ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಹೆಚ್ ಡಿ ಕೆ ಕೊಡಲಿರುವ ಗಿಫ್ಟ್ ಏನು ಗೊತ್ತಾ…?

ಬೆಂಗಳೂರು, ಶನಿವಾರ, 13 ಜನವರಿ 2018 (14:59 IST)

ಬೆಂಗಳೂರು : ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ‘ಕುಮಾರ ಉದ್ಯೋಗ’ ಎಂಬ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದ್ದು, ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬಕ್ಕೆ ಕರ್ನಾಟಕದ ಯುವಕರಿಗೆ ತನ್ನದೊಂದು ಸಣ್ಣ ಉಡುಗೊರೆ ಎಂದು ಟ್ವೀಟ್ ಮಾಡಿದ್ದಾರೆ.

 
ಈ ಆ್ಯಪ್ ಮೂಲಕ ಕರ್ನಾಟಕದ ನಿರುದ್ಯೋಗಿಗಳಿಗೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ನೀಡಿದೆ. ಸಾಮಾಜಿಕ ತಾಣಗಳಲ್ಲಿ ಈ ಸುದ್ದಿ ರವಾನೆಯಾಗುತ್ತಿದ್ದಂತೆ ಒಂದು ಗಂಟೆಯೊಳಗೆ ಎಂಟು ಸಾವಿರ ಮಂದಿ ನೋಂದಾವಣೆ ಮಾಡಿದ್ದಾರೆ.

 
ನೋಂದಾವಣೆಯ ಬಗ್ಗೆ ಮಾಹಿತಿ ಕೂಡ ನೀಡಿದ್ದು, ಅದು ಹೀಗಿದೆ, ನಿರುದ್ಯೋಗಿಗಳು “ಕುಮಾರ ಉದ್ಯೋಗ “ ಎನ್ನುವ ಅಂಡ್ರಾಯ್ಡ ಅಪ್ಲಿಕೇಶನ್ ಅನ್ನು ಗೂಗಲ್ ಅಂಡ್ರಾಯ್ಡ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ತಮ್ಮ ವಿದ್ಯಾರ್ಹತೆ ಸಮೇತ ಮಾಹಿತಿ ಸಲ್ಲಿಸಬೇಕು.  ಈ ಮಾಹಿತಿಯನ್ನು ಪಡೆದು 2018 ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ/ ಖಾಸಗಿ ಕಂಪೆನಿಗಳ ಜೊತೆ ಚರ್ಚಿಸಿ ವಿವರ ಸಲ್ಲಿಸಿದ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಖಾದರ ಜೊತೆ ಕಾಣಿಸಿಕೊಂಡ ಇಲಿಯಾಸ್ ಕೊಲೆ

ಉಳ್ಳಾಲ ಟಾರ್ಗೆಟ್ ಗ್ರೂಪ್ ರೌಡಿ ಇಲಿಯಾಸ್‌ (31) ಎದೆಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಕೊಲೆ ...

news

‘ಮೈಸೂರು ಮಿನರಲ್ಸ್ ನಲ್ಲಿ 2000ಕೋಟಿ ರೂ. ಅಕ್ರಮ-ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ‘ಮೈಸೂರು ಮಿನರಲ್ಸ್ ನಲ್ಲಿ 2000ಕೋಟಿ ...

news

ಧರ್ಮಸ್ಥಳಕ್ಕೆ ಸಾಗುತ್ತಿದ್ದ ಬಸ್ ಭೀಕರ ಅಪಘಾತ: 8 ಮಂದಿ ಸಾವು!

ಬೆಂಗಳೂರು: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹಾಸನದ ಶಾಂತಿಗ್ರಾಮ ಬಳಿ ...

news

ಬಿಜೆಪಿ-ಕಾಂಗ್ರೆಸ್ ಭಾರೀ ಡ್ರಾಮಾ ಮಾಡ್ತಿವೆ: ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮಹದಾಯಿ ನದಿ ನೀರಿನ ಸಮಸ್ಯೆ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ...

Widgets Magazine
Widgets Magazine