ಪ್ರಧಾನಿ ಮೋದಿ ಆಗಮನ ಹಿನ್ನಲೆ: ಖುದ್ದು ತಯಾರಿ ಪರಿಶೀಲಿಸಿದ ಧರ್ಮಾಧಿಕಾರಿ

ಮಂಗಳೂರು, ಭಾನುವಾರ, 29 ಅಕ್ಟೋಬರ್ 2017 (08:22 IST)

ಮಂಗಳೂರು: ಪ್ರಧಾನಿ ಮೋದಿ ಇಂದು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ಪೂರ್ವ ತಯಾರಿ ಬಗ್ಗೆ ಖುದ್ದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರಿಶೀಲನೆ ನಡೆಸಿದರು.


 
ಧರ್ಮಸ್ಥಳದ ಸುತ್ತ ಭದ್ರತಾ ಕಮಾಂಡೋಗಳು ಮತ್ತು ಬಾಂಬ್ ಪರಿಶೀಲನಾ ಪಡೆ ಭಾರೀ ತಪಾಸಣೆ ನಡೆಸುತ್ತಿದೆ. ಅತ್ತ ಮೋದಿ ಪಾಲ್ಗೊಳ್ಳಲಿರುವ ಸಮಾವೇಶ ನಡೆಯಲಿರುವ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಯಾರಿ ಬಗ್ಗೆ ಖುದ್ದು ವೀರೇಂದ್ರ ಹೆಗ್ಗಡೆ ಪರಿಶೀಲನೆ ನಡೆಸಿದರು.
 
ಸಾರ್ವಜನಿಕರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಆದರೆ ಬೆಳಿಗ್ಗೆ 10 ಗಂಟೆಗೆ ಮೊದಲು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಮೀಸಲಾದ ಆಸನದಲ್ಲಿ ಕೂರಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಲ್ಲದೆ, ನರೇಂದ್ರ ಮೋದಿಯವರ ಬಗ್ಗೆ ಜನರಿಗೆ ವಿಶೇಷ ಅಭಿಮಾನವಿದೆ. ಹಾಗಾಗಿ ಈ ಕಾರ್ಯಕ್ರಮವನ್ನು ತಾವೂ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
 
ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಧಾನಿ ನಂತರ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಆಗಮನದ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ದಂಡೇ ಆಗಮಿಸಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಇಂದಿನ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸಾಥ್ ಕೊಡಲ್ಲ!

ಬೆಂಗಳೂರು: ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಹಲವು ಕಾರ್ಯಕ್ರಮಗಳಲ್ಲಿ ...

news

ಬೆಳಗ್ಗೆ ನಿಯತ್ತಿನ ಆಟೋ ಚಾಲಕ… ರಾತ್ರಿಯಾಗುತ್ತಿದ್ದಂತೆ ಏನ್ ಮಾಡ್ತಿದ್ದ ಗೊತ್ತಾ…?

ಮೈಸೂರು: ಈಗಿನ ಕಾಲದಲ್ಲಿ ಯಾರನ್ನ ನಂಬೋದು ಬಿಡೋದು ಅನ್ನೋದೆ ತಿಳಿಯುತ್ತಿಲ್ಲ. ಬೆಳಗ್ಗೆ ಆಟೋರಿಕ್ಷಾ ...

news

ಹರಕೆ ತೀರಿಸಿದ ಭಕ್ತ… ಚಾಮುಂಡೇಶ್ವರಿ ಗರ್ಭಗುಡಿಗೆ ಚಿನ್ನದಪಟ್ಟಿ ಬಾಗಿಲು

ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಗರ್ಭಗುಡಿ ಬಾಗಿಲಿಗೆ ಚಿನ್ನದ ಪಟ್ಟಿ ಬಾಗಿಲು ಅರ್ಪಿಸಲು ಹರಕೆ ...

news

ಸ್ಮಾರ್ಟ್ ಫೋನ್ ಮಾರಾಟದಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಅಮೆರಿಕಾಗಿಂತಲೂ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟ ಮಾಡಿರುವ ಪಟ್ಟಿಯಲ್ಲಿ ಭಾರತ ವಿಶ್ವದ ...

Widgets Magazine
Widgets Magazine