51 ಬಾಲಕಿಯರಿಗೆ ಮದರಸಾದಲ್ಲಿ ಲೈಂಗಿಕ ಶೋಷಣೆ

ಲಕ್ನೋ, ಶನಿವಾರ, 30 ಡಿಸೆಂಬರ್ 2017 (11:41 IST)

ಮದರಸಾ ಒಂದರಲ್ಲಿ 51 ಬಾಲಕಿಯರನ್ನು ಒತ್ತೆಯಾಳಾಗಿರಿಸಿಕೊಂಡು ಲೈಂಗಿಕವಾಗಿ ಶೋಷಿಸಿರುವ ಆತಂಕಕಾರಿ ಸಂಗತಿ ಉತ್ತರ ಪ್ರದೇಶ ರಾಜಧಾನಿ ಶಹದತ್ಗಂಜನಲ್ಲಿ ವರದಿಯಾಗಿದೆ.

ಮದರಸಾದಲ್ಲಿ 125ಕ್ಕೂ ಹೆಚ್ಚು ಬಾಲಕಿಯರು ವ್ಯಾಸಂಗ ಮಾಡುತ್ತಿದ್ದು ವ್ಯವಸ್ಥಾಪಕ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕೆಲ ಅಪ್ರಾಪ್ತೆಯರು ದೂರು ನೀಡಿದ್ದರು.

ದೂರನ್ನು ಆಧರಿಸಿ ಲಕ್ನೋ ಪೊಲೀಸ್ ವಿಭಾಗದ ಜಂಟಿ ತಂಡ ದಾಳಿ ನಡೆಸಿದ ವೇಳೆ, 51 ಬಾಲಕಿಯರನ್ನು ಅಕ್ರಮ ಬಂಧನದಲ್ಲಿ ಇಟ್ಟಿರುವುದು ಪತ್ತೆಯಾಯಿತು. ತಕ್ಷಣ ಎಲ್ಲ ಒತ್ತೆಯಾಳುಗಳನ್ನು ಪೊಲೀಸರು ಬಿಡುಗಡೆಗೊಳಿಸಿ ವ್ಯವಸ್ಥಾಪಕನನ್ನು ಬಂಧಿಸಿದ್ದಾರೆ.

ಕಾಮುಕ ಮ್ಯಾನೇಜರ್ ಬಾಲಕಿಯರನ್ನು ಥಳಿಸಿ, ನಗ್ನವಾಗಿ ನರ್ತಿಸುವಂತೆ ಒತ್ತಾಯಿಸುತ್ತಿದ್ದನು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮದರಸಾದಲ್ಲಿ ಲೈಂಗಿಕ ಕಿರುಕುಳ ಮತ್ತು ಹಿಂಸೆಯ ಬಗ್ಗೆ ಸಂತ್ರಸ್ತ ಬಾಲಕಿಯರು ತುಂಡು ಕಾಗದಗಳ ಮೇಲೆ ಬರೆದು ನೆರೆಹೊರೆ ಮನೆಗಳತ್ತ ಎಸೆಯುತ್ತಿದ್ದರು. ಅಕ್ಕಪಕ್ಕ ನಾಗರಿಕರು ವಿಷಯವನ್ನು ಕಾನೂನು ಜಾರಿ ನಿರ್ದೇಶನಾಲಯದ ಗಮನಕ್ಕೆ ತಂದರು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ- ಅಧಿಕಾರಕ್ಕಾಗಿ ಕಚ್ಚಾಟ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ತವರಲ್ಲಿ ಭಿನ್ನಮತ ...

news

ಬಿಎಸ್ ವೈಗೆ ಗೋವಾ ಸಿಎಂ ಬರೆದಿದ್ದು ಲವ್ ಲೆಟರ್ ಅಂತೆ!

ಬೆಂಗಳೂರು: ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬರೆದಿದ್ದು ...

news

ಟ್ರಾಫಿಕ್ ನಿಯಂತ್ರಿಸಲು ಈ ಪೊಲೀಸ್ ಅಧಿಕಾರಿ ರಸ್ತೆ ಮಧ್ಯದಲ್ಲೇ ನೃತ್ಯ ಮಾಡ್ತಾರೆ! (ವಿಡಿಯೋ)

ನವದೆಹಲಿ: ಟ್ರಾಫಿಕ್ ಪೊಲೀಸರ ಕೆಲಸವೆಂದರೆ ಅಷ್ಟು ಸುಲಭವಲ್ಲ. ಉರಿ ಬಿಸಿಲಿನಲ್ಲಿ ನಿಂತು, ನಾಲ್ಕೂ ಕಡೆ ಗಮನ ...

news

‘ಮೋದಿಯಂತಹ ಅಣ್ಣನಿರುವಾಗ ಭಯಪಡಬೇಕಿಲ್ಲ’

ನವದೆಹಲಿ: ತ್ರಿವಳಿ ತಲಾಖ್ ರದ್ಧತಿ ನಂತರ ಮುಸ್ಲಿಂ ಮಹಿಳೆಯರ ಪರವಾಗಿ ಹೊಸ ಕಾಯಿದೆಗೆ ಸಂಸತ್ತಿನಲ್ಲಿ ಮಸೂದೆ ...

Widgets Magazine
Widgets Magazine