ಏಷ್ಯಾದ ಸ್ವಚ್ಛ ಗ್ರಾಮ ಇರುವುದು ಭಾರತದಲ್ಲಿಯೇ!

ramkrishna puranik 

ಶಿಲ್ಲಾಂಗ್, ಶುಕ್ರವಾರ, 22 ಡಿಸೆಂಬರ್ 2017 (14:42 IST)

Widgets Magazine

ಸ್ವಚ್ಛವಾದ ಹಳ್ಳಿ (2003) ಎಂಬ ಸ್ಥಾನಮಾನವನ್ನು ಪಡೆದ ಈ ಸಣ್ಣ ಹಳ್ಳಿ ಈಗಲೂ ಕೂಡಾ ಏಷ್ಯಾದ ಅಚ್ಚುಕಟ್ಟಾದ ಮತ್ತು ಸ್ವಚ್ಛ ಹಳ್ಳಿಯಾಗಿದೆ. ಅತ್ಯಂತ ಆಶ್ಚರ್ಯಕರ ಸಂಗತಿ ಎಂದರೆ ಅದು ಭಾರತದಲ್ಲಿದೆ. ಹೌದು, ನಿಮ್ಮಲ್ಲಿ ಹಲವರಿಗೆ ಈ ಸತ್ಯವು ತಿಳಿದಿಲ್ಲ, 

ಆದರೆ "ಮಾವ್ಲಿನ್‌ನೊಂಗ್‌ ಗ್ರಾಮ"ವನ್ನು ದೇವರ ಸ್ವಂತ ತೋಟ ಎಂದು ಕರೆಯುತ್ತಾರೆ ಮತ್ತು ಅದಕ್ಕೆ ಎಲ್ಲ ಕಾರಣಗಳು ಸೂಕ್ತವಾಗಿವೆ. ಈ ಗ್ರಾಮವು ಭಾರತದ ರಾಜ್ಯದ ಪೂರ್ವ ಕಾಶಿ ಹಿಲ್ಸ್ ಜಿಲ್ಲೆಯಲ್ಲಿದೆ. ಮಾವ್ಲಿನ್‌ನೊಂಗ್‌ ಗ್ರಾಮವು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ 100 ಕಿಮೀ ದೂರದಲ್ಲಿದೆ.
 
2007 ರಿಂದ ಇಲ್ಲಿನ ಎಲ್ಲಾ ಮನೆಗಳು ಕ್ರಿಯಾತ್ಮಕ ಶೌಚಾಲಯಗಳನ್ನು ಹೊಂದಿವೆ, ಗ್ರಾಮದಾದ್ಯಂತ ಬಿದಿರಿನ ಕಸದ ತೊಟ್ಟಿಗಳು ಇವೆ, ಮರಗಳಿಂದ ಬೀಳುವ ಎಲೆಗಳು ನೇರವಾಗಿ ಕಸದ ತೊಟ್ಟಿಗಳಿಗೆ ಹೋಗುತ್ತವೆ, ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಲಾಗಿದೆ ಮತ್ತು ಇಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಮಾವ್ಲಿನ್‌ನೊಂಗ್‌ ಗ್ರಾಮದಲ್ಲಿ ಕಸವನ್ನು ಕೊಳೆಗೆ ಮಾರ್ಪಡಿಸಿ ತಮ್ಮದೇ ಆದ ಗೊಬ್ಬರವನ್ನು ತಯಾರಿಸುತ್ತಾರೆ. ಇಲ್ಲಿನ ಜನರು ತಮ್ಮ ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಲ್ಲದೇ, ಅವರು ರಸ್ತೆಗಳನ್ನು ಗುಡಿಸಲು ಬರುತ್ತಾರೆ ಮತ್ತು ಮರಗಳನ್ನು ನೆಡುವುದು ಅವರ ಜೀವನಶೈಲಿಯ ಒಂದು ಭಾಗವಾಗಿದೆ.
 
