Widgets Magazine

ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡುವ ವಿಚಾರದ ಬಗ್ಗೆ ಸಚಿವ ನಾಗೇಶ್ ಹೇಳಿದ್ದೇನು?

ಬೆಂಗಳೂರು| pavithra| Last Modified ಬುಧವಾರ, 13 ಜನವರಿ 2021 (11:41 IST)
ಬೆಂಗಳೂರು : ಸಚಿವ ಸಂಪುಟದಿಂದ ಅಬಕಾರಿ ಸಚಿವ ಹೆಚ್.ನಾಗೇಶ್ ಅವರನ್ನು ಕೈಬಿಡುವ ನಿರ್ಧಾರ ಮಾಡಿದ್ದ, ಈ ಹಿನ್ನಲೆಯಲ್ಲಿ ಅವರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ನಾಗೇಶ್ ಅವರು, ನನ್ನನ್ನು ಸಂಪುಟದಿಂದ ಕೈಬಿಟ್ಟರೆ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಪರೋಕ್ಷವಾಗಿ ಸಮುದಾಯದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಸಿಎಂ ಬಿಎಸ್ ಯಡಿಯೂರಪ್ಪ ನನ್ನ ಪರವಾಗಿ ನಿಲ್ಲಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇವೆ. ಅವರು ಕಷ್ಟಕಾಲದಲ್ಲಿ ಇದ್ದಾಗ ಅವರ ಪರ ನಾವಿದ್ದೇವು. ಈಗ ನಮ್ಮ ಪರವಾಗಿ ಇರುವುದು ಅವರ ಧರ್ಮ ಎಂದು  ಸಿಎಂಗೆ ನೇರವಾಗಿ ಹೇಳಿದ್ದಾರೆ.

ಹಾಗೇ ಸಂಪುಟ ಸಭೆಗೆ ಕೊರಮಂಗಲದ ನಿವಾಸದಿಂದ ತೆರಳಿದ ನಾಗೇಶ್ ಅವರು ವಿಧಾನಸೌಧದಲ್ಲಿ ಸಿಎಂ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :