ಗುಟ್ಟು ಬಿಟ್ಟುಕೊಡದ ಕಮಲ್ ಹಾಸನ್-ಕೇಜ್ರಿವಾಲ್.. ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ಗೊತ್ತಾ..?

ಚೆನ್ನೈ, ಗುರುವಾರ, 21 ಸೆಪ್ಟಂಬರ್ 2017 (16:31 IST)

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಮನೆಗೆ ಭೇಟಿ ಮಾತುಕತೆ ನಡೆಸಿದರು. ಕಮಲ್ ಹಾಸನ್ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ ಬೆನ್ನಲ್ಲೇ ನಡೆದ ಈ ಭೇಟಿ ಭಾರೀ ಮಹತ್ವ ಪಡೆದುಕೊಂಡಿತ್ತು. ಆದರೆ, ಕಮಲ್ ಹಾಸನ್ ಎಎಪಿಗೆ ಸೇರುತ್ತಾರಾ..? ಅಥವಾ ಇನ್ಯಾವುದೇ ರಾಜಕೀಯ ಬೆಳವಣಿಗೆಯ ಕುತೂಹಲವನ್ನ ಉಭಯ ನಾಯಕರು ಹಾಗೆ ಇಟ್ಟಿದ್ದಾರೆ.
 


ಭೇಟಿ ಬಳಿಕ ಕಮಲ್ ಹಾಸನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಂಟಿ ಸುದ್ದಿಗೋಷ್ಠಿ ನಡೆಸಿದರೂ ಯಾವುದೇ ನಿರ್ಣಯ ಹೊರಬೀಳಲಿಲ್ಲ. ಕಮಲ್ ಹಾಸನ್ ಧೈರ್ಯ ಮತ್ತು ಸಮಗ್ರತೆಯ ಪ್ರತೀಕ. ದೇಶ ಭ್ರಷ್ಟಾಚಾರ ಮತ್ತು ಕೋಮುವಾದದಂತಹ ಸಮಸ್ಯೆ ಎದುರಿಸುತ್ತಿರುವಾಗ ಸಮಗ್ರತೆ ಮನೋಭಾವದ ಜನರು ಮಾತುಕತೆ ನಡೆಸಬೇಕಾದ ಅಗತ್ಯವಿದೆ. ನಾವಿಬ್ಬರ ಒಂದೊಳ್ಳೆ ಮಾತುಕತೆ ನಡೆಸಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
  
ಅರವಿಂದ್ ಕೇಜ್ರಿವಾಲ್ ನನ್ನನ್ನ ಭೇಟಿ ಮಾಡಿದ್ದು ನನಗೆ ದೊಡ್ಡ ಗೌರವ. ನಮ್ಮಿಬ್ಬರ ಭೇಟಿಯ ಏಕೈಕ ಉದ್ದೇಶ ಭ್ರಷ್ಟಾಚಾರ ವಿರೋಧಿ ಹೋರಾಟ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ನಾವಿಬ್ಬರೂ ಮಾತುಕತೆ ನಡೆಸಿದ್ದೇವೆ. ಇದು ನನಗೆ ಕಲಿಯುವಿಕೆಯ ಸಮಯ ಎಂದು ಕಮಲ್ ಹಾಸನ್ ಹೇಳಿದರು. ಆದರೆ, ಮುಂದಿನ ನಡೆ ಏನು ಎಂಬ ಬಗ್ಗೆ ಇಬ್ಬರೂ ನಾಯಕರು ಗುಟ್ಟು ಬಿಟ್ಟು ಕೊಡಲಿಲ್ಲ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಮಹಾದೇವಪ್ಪ, ಶಾಸಕ ಸೋಮಶೇಖರ್ ಕಾರು ಅಪಘಾತ

ಮಂಡ್ಯ: ಸಚಿವ ಮಹಾದೇವಪ್ಪ ಮತ್ತು ಶಾಸಕ ಸೋಮಶೇಖರ್ ಕಾರು ಪರಸ್ಪರ ಡಿಕ್ಕಿಯಾಗಿ ಜಖಂಗೊಂಡ ಘಟನೆ ವರದಿಯಾಗಿದೆ.

news

ಆನ್`ಲೈನ್`ನಲ್ಲಿ ಊಹಾಪೋಹಗಳಿಗೆ ಎಡೆಮಾಡಿದ ಫೋಟೋ..!

ಹುಡುಗಿಯೊಬ್ಬಳ ಜೊತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣಿಸಿಕೊಂಡಿರುವ ಫೋಟೋವೊಂದು ...

news

ಎಸ್‌,ಎಂ, ಕೃಷ್ಣ ಸೇರ್ಪಡೆ ಬಿಜೆಪಿಗೆ ಲಾಭವಾಗದಿದ್ದರಿಂದ ಐಟಿ ದಾಳಿ: ಗುಂಡೂರಾವ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಲಾಭವಾಗದಿರುವ ...

news

ಇದೀಗ, ಮದ್ಯ ಖರೀದಿಸಲು ಆಧಾರ ಕಾರ್ಡ್ ಬೇಕಂತೆ...!

ನವದೆಹಲಿ: ಮುಂದಿನ ಬಾರಿ ನೀವು ಹೈದರಾಬಾದ್‌ನಲ್ಲಿರುವ ಪಬ್‌ಗೆ ಹೋದಲ್ಲಿ ನಿಮ್ಮ ಆಧಾರ್ ಕಾರ್ಡ್ ...

Widgets Magazine
Widgets Magazine