ಜೆಡಿಎಸ್ ಮುಖಂಡರೆಂದು ಮಂಚಕ್ಕೆ ಕರೆಯುತ್ತಿದ್ದ ಕಾಮುಕರು ಅಂದರ್

ಬೆಂಗಳೂರು, ಶುಕ್ರವಾರ, 1 ಡಿಸೆಂಬರ್ 2017 (16:33 IST)

ಜೆಡಿಎಸ್ ಮುಖಂಡ ಎಂದು ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಪರಿಚಯಿಸಿಕೊಂಡು ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ವಾಟ್ಸಪ್‌ ಗ್ರೂಪ್‌ಗಳಲ್ಲಿರುವ ಮಹಿಳೆಯರಿಗೆ ಕರೆ ಮಾಡಿ ತಾವು ಜೆಡಿಎಸ್ ಮುಖಂಡರಾಗಿದ್ದು ನಿಮಗೆ ಏನಾದರೂ ಸಹಾಯ ಬೇಕಿದ್ದಲ್ಲಿ ಕೇಳಿ ಎಂದು ಪರಿಚಯ ಮಾಡಿಕೊಂಡು ನಂತರ ಅಶ್ಲೀಲ ಪದಗಳನ್ನು ಬಳಸಿ ಮಾತನಾಡುವುದಲ್ಲದೇ ಮಂಚಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
 
 ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ತಮಗೆ ಆಪ್ತರಾಗಿದ್ದು, ಪಕ್ಷದಲ್ಲಿ ಸ್ಥಾನ ಕೊಡಿಸುತ್ತೇವೆ. ಆದರೆ. ಒಂದು ಬಾರಿ ನೀವು ಮಂಚಕ್ಕೆ ಬರಬೇಕು ಎಂದು ಷರತ್ತುಗಳನ್ನು ವಿಧಿಸುತ್ತಿದ್ದುದಾಗಿ ಮೋಸಹೋದ ಮಹಿಳೆಯರು ಆರೋಪಿಸಿದ್ದಾರೆ.
 
ಮೋಸಹೋದ ಮಹಿಳೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಾದ ಸೋಮಶೇಖರ್ ಗೌಡ ಮತ್ತು ದಿನೇಶ್ ಎನ್ನುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಮಿತ್ ಶಾ ಜೈನರಾಗಿದ್ದರೂ ಹಿಂದು ಅಂತ ಸುಳ್ಳು ಹೇಳ್ತಾರೆ: ರಾಜ್‌ಬಬ್ಬರ್

ಲಕ್ನೋ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರೂ ಹಿಂದು ಅಂತ ಸುಳ್ಳು ...

news

ಸೋಮನಾಥ ದೇವಾಲಯದಲ್ಲಿ ರಾಹುಲ್ ಗಾಂಧಿ ಸಹಿ ಹಾಕಿದ್ದು ಇಷ್ಟೊಂದು ವಿವಾದವಾಗಿದ್ದು ಯಾಕೆ ಗೊತ್ತಾ?

ನವದೆಹಲಿ: ಗುಜರಾತ್ ನ ಸೋಮನಾಥ ದೇವಾಲಯದ ರಿಜಿಸ್ಟರ್ ಬುಕ್ ನಲ್ಲಿ ಸಹಿ ಹಾಕಿದ ಮೇಲೆ ರಾಹುಲ್ ಗಾಂಧಿ ಧರ್ಮದ ...

news

‘ನಾನು ಹಿಂದೂ, ನನ್ನಜ್ಜಿ ಶಿವಭಕ್ತೆ’ ಟೀಕಾಕಾರರಿಗೆ ರಾಹುಲ್ ತಿರುಗೇಟು

ನವದೆಹಲಿ: ಗುಜರಾತ್ ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭ ಹಿಂದೂಯೇತರ ಪುಸ್ತಕದಲ್ಲಿ ಸಹಿ ...

news

ರೆಬಲ್ ಸ್ಟಾರ್ ಅಂಬಿಗೆ ಮಂಡ್ಯ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಬಸವನಗುಡಿ ಟಿಕೆಟ್?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುತ್ತಾರೆಂಬ ಸುದ್ದಿ ಹುಟ್ಟಿಕೊಂಡ ...

Widgets Magazine
Widgets Magazine