19 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್‌ರೇಪ್

ಭೋಪಾಲ್, ಶುಕ್ರವಾರ, 3 ನವೆಂಬರ್ 2017 (16:08 IST)

ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಕಾಮುಕರು ಸತತ ಮೂರು ಗಂಟೆಗಳ ಕಾಲ ಗ್ಯಾಂಗ್‌ರೇಪ್ ಎಸಗಿದ ಘಟನೆ ವರದಿಯಾಗಿದೆ.
ಐಎಎಸ್ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಹಬೀಬ್‌ಗಂಜ್ ರೈಲ್ವೆ ನಿಲ್ದಾಣದ ಬಳಿಯಿಂದ ಅಪಹರಿಸಿದ ನಾಲ್ವರು ಆರೋಪಿಗಳು ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ.
 
ಮಹಾರಾಣಾ ಪ್ರತಾಪ್ ನಗರದಲ್ಲಿರುವ ಕೋಚಿಂಗ್ ಕ್ಲಾಸ್ ಮುಗಿಸಿಕೊಂಡು ವಿದ್ಯಾರ್ಥಿನಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಆರೋಪಿಗಳು ಆಕೆಯನ್ನು ಅಪಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ನಾಲ್ವರು ಆರೋಪಿಗಳು ವಿದ್ಯಾರ್ಥಿನಿಯ ಕೈಕಾಲು ಕಟ್ಟಿ ವಾಹನದೊಳಗೆ ತಳ್ಳಿದ್ದಾರೆ. ಆರೋಪಿಗಳು ಅತ್ಯಾಚಾರವೆಸಗುವ ಮುನ್ನ ರಸ್ತೆಯಲ್ಲಿಯೇ ಚಹಾ ಕುಡಿದು ಗುಟ್ಕಾ ತೆಗೆದುಕೊಂಡಿದ್ದಾರೆ ಎಂದ ಪೊಲೀಸರು ತಿಳಿಸಿದ್ದಾರೆ.
 
ಗ್ಯಾಂಗ್‌ರೇಪ್‌ಗೊಳಗಾದ ವಿದ್ಯಾರ್ಥಿನಿಯ ತಾಯಿ ಪೊಲೀಸ್ ಪೇದೆಯಾಗಿದ್ದು, ತಂದೆ ರೈಲ್ವೆ ಪೊಲೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
 
ಆರೋಪಿಗಳಾದ ಗೋಲು ಬಿಹಾರಿ, ಅಮರ್ ಚಾಂಟು, ರಾಜೇಶ್ ಮತ್ತು ರಮೇಶ್ ಎಂದು ಗುರುತಿಸಲಾಗಿದೆ. ಆವರ ವಿರುದ್ಧ ಗ್ಯಾಂಗ್‌ರೇಪ್, ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚೆನ್ನೈನಲ್ಲಿ ಭಾರೀ ಮಳೆ ಅವಾಂತರ: ಇಂದೂ ಸಹ ಭಾರೀ ಮಳೆ ಸಾಧ್ಯತೆ

ಚೆನ್ನೈ: ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚೆನ್ನೈ ಹಾಗೂ ತಮಿಳುನಾಡಿನ ಕರಾವಳಿ ಭಾಗದ ಹಲವೆಡೆ ಇಂದೂ ಸಹ ...

news

ಜೆಡಿಎಸ್‌ನಿಂದ ಕರ್ನಾಟಕ ವಿಕಾಸ ರಥಯಾತ್ರೆ: ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ನವೆಂಬರ್ 7 ರಿಂದ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತಿದ್ದು, ...

news

ಅಪೋಲೊ ಆಸ್ಪತ್ರೆಯಲ್ಲಿ ನಟಿ ಖುಷ್ಬೂಗೆ ಶಸ್ತ್ರಚಿಕಿತ್ಸೆ

ಚೆನ್ನೈ: ಖ್ಯಾತ ಚಿತ್ರ ನಟಿ ಖುಷ್ಬೂ ಸುಂದರ್ ಇಲ್ಲಿನ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ...

news

ನಕಲಿ ಮೇಲ್ ಐಡಿ ಬಳಸಿ ದುಬಾರಿ ವಸ್ತು ಖರೀದಿಸಿ ಅಮೆಜಾಗ್ ಗೇ ಪಂಗನಾಮ..!

ಮೈಸೂರು: ನಕಲಿ ಇ-ಮೇಲ್ ಬಳಸಿ ದುಬಾರಿ ಬೆಲೆ ವಸ್ತು ಖರೀದಿಸಿದ್ದವರು ಅಮೆಜಾನ್ ಕಂಪನಿಗೆ ಲಕ್ಷಾಂತರ ರೂ. ನಾಮ ...

Widgets Magazine
Widgets Magazine