ಹಾಲು ಕೊಡುತ್ತಿರುವ ಮರಿ ಯಾವುದು ಗೊತ್ತಾ?

ಬೆಳಗಾವಿ, ಶನಿವಾರ, 11 ಆಗಸ್ಟ್ 2018 (14:16 IST)

ಕೇವಲ ಎರಡು ತಿಂಗಳ ಮರಿ ಹಾಲು ಕೊಡುತ್ತಿರುವ ವಿಚಿತ್ರ ಘಟನೆ ನಡೆದಿದೆ. ಪುಟ್ಟ ಮರಿ ಎಲ್ಲರ ಗಮನ ಸೆಳೆಯುತ್ತಿದೆ. ಜನರು ತಂಡೋಪ ತಂಡವಾಗಿ ಹಾಲು ಕೊಡುತ್ತಿರುವ ಮರಿಯನ್ನು ವೀಕ್ಷಿಸಲು ಬರುತ್ತಿದ್ದಾರೆ.
 
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಅಚ್ಚರಿ ನಡೆದಿದೆ. ಹಿರೇಕುಂಬಿ ಗ್ರಾಮದ ಮಕ್ತುಮ್ ಸಾಬ್ ಲಗಳಿ ಎಂಬುವರ ಮನೆಯಲ್ಲಿ ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ಆದರೆ ದಿನ ಕಳೆದಂತೆ ಮರಿಯ ಕೆಚ್ಚಲು ದೊಡ್ಡದಾಗುತ್ತಾ ಬಂದಿದೆ. ಕೇವಲ ಎರಡು ತಿಂಗಳ ಮರಿ ಹಾಲು ಕೊಡುತ್ತಿರುವುದು ಅಚ್ಚರಿ ತಂದಿದೆ.  ಮಕ್ತುಮ್ ಸಾಬ್  ಮಾತ್ರ ದಿನಕ್ಕೆ ಎರಡು ಬಾರಿ ಹಾಲು ಕರಿಯುತ್ತಿದ್ದಾರೆ.

ಕರಿದ ಹಾಲನ್ನು ಸಾಕು ನಾಯಿಗೆ ಕುಡಿಸುತ್ತಾ ಬಂದಿದ್ದಾರೆ. ಇನ್ನು ಪಶು ವೈದ್ಯರ ಬಳಿ ತೋರಿಸಿದಾಗ ಇದೊಂದು‌ ವಿಸ್ಮಯ ಎಂದು ಅವರಿಗೆ ಹೇಳಿದ್ದಾರೆ. ಆದರೆ ಗ್ರಾಮಕ್ಕೆ ಜನರು ತಂಡೋಪ ತಂಡವಾಗಿ ಮೇಕೆ ಮರಿ ನೋಡಲು ಮನೆಗೆ ಬರುತ್ತಿದ್ದಾರೆ.
 

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವಾಲಯ ಬೀಗ ಮುರಿದು ಹುಂಡಿ ಕಳ್ಳತನ

ದೇವಾಲಯದ ಬೀಗ ಮುರಿದು ಕಾಣಿಕೆ ಹುಂಡಿ ಕಳವು ಮಾಡಿದ ಘಟನೆ ನಡೆದಿದೆ.

news

ಕಬಿನಿಗೆ ಹೆಚ್ಚು ನೀರು: ಮುನ್ನೆಚ್ಚರಿಕೆ ವಹಿಸಲು ಸೂಚನೆ

ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಜಲಾಶಯವು ಗರಿಷ್ಠ ಮಟ್ಟ ತಲುಪುತ್ತಿರುವುದರಿಂದ ಯಾವುದೇ ...

news

ನೆರೆಮನೆಯವನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ ಬಾಲಕಿ

ಬಿಹಾರ : ಅತ್ಯಾಚಾರಕ್ಕೊಳಗಾದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ...

news

ತನ್ನ ಬಗ್ಗೆ ಆಕ್ಷೇಪಾರ್ಹ ಮಾತನಾಡಿದ ಪ್ರಧಾನಿ ಮೋದಿ ಬಗ್ಗೆ ಸಂಸದ ಬಿಕೆ ಹರಿಪ್ರಸಾದ್ ಟ್ವೀಟ್

ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಸಂಸತ್ತಿನಲ್ಲಿ ...

Widgets Magazine