ಕುಡುಕ ಗಂಡನ ಮದ್ಯದ ಬಿಲ್ ಪಾವತಿಸಲು ಮಗುವನ್ನೇ ಮಾರಾಟ ಮಾಡಿದ ಪತ್ನಿ

ಹಾಸನ, ಶನಿವಾರ, 25 ನವೆಂಬರ್ 2017 (19:06 IST)

ಕುಡುಕ ಪತಿಯ ಬಿಲ್ ಪಾವತಿಸಲು ಪತ್ನಿಯೊಬ್ಬಳು ತನ್ನ ಮೂರವರೆ ತಿಂಗಳ ಹಸುಗೂಸು ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
 
ಮೂಲಗಳ ಪ್ರಕಾರ ಜ್ಯೋತಿ ಎನ್ನುವ ಮಹಿಳೆ ತನ್ನ ಹಸುಗೂಸನ್ನು ನಿವೃತ್ತಿಯಾಗಿರುವ ನರ್ಸ್‌ ಒಬ್ಬಳಿಗೆ 21 ಸಾವಿರ ರೂಪಾಯಿಗಳಿಗಾಗಿ ಮಾರಾಟ ಮಾಡಿದ್ದಾಳೆ. ನರ್ಸ್ ಮಗವನ್ನು ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಿದ್ದಾಳೆ. 
 
ಅನಾಮಧೇಯ ಪತ್ರವೊಂದು ಮಕ್ಕಳ ಯೋಗಕ್ಷೇಮ ಇಲಾಖೆಗೆ ಬಂದಿರುವುದನ್ನು ನೋಡಿದ ಅಧಿಕಾರಿಗಳು ಘಟನೆಯಲ್ಲಿ ಭಾಗಿಯಾದವರನ್ನು ಬಂಧಿಸಿ, ಮಗುವನ್ನು ಬೇಲೂರು ಪಟ್ಟಣದಲ್ಲಿ ಪತ್ತೆ ಮಾಡಿದ್ದಾರೆ.
 
ಜಿಲ್ಲಾ ಮಕ್ಕಳ ಯೋಗಕ್ಷೇಮ ಸಮಿತಿಯ ಅಧ್ಯಕ್ಷೆ ಕೋಮಲಾ ಮಾತನಾಡಿ, ಹಾಸನ ರೈಲ್ವೆ ನಿಲ್ದಾಣದಲ್ಲಿ ವಾಸವಾಗಿದ್ದ ಜ್ಯೋತಿ ಶಾಂತಮ್ಮ ಎನ್ನುವ ನರ್ಸ್‌ಗೆ ಮಗುವನ್ನು ಮಾರಾಟ ಮಾಡಿದ್ದಾಳೆ. ಶಾಂತಮ್ಮ ಮಗುವನ್ನು ಮಂಜುಳಾ ದೇವರಾಜ್ ಎನ್ನುವ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. 
 
ತನಿಖೆಯ ಸಂದರ್ಭದಲ್ಲಿ, ಶಾಂತಮ್ಮ ಇದೇ ತರಹದ ಮಕ್ಕಳ ಕಳ್ಳಸಾಗಾಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದನ್ನು ಸಿಡಬ್ಲ್ಯೂಸಿ ತಂಡ ಪತ್ತೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಸರ್ಕಾರದ ಚಿಂತನೆ

ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಬಿ.ಆರ್.ತಿಮ್ಮಾಪುರ ...

ಮಹಿಳೆಯ ರಂಪಾಟಕ್ಕೆ ದಂಗಾದ ಯುವಕ

ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಆಸನದಲ್ಲಿ ಕುಳಿತಿದ್ದ ಯುವಕನನ್ನು ಎಬ್ಬಿಸಲು ಮಹಿಳೆಯೊಬ್ಬರ ರಂಪಾಟಕ್ಕೆ ...

news

ತೇಜ್ ಪ್ರತಾಪ್ ಯಾದವ್ ಕಪಾಳಕ್ಕೆ ಹೊಡೆದವರಿಗೆ 1ಕೋಟಿ ಬಹುಮಾನ ಘೋಷಣೆ

ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯ ಅವರನ್ನು ಟೀಕಿಸಿರುವ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ...

news

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಐವರು ಸಾವು

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕಾರಿನ ಟಯರ್ ಸಿಡಿದು ಇಬ್ಬರು ಮಕ್ಕಳು ...

Widgets Magazine
Widgets Magazine