Widgets Magazine
Widgets Magazine

ಜನರಲ್ಲಿ ಪ್ರಕಾಶ್ ರೈ ಕ್ಷಮೆ ಕೇಳಿದ್ದು ಯಾಕೆ ಗೊತ್ತಾ…?

ಮೈಸೂರು, ಸೋಮವಾರ, 26 ಫೆಬ್ರವರಿ 2018 (13:20 IST)

Widgets Magazine

ಮೈಸೂರು: ಇನ್ಮುಂದೆ ನಾನು ಯಾರನ್ನಾದ್ರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ತಿಳಿದು ಮಾತನಾಡುತ್ತೇನೆ. ಈ ಹಿನ್ನೆಲೆಯಲ್ಲಿ ನನ್ನನ್ನು ಪ್ರೀತಿಸುವ ಜನರ ಕ್ಷಮೆ ಕೇಳುತ್ತೇನೆ ಎಂದು ನಟ ಪ್ರಕಾಶ್ ರೈ ಅವರು ಹೇಳಿದ್ದಾರೆ.


ಪ್ರಕಾಶ್  ರೈ ಹೀಗೆ ಹೇಳುವುದಕ್ಕೆ ಕಾರಣ ಕೂಡ ಇದೆ, ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪ್ರಕರಣ ನಡೆದ ಬಳಿಕ. ಹ್ಯಾರಿಸ್ ಪುತ್ರ ನಲಪಾಡ್ ನನ್ನು ಪ್ರಕಾಶ್ ರೈ ಹೊಗಳಿರುವ ವಿಡಿಯೋವೊಂದು ಖಾಸಗಿ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣದ ಬಗ್ಗೆ ಟ್ರೋಲ್ ಮಾಡಲಾಗಿತ್ತು.


ಇದರ ಕುರಿತು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಪ್ರಕಾಶ್ ರೈ, ನಲಪಾಡ್ ಕೇಸಲ್ಲಿ ನಿಜಕ್ಕೂ ಮುಜುಗರವಾಗಿದೆ. ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಹಣ ನೀಡಿದ್ದರು. ಈ ಕ್ಷಣದಲ್ಲಿ ನಾನು ಇಂಥ ಯುವಕರು ಇರಬೇಕು ಎಂದು ಹೇಳಿದ್ದೆ, ಆದರೆ ಆತನ ಮನಸ್ಸಲ್ಲೊಬ್ಬ ರಾಕ್ಷಸ  ಇದ್ದಾನೆಂದು ಗೊತ್ತಿರಲಿಲ್ಲ ಎಂದರು.


ಇನ್ಮುಂದೆ ಯಾರನ್ನಾದರೂ ಹೊಗಳುವಾಗ ಎಚ್ಚರ ವಹಿಸುತ್ತೇನೆ. ಪೂರ್ವಾಪರ ತಿಳಿದು ಮಾತನಾಡುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲೈಂಗಿಕತೆಗೆ ಬೇಡಿಕೆ ಇಟ್ಟ ರಾಜ್ಯಪಾಲರು ಯಾರು ಗೊತ್ತಾ...?

ನವದೆಹಲಿ: ದಕ್ಷಿಣ ರಾಜ್ಯದ ರಾಜ್ಯಪಾಲರೊಬ್ಬರು ಅಸಭ್ಯವಾಗಿ ವರ್ತಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ...

news

ಉತ್ತರಾಧಿ ಮಠಕ್ಕೆ ಅಮಿತ್ ಷಾ ಭೇಟಿ

ಕಲಬುರಗಿ: ಉತ್ತರಾಧಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದಾರೆ. ಕಲಬುರಗಿ ...

news

ಬೇಲ್ ಗಾಗಿ ದೇವರ ಮೊರೆಹೋದ ನಲಪಾಡ್ ಗ್ಯಾಂಗ್ ನ ಆರೋಪಿಗಳು!

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆ ಇಂದು ನಲಪಾಡ್ ಮತ್ತು ಗ್ಯಾಂಗ್ ಜಾಮೀನು ...

news

ಮಹದಾಯಿ ಮಾತುಕತೆಗೆ ಜಗದೀಶ್ ಶೆಟ್ಟರ್ ಗೆ ಆಹ್ವಾನವಿತ್ತ ಗೋವಾ ಸಿಎಂ

ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅನಾರೋಗ್ಯದ ಪರಿಸ್ಥಿತಿಯಲ್ಲೂ ಮಹದಾಯಿ ಮಾತುಕತೆಗಾಗಿ ರಾಜ್ಯ ಬಿಜೆಪಿ ...

Widgets Magazine Widgets Magazine Widgets Magazine