ಅರ್ಜುನ ನೇತೃತ್ವದ ಗಜಪಡೆಗೆ ಅಂಬಾರಿ ಹೊರುವ ತಾಲೀಮು ಶುರು

ಮೈಸೂರು, ಸೋಮವಾರ, 18 ಸೆಪ್ಟಂಬರ್ 2017 (11:51 IST)

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಇದರ ಮಧ್ಯೆಯೇ ಅಂಬಾರಿ ಹೊರಲಿರುವ ಅರ್ಜುನನಿಗೆ ಇಂದಿನಿಂದ ಮರದ ಅಂಬಾರಿ ಹೊರುವ ತಾಲೀಮು ಶುರುವಾಗಿದೆ.


ಮರಳು ಮೂಟೆ ಹೊರುವ ತಾಲೀಮಿನ ಬಳಿಕ ಗಜಪಡೆಗೆ 750ಕೆಜಿ ತೂಕದ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಗಿದೆ. ಮೈಸೂರು ಅರಮನೆ ಆವರಣದಲ್ಲಿ ಡಿಸಿಎಫ್ ಏಡುಕುಂಡಲ ಮತ್ತು ಆನೆ ವೈದ್ಯ ಡಾ.ನಾಗರಾಜ್ ಮರದ ಅಂಬಾರಿಗೆ ಪೂಜೆ ಸಲ್ಲಿಸಿದರು. ಬಳಿಕ ಗಜಪಡೆ ಕ್ಯಾಪ್ಟನ್ ಅರ್ಜುನನ ಬೆನ್ನಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮರದ ಅಂಬಾರಿ ಕಟ್ಟಿದರು. ನಂತರ ಕ್ಯಾಪ್ಟನ್ ಮರದ ಅಂಬಾರಿ ಹೊತ್ತು ತಾಲೀಮು ಆರಂಭಿಸಿದ್ದಾನೆ.

ಅರ್ಜುನನಿಗೆ ಕುಮ್ಕಿ ಆನೆಗಳಾದ ವಿಜಯ, ವರಲಕ್ಷ್ಮಿ ಸಾಥ್ ನೀಡಿವೆ. ಅಭಿಮನ್ಯು, ಬಲರಾಮ, ಗಜೇಂದ್ರ, ಭೀಮ, ದ್ರೋಣ, ಗೋಪಾಲಸ್ವಾಮಿ, ವಿಕ್ರಮ ಆನೆಗಳು ಸಹ ತಾಲೀಮಿನಲ್ಲಿ ಭಾಗಿಯಾಗಿವೆ. ಅರಮನೆ ಆವರಣದಿಂದ ಸಾಗಿರುವ ಆನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ತಿಲಕ್ ನಗರ, ಬಂಬೂಬಜಾರ್, ಬನ್ನಿಮಂಟಪ ಮೂಲಕ ಸಾಗಿ ಪಂಜಿನ ಕವಾಯಿತು ಮೈದಾನ ತಲುಪಲಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೆ.23ರಂದು ಸಿಎಂ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ: ಯಡಿಯೂರಪ್ಪ

ಕಲಬುರ್ಗಿ: ಮುಂದಿನ ನಾಲ್ಕೈದು ದಿನಗಳಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು ಮಾಡಿರುವ ಭ್ರಷ್ಟಾಚಾರ ದಾಖಲೆ ...

news

ನಾಗರಮಡಿ ಫಾಲ್ಸ್`ನಲ್ಲಿ ಕೊಚ್ಚಿಹೋದ 6 ಮಂದಿ ಪ್ರವಾಸಿಗರು

ನಿನ್ನೆ ಕಾರವಾರದ ನಾಗರಮಡಿ ಫಾಲ್ಸ್`ನಲ್ಲಿ ಕೊಚ್ಚಿ ಹೋಗಿದ್ದ 6 ಪ್ರವಾಸಿಗರ ಪೈಕಿ 5 ಪ್ರವಾಸಿಗರ ಶವ ...

news

ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿಗೆ 68 ಪೈಸೆ ಚೆಕ್ ಉಡುಗೊರೆ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ 67 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ...

news

ಎಣ್ಣೆ ಹೊಡೆಯೋರ ಕಿಕ್ ಇಳಿಸೋ ಸುದ್ದಿ ಕೊಟ್ಟಿದೆ ಗೋವಾ

ಪಣಜಿ: ಗೋವಾ ಪ್ರವಾಸ ಮಾಡುವುದೇ ಎಣ್ಣೆ ಹೊಡೆಯೋಕೆ ಎನ್ನುವವರು ಇದ್ದಾರೆ. ಆದರೆ ಇನ್ನು ಮುಂದೆ ಗೋವಾದಲ್ಲಿ ...

Widgets Magazine
Widgets Magazine