‘ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ'-ಜನಾರ್ದನ ರೆಡ್ಡಿ ಹೀಗ್ಯಾಕೆ ಹೇಳಿದ್ರು ಗೊತ್ತಾ...?

ಬೆಂಗಳೂರು, ಸೋಮವಾರ, 22 ಜನವರಿ 2018 (15:06 IST)

ಬೆಂಗಳೂರು : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ‘ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ. ಅಲ್ಲಿಯ ಪ್ರತಿಯೊಬ್ಬ ನಾಗರಿಕನು ಒಬ್ಬೊಬ್ಬ ಜನಾರ್ದನ ರೆಡ್ಡಿಯಾಗಿ ಶ್ರೀರಾಮುಲು  ಅವರ  ಕೈ ಬಲ ಪಡಿಸಿ ಬಳ್ಳಾರಿಯ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುತ್ತೇವೆ ‘ಎಂದು ಹೇಳಿದ್ದಾರೆ.


ಬೆಂಗಳೂರಿನ ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ ಅವರು ಸಿಎಂ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಿಎಂ ಸಿದ್ದರಾಮಯ್ಯ ಅವರು ಬಳ್ಳಾರಿ ಶಾಸಕರಾದ ಆನಂದ್ ಸಿಂಗ್ ಹಾಗು ನಾಗೇಂದ್ರ ಅವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಹುನ್ನಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅವರ ಕನಸು ಕನಸಾಗಿ ಉಳಿಯುತ್ತದೆ. ಮಾತು ಮಾತಿಗೂ ಸಿಎಂ ಸಿದ್ದರಾಮಯ್ಯ ಅವರು ಅಮಿತ್ ಶಾ ಜೈಲು, ಯಡಿಯೂರಪ್ಪ ಜೈಲು , ಜನಾರ್ದನ ರೆಡ್ಡಿ ಜೈಲು ಎಂದು ವ್ಯಂಗ್ಯವಾಡುತ್ತಾರೆ. ಮುಂದೆ ಇದಕ್ಕೆ ಬಿಜೆಪಿ ಕಾರ್ಯಕರ್ತರು ತಕ್ಕಪಾಠ ಕಲಿಸುತ್ತಾರೆ’ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಿಡೀರ್ ಜನತಾ ದರ್ಶನ ರದ್ದುಗೊಳಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ನಡೆಸಲುದ್ದೇಶಿಸಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ...

news

ಸಿಎಂ ತವರಿನಲ್ಲಿ ಇಂದು ಬಿಜೆಪಿ ರಣಕಹಳೆ

ಮೈಸೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ನಾಯಕರ ಶಕ್ತಿ ಪ್ರದರ್ಶನ ಜೋರಾಗುತ್ತಿದೆ. ...

news

ವಿಜಯಪುರದ ಜಿಲ್ಲಾಸ್ಪತ್ರೆಯ ಅವಸ್ಥೆ ಹೇಗಿದೆ ನೋಡಿ; ಹಣ ಗಳಿಸುವ ಆಮಿಷದಿಂದ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಮಾಡುತ್ತಿರುವುದೇನು ಗೊತ್ತಾ…?

ವಿಜಯಪುರ : ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುವ ಬದಲು ವೈದ್ಯರು ಹಾಗು ಸಿಬ್ಬಂದಿಗಳು ಜೂಜಾಟ ಆಡುತ್ತಿರುವ ...

news

ದೀಪಕ್ ರಾವ್ ಹಾಗು ಬಶೀರ್ ಅವರ ಮನೆಗೆ ಭೇಟಿ ನೀಡಿದ ಹೆಚ್.ಡಿ.ದೇವಗೌಡರು ಹೇಳಿದ್ದೇನು ಗೊತ್ತಾ..?

ಮಂಗಳೂರು : ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಕ್ಕೀಡಾದ ದೀಪಕ್ ರಾವ್ ಹಾಗು ಬಶೀರ್ ಅವರ ಮನೆಗೆ ಮಾಜಿ ...

Widgets Magazine