ಸಿಎಂಗೆ ನೀಡಿರೋ ಟಾಂಗ್ ಹೇಗಿದೆ?

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (18:11 IST)

ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದ್ರೂ ಗೆಲ್ಲಿಸೋ ಕೆಲಸ ಮಾಡ್ತೇವೆ. ಕೆಲವರು ಅಮೃತ ಕುಡಿದ್ರೂ ವಿಷ ಕುಡಿತಿದ್ದೀವಿ ಅಂತಾ ಹೇಳ್ತಾರೆ. ಆದ್ರೆ ನಾವು ವಿಷ ಕುಡಿದ್ರೂ ಅಮೃತ ಕುಡಿತೀವಿ ಅಂತಾನೇ ಹೇಳ್ತೀವಿ. ಹೀಗಂತ
ಪರೋಕ್ಷವಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಕೈ ಪಾಳೆಯದ ಮುಖಂಡ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟಿರೋದ್ರಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುತ್ತೆ. ಆದರೂ ಹೈಕಮಾಂಡ್ ಹೇಳಿರೋದ್ರಿಂದ ಶಿರಸಾವಹಿಸಿ ಕೆಲಸ ಮಾಡ್ತೀವಿ. ಹೈಕಮಾಂಡ್ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ, ಎಐಸಿಸಿ ಆದೇಶ ಪಾಲಿಸುತ್ತೇವೆ. ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದ್ರೂ ಗೆಲ್ಲಿಸೋ ಕೆಲಸ ಮಾಡ್ತೇವೆ. ಕೆಲವರು ಅಮೃತ ಕುಡಿದ್ರೂ ವಿಷ ಕುಡಿತಿದ್ದೀವಿ ಅಂತಾ ಹೇಳ್ತಾರೆ. ಆದ್ರೆ ನಾವು ವಿಷ ಕುಡಿದ್ರೂ ಅಮೃತ ಕುಡಿತೀವಿ ಅಂತಾನೇ ಹೇಳ್ತೀವಿ. ಹೀಗಂತ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ ಕಾಂಗ್ರೆಸ್ ನ ಮುಖಂಡರಾದ ಎಸ್.ಟಿ. ಸೋಮಶೇಖರ್.

ಐದು ಕಾಂಗ್ರೆಸ್ ಶಾಸಕರಿದ್ದರೂ ಪರವಾಗಿಲ್ಲ ಜೆಡಿಎಸ್‌ ಪರವಾಗಿ ಕೆಲಸ ಮಾಡುತ್ತೇವೆ. ಸಚಿವ ಕೃಷ್ಣ ಬೈರೇಗೌಡ ಮನೆಯಲ್ಲಿ ಸಭೆ ಇದೆ. ಎಲ್ಲಾ ಶಾಸಕರು, ಸೋತ ಅಭ್ಯರ್ಥಿಗಳು, ಕಾಂಗ್ರೆಸ್ ಮುಖಂಡರು ಭಾಗಿಯಾಗ್ತಾರೆ. ಅಲ್ಲಿ ಚುನಾವಣೆ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.  

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಅಭ್ಯರ್ಥಿ ನಿಲ್ಲಿಸುವಂತೆ ಭಜರಂಗಸೇನೆ ಬಿಎಸ್ ವೈಗೆ ಒತ್ತಾಯ

ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯನ್ನು ಕಣದಲ್ಲಿ ನಿಲ್ಲಿಸುವಂತೆ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡಗಳು ...

news

ಮಕ್ಕಳು ಪಬ್ಜಿ ಗೇಮ್ ಆಡ್ತಾ ಇದ್ದಾರಾ..? ಹಾಗಿದ್ದರೆ ಹುಷಾರ್...!

ಮಕ್ಕಳು ಟೈಮ್‌ಪಾಸ್‌ಗಾಗಿ ವೀಡಿಯೊ ಗೇಮ್‌ಗಳನ್ನು ಆಡಿದರೆ ಪರವಾಗಿಲ್ಲ. ಈಗ ಮಕ್ಕಳೆಲ್ಲಾ ಓದು- ಆಟದ ಕಡೆಗೆ ...

news

ಚುನಾವಣೆಗಾಗಿ ಇಟ್ಟಿದ್ದ ಕೋಟಿ ಕೋಟಿ ಹಣ ವಶ

ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ.

news

ರಾಹುಲ್, ದೇವೇಗೌಡ್ರು ಯಾರೇ ಬಂದ್ರೂ ಗೆಲುವು ನನ್ನದೇ…

ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ್ರು ಬಂದ್ರು ಅಷ್ಟೆ , ರಾಹುಲ್ ಗಾಂದಿ ಬಂದ್ರೂ ಅಷ್ಟೆ, ಮಮತಾ ಬ್ಯಾನರ್ಜಿ ...

Widgets Magazine