ಸ್ಥಳೀಯರ ಪ್ರಮುಖ ಉದ್ಯೋಗ ಕೃಷಿಯಾಗಿದ್ದು ಅಡಿಕೆಯನ್ನು ಮುಖ್ಯ ಬೆಳೆಯನ್ನಾಗಿ ಬೆಳೆಯುತ್ತಾರೆ. ಈ ಗ್ರಾಮದಲ್ಲಿ ಸುಮಾರು 95 ಮನೆಗಳಿವೆ, 100% ರಷ್ಟು ಸಾಕ್ಷರತಾ ಪ್ರಮಾಣವಿದೆ. ಈ ಹಳ್ಳಿಯಲ್ಲಿ ಸಣ್ಣ ಪ್ರಮಾಣದ ಚಹಾ ಅಂಗಡಿಗಳಿವೆ. ಈ ಅಂಗಡಿಗಳಲ್ಲಿ ಸಣ್ಣ ಪುಟ್ಟ ಆಹಾರ ಪದಾರ್ಥಗಳು ಕೂಡಾ ಸಿಗುತ್ತವೆ. ವಾಸ್ತವವಾಗಿ, ಇಲ್ಲಿ ಸಿಗುವ ಆಹಾರ ತುಂಬಾ ರುಚಿಕರವಾಗಿದ್ದು, ನೀವು ಮಾವ್ಲಿನ್‌ನೊಂಗ್‌ ಗ್ರಾಮವನ್ನು ಬಿಟ್ಟುಹೋಗುವಾಗ ನೀವು ಹೆಚ್ಚು ಹಂಬಲಿಸುವಿರಿ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡು ರೀತಿಯ ಆಹಾರಗಳು ಇಲ್ಲಿ ಲಭ್ಯ. ವರ್ಷಪೂರ್ತಿ ಮಾವ್ಲಿನ್‌ನೊಂಗ್‌‌ನ ಹವಾಮಾನ ಹಿತಕರವಾಗಿರುತ್ತದೆ. ಆದರೂ ಮಾನ್ಸೂನ್ ಕಾಲದಲ್ಲಿ ಮಾವ್ಲಿನ್‌ನೊಂಗ್ ಗ್ರಾಮಕ್ಕೆ ಭೇಟಿ ನೀಡುವುದು ಹೆಚ್ಚು ಉಲ್ಲಾಸ ನೀಡುತ್ತದೆ.
 
ಪ್ರಧಾನಿ ನರೇಂದ್ರ ಮೋದಿ ಅವರು ಈ ಗ್ರಾಮದ ಸ್ವಚ್ಛತೆಯ ಕುರಿತು ತಮ್ಮ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಈ ಗ್ರಾಮವು ಸ್ವಚ್ಛ ಅಭಿಯಾನಕ್ಕೆ ಮಾವ್ಲಿನ್‌ನೊಂಗ್‌ ಮಾದರಿಯಾಗಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಇದರಿಂದ ಇಲ್ಲಿನ ಜನ ಸ್ಫೂರ್ತಿ ಹೊಂದಿ ಮೋದಿ ಅವರನ್ನು ಗ್ರಾಮಕ್ಕೆ ಆಹ್ವಾನಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಏಷ್ಯಾದ ಸ್ವಚ್ಛ ಗ್ರಾಮ ಭಾರತ ಮೇಘಾಲಯ ಮಾವ್ಲಿನ್‌ನೊಂಗ್‌ ಗ್ರಾಮ India Meghalaya Mawlynnong Village Asia’s Cleanest Village

Widgets Magazine

ಪ್ರವಾಸೋದ್ಯಮ

news

ಕರ್ನಾಟಕದಲ್ಲಿನ 12 ಪ್ರಮುಖ ಐತಿಹಾಸಿಕ ಸ್ಥಳಗಳು

ಐತಿಹಾಸಿಕ ಸ್ಥಳ, ಸ್ಮಾರಕಗಳು, ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಹಲವಾರು ಪ್ರವಾಸಿ ...

news

ಗೋವಾದಲ್ಲಿದೆ ನಿಗೂಢ ತಾಣ ನಿಮಗೆ ಗೊತ್ತೇ!

ಜಗತ್ತಿನ ಸೃಷ್ಟಿಯಲ್ಲಿ ಕತ್ತಲೆ ಎಂಬುದು ತರ್ಕಕ್ಕೆ ನಿಲುಕದ ವಿಷಯವಾಗಿದೆ. ಕತ್ತಲೆ ಎಂದರೆ ನಿಗೂಢ ಅಲ್ಲಿ ...

news

ಜಲಪಾತಗಳ ತವರೂರು ಕರ್ನಾಟಕದ ಕಾಶ್ಮೀರ!

ಮಳೆಗಾಲದಲ್ಲಿ ಮಳೆಯಲಿ ನೆನೆಯುವುದೇ ಒಂದು ತಹರದ ಖುಷಿ ಅದರಲ್ಲೂ ಚಿಕ್ಕ ಪುಟ್ಟ ನದಿ ತೊರೆಗಳಿದ್ದರಂತು ...

news

ಕರ್ನಾಟಕದಲ್ಲಿರುವ ಕಪ್ಪು ಕಡಲ ತೀರ ನಿಮಗೆ ಗೊತ್ತಾ?

ಸಮುದ್ರ ಕಿನಾರೆ ಎಂತವರನ್ನು ಪ್ರಶಾಂತವಾಗಿಸುವ ಮಂತ್ರ ಮುಗ್ಧವಾಗಿಸುವ ಪ್ರದೇಶ. ಮಸ್ಸಂಜೆಯ ವೇಳೆಯಲ್ಲಿ ಕಡಲ ...

Widgets Magazine