Widgets Magazine
Widgets Magazine

ನಮ್ಮದು ರೈತ ಪರ ಸರ್ಕಾರ, ಬಿಜೆಪಿಯವರಂತೆ ಗೋಲಿಬಾರ್ ಮಾಡಿಲ್ಲ: ಸಿಎಂ

ಬೆಂಗಳೂರು, ಸೋಮವಾರ, 25 ಸೆಪ್ಟಂಬರ್ 2017 (14:09 IST)

Widgets Magazine

ಬಿಜೆಪಿ ಸರಕಾರದ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್‌ನಲ್ಲಿ ಹಲವರನ್ನು ಬಲಿ ತೆಗೆದುಕೊಂಡಿತ್ತು. ಆದರೆ ನಮ್ಮ ಸರಕಾರದ ಅವಧಿಯಲ್ಲಿ ಅಂತಹ ಯಾವುದೇ ದೌರ್ಜನ್ಯವಾಗಿಲ್ಲ ಎಂದು ಹೇಳಿದ್ದಾರೆ. 
ಬಿಜೆಪಿ ಸರಕಾರ ರೈತರ ಮೇಲೆ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿತ್ತು. ಹಲವಾರು ರೈತ ವಿರೋಧಿ ತೀರ್ಮಾನಗಳನ್ನು ತೆಗೆದುಕೊಂಡಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
 
ಕೃಷಿ ಸಚಿವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಯನ್ನು ಸರಕಾರ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಕೃಷಿಭಾಗ್ಯ, ಕೃಷಿ ಹೊಂಡ ಯೋಜನೆ ದೇಶದಲ್ಲಿಯೇ ಮೊದಲನೆಯದಾಗಿದೆ ಎಂದು ತಿಳಿಸಿದ್ದಾರೆ.
 
ನಮ್ಮ ಸರಕಾರ ರೈತರ ಪರ ಸರಕಾರವಾಗಿದೆ. ಕೆಲವರು ರೈತರಿಗೆ ಏನು ಮಾಡದಿದ್ದರೂ ತಾವೇ ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಾರೆ. ನಾನು ಉಳುಮೆ ಮಾಡಿದ್ದೇನೆ, ನಾನೂ ಕೂಡಾ ರೈತರ ಮಗನೇ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿದ್ಯಾರ್ಥಿಯನ್ನ ಬಲಿ ಪಡೆದ ಸೆಲ್ಫಿ ಹುಚ್ಚು..?!

ಎನ್`ಸಿಸಿ ಕ್ಯಾಂಪ್`ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲಾದ ಘಟನೆ ಬೆಂಗಳೂರು ಹೊರವಲಯದ ಕನಕಪುರ ಬಳಿಯ ...

news

ಜಾರಿ ನಿರ್ದೇಶನಾಲಯದಿಂದ ಕಾರ್ತಿ ಚಿದಂಬರಂ ಅಕೌಂಟ್ಸ್,ಆಸ್ತಿ ಜಪ್ತಿ

ನವದೆಹಲಿ: ಆಸ್ತಿ ಮಾರಾಟಕ್ಕೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ...

news

ಪಿಎಂ ಮೋದಿ, ಯೋಗಿ ಅವಧಿಯಲ್ಲಿ ಕೋಮುಗಲಭೆಗಳಲ್ಲಿ ಹೆಚ್ಚಳ: ಮುಲಾಯಂ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಸರಕಾರದ ...

news

ತಿರುಪತಿ ತಿಮ್ಮಪ್ಪನಿಗೆ 1008 ಬಂಗಾರದ ನಾಣ್ಯಗಳ ಹಾರ ಸಮರ್ಪಿಸಿದ ಭಕ್ತ

ದೇಶದ ಅತ್ಯಂತ ಶ್ರೀಮಂತ ದೈವ ತಿರುಪತಿ ತಿಮ್ಮಪ್ಪನಿಗೆ ಅನಿವಾಸಿ ಭಾರತೀಯನೊಬ್ಬ ಬಂಗಾರದ ನಾಣ್ಯಗಳ ಹಾರವನ್ನ ...

Widgets Magazine Widgets Magazine Widgets Magazine