ಟೈಗರ್ ಫಾರೆಸ್ಟ್ ಬಗ್ಗೆ ಸಂಸದ ಹೇಳಿದ್ದೇನು?

ಚಾಮರಾಜನಗರ, ಸೋಮವಾರ, 14 ಜನವರಿ 2019 (17:27 IST)

ರಾಜ್ಯದಲ್ಲಿ ಎರಡು ಟೈಗರ್ ಪ್ರಾಜೆಕ್ಟ್ ಇರೋದು ನಮ್ಮ ಗಡಿ ಜಿಲ್ಲೆಯಲ್ಲಿ ಮಾತ್ರ. ಪ್ರಾಜೆಕ್ಟ್ ಜಾರಿಯಾದರೆ ಜಿಲ್ಲೆಯಲ್ಲಿ ಖಂಡಿತ ರೆಕಾರ್ಡ ಆಗುತ್ತದೆ ಎಂದು ಹೇಳಿದ್ದಾರೆ.

ಮಲೆಮಹದೇಶ್ವರ ಟೈಗರ್ ಫಾರೆಸ್ಟ್ ಆದರೆ ಚಾಮರಾಜನಗರ ಜಿಲ್ಲೆಯಲ್ಲೇ ಮೂರು ಟೈಗರ್ ಫಾರೆಸ್ಟ್ಗಳು ಆಗುತ್ತವೆ.
ಟೈಗರ್ ಫಾರೆಸ್ಟ್ ಆದರೆ  ಜಿಲ್ಲೆ ಖಂಡಿತ ರೆಕಾರ್ಡ್ ಆಗುತ್ತದೆ ಎಂದು ಸಂಸದ ಆರ್. ದೃವನಾರಾಯಣ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಸಂಸದ ದೃವನಾರಾಯಣ್ ಹೇಳಿಕೆ ನೀಡಿದ್ದು, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಚಾಮರಾಜನಗರದ ಜಿಲ್ಲಾ ಕೇಂದ್ರದ ಅಂಚೆ ಕಛೇರಿಯಲ್ಲಿ ಈ ಪಾಸ್ಪೋರ್ಟ್ ಸೇವಾಕೇಂದ್ರ ಪ್ರಾರಂಭಿಸಲಾಗುತ್ತದೆ. ಇದೇ ತಿಂಗಳ ಕೊನೆಯಲ್ಲಿ ಸೇವಾ ಕೇಂದ್ರ ಪ್ರಾರಂಭವಾಗಲಿದೆ ಎಂದರು. 

ಕೃಷಿ ಕಾಲೇಜು  ಇನ್ನೂ ಪ್ರಾರಂಭವಾಗದೆ ಇರುವುದಕ್ಕೆ ಸಾಕಷ್ಟು ಜನರು, ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದರು. ಆದರೆ ಹೊಸ ಕಾಲೇಜಿಗೆ 70 ಎಕರೆ ಜಾಗ ನಿರ್ದೇಶಿಸಿದೆ. ಕೇಂದ್ರ ಸರ್ಕಾರದ  ಕ್ಯಾಬಿನೆಟ್ ನಲ್ಲಿ ಅಪ್ರುವಲ್ ಆದ ತಕ್ಷಣ ಅದು ಪ್ರಾರಂಭವಾಗುತ್ತದೆ ಎಂದರು. 

ಈಗಾಗಲೇ ಒಂದು ಸಣ್ಣ ಕಟ್ಟಡದಲ್ಲಿ, ಕಾಲೇಜು ಪ್ರಾರಂಭವಾಗಿ ನಡೆಯುತ್ತಿದೆ ಎಂದ ಅವರು, ಕೈಗಾರಿಕೆ ಪ್ರದೇಶದಲ್ಲಿ 1600 ಎಕರೆ ಪ್ರದೇಶದಲ್ಲಿ ಯಾವುದೇ ಇಂಡಸ್ಟ್ರಿ ಬರದೇ ವ್ಯರ್ಥವಾಗಿದೆ. ಮುಂಬೈ ಮೂಲದ ಕಂಪನಿಯೊಂದು ಈಗ ಮುಂದೆ ಬಂದಿದೆ. ಅದರಿಂದ  15 ಸಾವಿರ ಜನರಿಗೆ ಉದ್ಯೋಗ ಲಭ್ಯವಾಗಲಿದೆ ಎಂದರು.  

ಬಿರ್ಲಾ ಗ್ರೂಪ್ ನವರಿಗೆ 250 ಎಕರೆ ಅಲಾಟ್ ಆಗಿದೆ. ಆದರೆ ಅವರು ಸ್ವಲ್ಪ ರಿಯಾಯಿತಿ ಕೇಳುತ್ತಿದ್ದಾರೆ, ಅದನ್ನ ಮುಖ್ಯಮಂತ್ರಿಗಳು ಮಾತುಕತೆಯ ಮೂಲಕ ಬಗೆಹರಿಸಲಿದ್ದಾರೆ ಎಂದರು. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಆಗಬೇಕಾದರೆ ನನ್ನ ಪ್ರಯತ್ನ ಸಾಕಷ್ಟಿದೆ ಎಂದೂ ಸಂಸದರು ಹೇಳಿಕೊಂಡರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ನಿಯನ್ನೇ ಭಯಾನಕವಾಗಿ ಕೊಂದ ಪಾಪಿ ಪತಿ!

ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಾರದ ಲೋಕಕ್ಕೆ ಕಳಿಸಿದ್ದಾನೆ.

news

ಶಾಸಕ ಉಮೇಶ ಜಾಧವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿದ್ದೇನು?

ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬುದರ ಬಗ್ಗೆ ...

news

ಆಪರೇಷನ್ ಕಮಲ ಗಾಸಿಪ್ ಎಂದ ಸಂಸದ!

ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿಯ ಸಮಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಆಪರೇಷನ್ ಕಮಲ ಕೇವಲ ಒಂದು ...

news

ರಾಷ್ಟ್ರಪತಿ ಆಡಳಿತ ಜಾರಿ: ಮಾಧ್ಯಮ ಸೃಷ್ಠಿ ಎಂದ ಹೆಚ್.ಡಿ.ಕೆ

ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕ್ಲರ್ಕ್ ಎಂದ ಪ್ರಧಾನಿ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ...