ಅಪ್ರಾಪ್ತರ ಜತೆ ಕಾಮದಾಟವಾಡಿ 5 ರೂ. ಕೊಟ್ಟು ಬಾಯಿ ಮುಚ್ಚಿಸಿದ ವೃದ್ಧ!

ನವದೆಹಲಿ, ಶುಕ್ರವಾರ, 29 ಡಿಸೆಂಬರ್ 2017 (08:30 IST)

Widgets Magazine

ನವದೆಹಲಿ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಅವರಿಗೆ 5 ರೂ. ಕೊಟ್ಟು ಬಾಯಿ ಮುಚ್ಚಿಕೊಂಡಿರುವಂತೆ ಬೆದರಿಕೆ ಹಾಕಿದ ಆರೋಪದಲ್ಲಿ ದೆಹಲಿ ಪೊಲೀಸರು 60 ವರ್ಷದ ವೃದ್ಧನೊಬ್ಬನನ್ನು ಬಂಧಿಸಿದ್ದಾರೆ.
 

ಮೊಹಮ್ಮದ್ ಜೈನುಲ್ ಎಂಬಾತನೇ ಆರೋಪಿ. ಈತ ತನ್ನ ಮನೆಯ ಹೊರಗೆ ಆಟವಾಡಿಕೊಂಡಿದ್ದ 5 ವರ್ಷ ಮತ್ತು 9 ವರ್ಷ ವಯಸ್ಸಿನ ಬಾಲಕಿಯರನ್ನು ಚಾಕಲೇಟ್ ಆಸೆ ತೋರಿಸಿ ಮನೆಯೊಳಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ವೃದ್ಧನ ಬೆದರಿಕೆಯಿಂದಾಗಿ ಬಾಲಕಿಯರಿಬ್ಬರೂ ಸಂಜೆಯವರೆಗೆ ಘಟನೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಆದರೆ ರಾತ್ರಿ ವೇಳೆ 5 ವರ್ಷದ ಬಾಲಕಿ ನೋವಿನಿಂದ ಅಳುತ್ತಿದ್ದಾಗ ಬಾಲಕಿಯ ತಾಯಿಗೆ ಗುಪ್ತಾಂಗದಲ್ಲಿ ಗಾಯ ಪತ್ತೆಯಾಗಿದೆ. ವಿಚಾರಿಸಿದಾಗ ಬಾಲಕಿಯರು ನಡೆದ ಘಟನೆಯನ್ನು ವಿವರಿಸಿದ್ದಾರೆ. ನಂತರ ಈ ಇಬ್ಬರು ಬಾಲಕಿಯರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅತ್ಯಾಚಾರ ಲೈಂಗಿಕ ದೌರ್ಜನ್ಯ ಅಪರಾಧ ಪ್ರಕರಣ Rape Case Sexual Harrassment Crime News

Widgets Magazine

ಸುದ್ದಿಗಳು

news

ಅನಂತ್ ಕುಮಾರ್ ಹೆಗ್ಡೆ ‘ಸಾರಿ’ ಎಂದ್ರು, ಪ್ರಕಾಶ್ ರಾಜ್ ಏನಂದ್ರು?!

ಬೆಂಗಳೂರು: ಸಂವಿಧಾನ ಬದಲಾಯಿಸಲು ಬಂದಿದ್ದೇವೆಂದು ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್ ...

news

ಐತಿಹಾಸಿಕ ತ್ರಿವಳಿ ತಲಾಖ್ ವಿಧೇಯಕ ಅಂಗೀಕಾರ

ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್‌ ನೀಡಿದರೆ ಅಪರಾಧ ಎಂದು ಪರಿಗಣಿಸುವ ಐತಿಹಾಸಿಕ ವಿಧೇಯಕಕ್ಕೆ ...

news

ನಿರಂತರ ಪ್ರಯತ್ನಗಳಿಂದ ಹೊಸ ಆಸೆ ಚಿಗುರುತ್ತದೆ: ಹೊಸ ವರ್ಷಕ್ಕೆ ಸ್ವಾಗತ

ಹೊಸ ವರ್ಷದ ಹೊಸ್ತಿಲಲ್ಲಿರುವಾಗ ಹಿಂದಿನ ವರ್ಷದ ನೆನಪಾಗುತ್ತದೆ, ವರ್ಷಗಳು ಸಣ್ಣ ಚುಕ್ಕೆ ...

news

ಮಹಾದಾಯಿ ಎರಡು ಪರಿಹಾರ ಮಾರ್ಗ ಸೂಚಿಸಿದ ಕುಮಾರಸ್ವಾಮಿ

ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಕೇವಲ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿರುವ ಜೆಡಿಎಸ್ ...

Widgets Magazine