ಸೆಂಟ್ರಲ್ ನಲ್ಲಿ ಸುಮಲತಾ ಪರ ಕೂಗಿದ ಕೈ ಕಾರ್ಯಕರ್ತ

ಬೆಂಗಳೂರು, ಸೋಮವಾರ, 8 ಏಪ್ರಿಲ್ 2019 (18:25 IST)

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಮಾಜಿ ಸಿಎಂ‌ ನಡೆಸುತ್ತಿರುವಾಗ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಾರ್ಯಕರ್ತನೊಬ್ಬ ಕೂಗಿದ ಘಟನೆ ನಡೆದಿದೆ.

ರಾಜಾಜಿನಗರದ ಮೋದಿ ಹಾಸ್ಪಿಟಲ್ ಬಳಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ರು. ಸಚಿವ ಕೆಜೆ ಜಾರ್ಜ್, ಝಮಿರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್ ಪ್ರಚಾರದಲ್ಲಿ ಭಾಗಿಯಾಗಿದ್ದರು. ರಾಜಾಜಿನಗರ ಮೋದಿ ಹಾಸ್ಪಿಟಲ್ ಬಳಿ ಸಿದ್ದರಾಮಯ್ಯ ಬಹಿರಂಗ ರ್ಯಾಲಿ ನಡೆಸಿದ್ರು. ರಿಜ್ವಾನ್ ಗೆ ಮತ ನೀಡುವಂತೆ ಸಿದ್ದರಾಮಯ್ಯ ಪ್ರಚಾರ ಶುರುಮಾಡಿದ್ರು.

ರೋಡ್ ಶೋ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸಂಸತ್ ನಲ್ಲಿ ಒಂದಿನ ಮಾತಾಡಿಲ್ಲ. ಹತ್ತು ವರ್ಷದಲ್ಲಿ ಒಂದೇ ಒಂದು ಬಾರಿ ಮಾತನಾಡಿಲ್ಲ. ಮೋದಿ ಮುಖಃ ನೋಡಿ ನನಗೆ ಮತ ಹಾಕಿ ಅನ್ತಾರೆ ಎಂದು ಟೀಕೆ ಮಾಡಿದ್ರು.

ಬೆಂಗಳೂರಿನ ಪ್ರಚಾರದಲ್ಲೂ ಸುಮಲತಾ ಅಂಬರೀಶ್ ಪರ ಕೂಗು ಕೇಳಿಬಂದಿತು. ಸುಮಲತಾ ಗೆಲ್ಲಿಸುವಂತೆ ಧ್ವನಿ ಎತ್ತಿದ ಕಾಂಗ್ರೆಸ್ ಕಾರ್ಯಕರ್ತನೊಬ್ಬ, ಇಲ್ಲಿ ರಿಜ್ವಾನ್ ಅರ್ಷದ್ ಗೆಲ್ಲಿಸುತ್ತೇವೆ. ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಿಕೊಡಿ ಅಣ್ಣ ಎಂದ ಕಾರ್ಯಕರ್ತ ಮನವಿ ಮಾಡಿದ.

ಆದರೆ ಈ ವೇಳೆ ಆ ಕಾರ್ಯಕರ್ತನ ಕೂಗಿಗೆ ಕಿವಿ ಕೊಡದೆ ತನ್ನ ಭಾಷಣ ಮುಂದು ವರೆಸಿದ ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಕೆಪಿಸಿಸಿ ಅಧ್ಯಕ್ಷರ ರೋಡ್ ಷೋ; ಯಾರ ಪರ ಗೊತ್ತಾ?

ಬಿಸಿಲನ್ನೂ ಲೆಕ್ಕಿಸದೇ ಕೆಪಿಸಿಸಿ ಅಧ್ಯಕ್ಷರು ರೋಡ್ ಷೋ ನಡೆಸಿ ಮತಯಾಚನೆ ನಡೆಸಿದ್ದಾರೆ.

news

ಸೂರ್ಯ ಉದಯಿಸುವುದಕ್ಕೂ ಮುನ್ನವೇ ತೇಜಸ್ವಿ ಪ್ರಚಾರ

ಹಬ್ಬದ ದಿನದಂದು ಭರ್ಜರಿ ಪ್ರಚಾರ ನಡೆಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಇಂದು ...

news

ಕಣಕ್ಕಿಳಿದ ಎಸ್.ಎಂ.ಕೃಷ್ಣ ಭರ್ಜರಿ ಪ್ರಚಾರ

ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ.

news

ಬಚ್ಚೇಗೌಡ ಪರ ವಿಶ್ವನಾಥ್ ಬ್ಯಾಟಿಂಗ್

ಬಿಜೆಪಿ ಅಭ್ಯರ್ಥಿ ಪರವಾಗಿ ಎಸ್.ಆರ್.ವಿಶ್ವನಾಥ್ ಬ್ಯಾಟ್ ಬೀಸಿದ್ದಾರೆ.

Widgets Magazine