ಗೈರುಹಾಜರಿ: ಬಿಜೆಪಿ ಸಂಸದರಿಗೆ ಅಮಿತ್ ಶಾ ಎಚ್ಚರಿಕೆ

ನವದೆಹಲಿ, ಮಂಗಳವಾರ, 1 ಆಗಸ್ಟ್ 2017 (16:02 IST)

ಸಂಸತ್ತಿನ ಅಧಿವೇಶನದಲ್ಲಿ ಕಲಾಪಕ್ಕೆ ಗೈರುಹಾಜರಾಗುವ ಸಂಸದರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶವನ್ನು ಧಿಕ್ಕರಿಸಿ ಕಲಾಪಕ್ಕೆ ಗೈರುಹಾಜರಾಗುವ ಸಂಸದರ ವಿವರಗಳನ್ನು ಕೊಡುವಂತೆ ಸಂಸದೀಯ ವ್ಯವಹಾರಗಳ ಸಚಿವರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ.
 
ಸಂಸತ್ ಕಲಾಪಕ್ಕೆ ಗೈರುಹಾಜರಾದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿ ಸಂಸದರಿಗೆ ಶಾ ಎಚ್ಚರಿಕೆ ನೀಡಿದ್ದಾರೆ.
 
ಸಂಸತ್ ಅಧಿವೇಶನದಲ್ಲಿ ಪ್ರಮುಖ ಮಸೂದೆಗಳನ್ನು ಮಂಡಿಸುವ ಸಂದರ್ಭದಲ್ಲಿ ವಿಪ್ ನೀಡಿದರೂ ಸಂಸದರು ಗೈರು ಹಾಜರಾಗುತ್ತಿದ್ದಾರೆ. ಇಂತಹ ಅಶಿಸ್ತು ಬಿಜೆಪಿ ಪಕ್ಷ ಯಾವತ್ತೂ ಸಹಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಗಳ ಜತೆ ಜಗಳ: ಅಳಿಯನನ್ನೇ ಸಜೀವವಾಗಿ ದಹಿಸಿದ ಮಾವ

ನಂಜನಗೂಡು: ಮಗಳ ಜೊತೆ ಜಗಳವಾಡಿದ್ದಾನೆ ಎನ್ನುವ ಆಕ್ರೋಶದಿಂದ ಅಳಿಯನನ್ನು ಸಜೀವವಾಗಿ ದಹಿಸಿದ ಘಟನೆ ...

news

ಬಿಹಾರ್ ಸಿಎಂ ನಿತೀಶ್ ಕುಮಾರ್ ಶಾಸಕ ಸ್ಥಾನ ರದ್ದತಿ ಕೋರಿ ಪಿಐಎಲ್

ನವದೆಹಲಿ: ನೆನೆಗುದಿಯಲ್ಲಿದ್ದ ಅಪರಾಧ ಪ್ರಕರಣವನ್ನು ಕೇಂದ್ರ ಚುನಾವಣೆ ಆಯೋಗದ ಮುಂದೆ ಮುಚ್ಚಿಟ್ಟಿದ್ದ ...

news

ಸಿಎಂ ಮೇಲೆ ಗೂಬೆ ಕೂರಿಸೋದು ಸರಿಯಲ್ಲ: ಹೊರಟ್ಟಿ

ಬೆಂಗಳೂರು: ವೀರಶೈವ ಪ್ರತ್ಯೇಕ ಲಿಂಗಾಯುತ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮೇಲೆ ಗೂಬೆ ...

news

ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಸೌದಿಗೆ ಕರೆದೊಯ್ದು ಮಾಡಿದ್ದೇನು ಗೊತ್ತಾ..?

ಅರೇಬಿಕ್ ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಕೊಪ್ಪಳ ಮೂಲದ ಮಹಿಳೆಯನ್ನ ಸೌದಿ ಅರೇಬಿಯಾಗೆ ಕರೆದೊಯ್ದು ಕಸ ...

Widgets Magazine