ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಯಾರೂ ಹೇಳಿದ್ದು? : ಸಿಎಂ

ಬೆಂಗಳೂರು, ಬುಧವಾರ, 26 ಜುಲೈ 2017 (15:46 IST)

ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ನೀಡಲಾಗುವುದು ಎನ್ನುವ ವರದಿಗಳನ್ನು ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಸ್ಥಾನ ನೀಡಲಾಗುವುದು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಇನ್ನೂ ಸಚಿವ ಸಂಪುಟ ವಿಸ್ತರಣೆಯೇ ಆಗಿಲ್ಲ,ಗೃಹ ಸಚಿವ ಸ್ಥಾನದ ಬಗ್ಗೆ ಕೇಳಿದರೆ ಏನು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
 
ಮೊದಲು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿ. ನಾವಂತೂ ಗೃಹ ಸಚಿವ ಖಾತೆಗೆ ರಮಾನಾಥ್ ರೈ ಹೆಸರು ಹೇಳಿಲ್ಲ. ಗೃಹ ಸಚಿವನಾಗ್ತೀನಿ ಅಂತ ರೈ ನಿಮಗೆ ಹೇಳಿದ್ದಾರಾ? ಕೇವಲ ಉಹಾಪೋಹ ವರದಿಗಳತ್ತ ಗಮನ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
 
ಕರಾವಳಿ ಜಿಲ್ಲೆಗಳಲ್ಲಿ ಸಚಿವ ರಮಾನಾಥ್ ರೈಗೆ ಕಾಂಗ್ರೆಸ್ ನಾಯಕತ್ವ ನೀಡಲು ನಿರ್ಧರಿಸಲಾಗಿದ್ದು, ಅವರಿಗೆ ಪ್ರಮೋಷನ್ ನೀಡಿ ಗೃಹ ಸಚಿವರನ್ನಾಗಿಸಲು ನಿರ್ಧರಿಸಿದ್ದಾರೆ ಎನ್ನುವ ವರದಿಗಳು ಹರಡಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರಮಾನಾಥ್ ರೈ ಸಿಎಂ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ Congress Cm Siddaramaiah Ramanath Rai D.k.shivkumar

ಸುದ್ದಿಗಳು

news

ನಿತೀಶ್ ಕುಮಾರ್‌ನನ್ನು ಸಿಎಂ ಮಾಡಿದ್ದು ನಾನು: ಲಾಲೂ ಗುಡುಗು

ಪಾಟ್ನಾ: ನಿತೀಶ್ ಕುಮಾರ್‌ನನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ...

news

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ಆರೆಸ್ಸೆಸ್ ವಿರುದ್ಧ ರಮಾನಾಥ್ ರೈ ಛೂ ಬಿಡಲು ಸಿಎಂ ನಿರ್ಧಾರ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸಚಿವ ರಮಾನಾಥ್ ರೈಗೆ ಕಾಂಗ್ರೆಸ್ ನಾಯಕತ್ವ ನೀಡಲು ನಿರ್ಧರಿಸಲಾಗಿದ್ದು, ...

news

ಸಂಸದ ಅನುರಾಗ್ ಠಾಕೂರ್‌‌ಗೆ ಲೋಕಸಭೆಯ ಸ್ಪೀಕರ್ ವಾರ್ನಿಂಗ್

ನವದೆಹಲಿ: ಸಂಸದ ಅನುರಾಗ್ ಠಾಕೂರ್‌ ಲೋಕಸಭೆಯ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ...

Widgets Magazine