ಬಾಲಿವುಡ್ ನಟರನ್ನು ಕರೆಸಿ ತೊಡೆತಟ್ಟಲಿರುವ ಜಮೀರ್ ಅಹಮ್ಮದ್

ಬೆಂಗಳೂರು, ಮಂಗಳವಾರ, 1 ಆಗಸ್ಟ್ 2017 (09:38 IST)

Widgets Magazine

ಬೆಂಗಳೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡು ದೇವೇಗೌಡರ ವಿರುದ್ಧ ತೊಡೆ ತಟ್ಟಿರುವ ಶಾಸಕ ಜಮೀರ್ ಅಹಮ್ಮದ್ ಚಾಮರಾಜಪೇಟೆಯಲ್ಲಿ ಶತಾಯ ಗತಾಯ ಪಾರಮ್ಯ ಮೆರೆಯಲು ಮುಂದಾಗಿದ್ದಾರೆ.


 
ಚಾಮರಾಜಪೇಟೆಯಲ್ಲಿ ಸಮಾವೇಶ ಮಾಡಿ ಬಲಪ್ರದರ್ಶಿಸಿದ್ದ ದೇವೇಗೌಡರಿಗೆ ಸಡ್ಡು ಹೊಡೆಯಲು ಇದೀಗ ಜಮೀರ್ ಅಹಮ್ಮದ್ ಕಾರ್ಯಕ್ರಮವೊಂದನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ತಮ್ಮ ಜನುಮ ದಿನದ ನೆಪ ಮಾಡಿದ್ದಾರೆ.
 
ಬರ್ತ್ ಡೇ ನೆಪದಲ್ಲಿ ಬಾಲಿವುಡ್ ನ ಘಟಾನುಘಟಿಗಳನ್ನು ಕರೆಸಿ ಚಾಮರಾಜಪೇಟೆಯಲ್ಲಿ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸಲ್ಮಾನ್ ಖಾನ್ ಸಹೋದರರಾದ ಸೊಹೈಲ್ ಖಾನ್, ಅರ್ಬಾಜ್ ಖಾನ್, ಸೋನು ಸೂದ್, ಗುಲ್ಶನ್ ಗ್ರೋವರ್, ತೆಲುಗು ನಟ ಅಲಿ ಮುಂತಾದವರನ್ನು ಕರೆಸಿ ಜಮೀರ್ ಜನರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಲಿದ್ದಾರೆ.
 
ಕಳೆದ ವರ್ಷವೂ ಬಾಲಿವುಡ್ ನಟ ಸಂಜಯ್ ದತ್ ರನ್ನು ಕರೆಸಿ ಅದ್ಧೂರಿಯಾಗಿ ತಮ್ಮ ಬರ್ತ್ ಡೇ ಆಚರಿಸಿಕೊಂಡಿದ್ದರು. ಈ ವರ್ಷ ಇನ್ನಷ್ಟು ತಾರೆಯರನ್ನು ಕರೆತರುತ್ತಿದ್ದಾರೆ. ಮುಂಬೈನಲ್ಲಿ ಉದ್ಯಮಿಯಾಗಿದ್ದ ಜಮೀರ್ ಗೆ ಬಾಲಿವುಡ್ ನಂಟಿದೆ. ಅದೇ ನಂಟನ್ನು ಇದೀಗ ತಮ್ಮ ಶಕ್ತಿಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿದ್ದಾರೆ.
 
ಇದನ್ನೂ ಓದಿ..   ‘ಎಲ್ಲಾ ಗೊತ್ತಿದ್ದೂ ರಾಹುಲ್ ಗಾಂಧಿ ಸುಮ್ಮನಿದ್ದುದೇಕೆ?’
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಮೀರ್ ಅಹಮ್ಮದ್ ಬಾಲಿವುಡ್ ಜೆಡಿಎಸ್ ರಾಜ್ಯ ಸುದ್ದಿಗಳು Bollywood Jds Zameer Ahamad State News

Widgets Magazine

ಸುದ್ದಿಗಳು

news

‘ಎಲ್ಲಾ ಗೊತ್ತಿದ್ದೂ ರಾಹುಲ್ ಗಾಂಧಿ ಸುಮ್ಮನಿದ್ದುದೇಕೆ?’

ನವದೆಹಲಿ: ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಗೆ ಕೈ ಕೊಟ್ಟು ನಿತೀಶ್ ಕುಮಾರ್ ಬಿಜೆಪಿ ಜತೆ ಕೈ ...

news

ಬೆಂಗಳೂರಿಗೆ ನೂತನ ಪೊಲೀಸ್ ಕಮೀಷನರ್

ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರನ್ನ ವರ್ಗಾವಣೆ ಮಾಡಲಾಗಿದ್ದು, ...

news

ಪ್ರಧಾನಿ ಸ್ವಾತಂತ್ರ್ಯ ದಿನಕ್ಕೆ ಏನು ಭಾಷಣ ಮಾಡಬೇಕು? ನೀವೇ ಐಡಿಯಾ ಕೊಡಿ!

ನವದೆಹಲಿ: ಆಗಸ್ಟ್ 15 ರಂದು ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾಡುವ ಭಾಷಣ ಅತ್ಯಂತ ...

news

ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಗೆ ಮತ: ಜೆಡಿಯು

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಯು ಶಾಸಕರು ಗೋಪಾಲಕೃಷ್ಣ ಗಾಂಧಿ ಪರವಾಗಿ ಮತಚಲಾಯಿಸಲಿದ್ದಾರೆ ...

Widgets Magazine