ: ಮಾಜಿ ಸಚಿವ, ಬಿಜೆಪಿ ಮುಖಂಡ ಕರುಣಾಕರ್ ರೆಡ್ಡಿ ಮತದಾರರಿಂದ ಆಣೆ ಪ್ರಮಾಣ ಮಾಡಿಸಿಕೊಂಡ ವಿಚಿತ್ರ ...

Widgets Magazine
Widgets Magazine