ಜೈ ಶ್ರೀರಾಮ್ ಹೇಳಿ ಫತ್ವಾ ಪಡೆದ ಬಿಹಾರ ಸಚಿವ

ಪಾಟ್ನಾ, ಸೋಮವಾರ, 31 ಜುಲೈ 2017 (10:55 IST)

ಪಾಟ್ನಾ: ಬಿಹಾರದ ಸಚಿವ ಖುರ್ಷಿದ್ ಆಲಿಯಾಸ್ ಫಿರೋಜ್ ಅಹಮ್ಮದ್ ‘ಜೈ ಶ್ರೀರಾಮ್’ ಎಂದು ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಬಹಿರಂಗವಾಗಿ ಜೈ ಶ್ರೀರಾಂ ಎಂದಿದ್ದಕ್ಕೆ ಇದೀಗ ಕ್ಷಮೆ ಕೇಳುವ ಹಂತಕ್ಕೆ ತಲುಪಿದ್ದಾರೆ.


 
ಮೂಲತಃ ಮುಸ್ಲಿಂ ಧರ್ಮೀಯರಾದ ಖುರ್ಷಿದ್ ಬಹಿರಂಗವಾಗಿ ಜೈ ಶ್ರೀರಾಮ್ ಎಂದಿದ್ದರು. ಇದು ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ವಿರುದ್ಧ ಧಾರ್ಮಿಕ ಗುರುಗಳ ಸಚಿವರ ವಿರುದ್ಧ ಫತ್ವಾ ಹೊರಡಿಸಿದ್ದರು.
 
ಇಷ್ಟೆಲ್ಲಾ ರಗಳೆಗಳಾದ ಮೇಲೆ ಸಚಿವರು ಇದೀಗ ನಾನು ಜೈ ಶ್ರೀರಾಮ್ ಹೇಳಿರುವುದರಿಂದ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ನನಗೆ ಹೀಗೆ ಹೇಳಲು ಯಾರೂ ಬಲವಂತ ಮಾಡಿಲ್ಲ. ಯಾವುದೇ ಕೆಟ್ಟ ಉದ್ದೇಶದಿಂದ ನಾನು ಹೀಗೆ ಹೇಳಿಲ್ಲ. ಜೈ ಶ್ರೀರಾಮ್ ಎನ್ನುವುದರಿಂದ ಬಿಹಾರ ಅಭಿವೃದ್ಧಿಯಾಗುವುದಿದ್ದರೆ, ಹಾಗೆ ಹೇಳಲು ಹಿಂಜರಿಯುವುದಿಲ್ಲ. ನೋವಾಗಿದ್ದರೆ ಕ್ಷಮಿಸಿ ಎಂದು ವಿವಾದಗಳಿಗೆ ತೆರೆ ಎಳೆಯವ ಪ್ರಯತ್ನ ನಡೆಸಿದ್ದಾರೆ.
 
ಇದನ್ನೂ ಓದಿ..  ಭ್ರಷ್ಟಾಚಾರ ತಡೆಗೆ ಮೋದಿ ಸರ್ಕಾರದ ಹೊಸ ಐಡಿಯಾ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಜೈ ಶ್ರೀರಾಮ್ ಬಿಹಾರ ಸಚಿವ ಮುಸ್ಲಿಂ ಹಿಂದೂ ರಾಷ್ಟ್ರೀಯ ಸುದ್ದಿಗಳು Muslim Hindu Bihar Minister National News Jai Sria Ram

ಸುದ್ದಿಗಳು

news

ಅಮೆರಿಕಾದ 755 ರಾಯಭಾರಿಗಳಿಗೆ ದೇಶ ತೊರೆಯುವಂತೆ ರಷ್ಯಾ ಆದೇಶ

ರಷ್ಯಾದಲ್ಲಿರುವ ಸುಮಾರು 755 ಅಮೆರಿಕ ರಾಯಭಾರಿಗಳನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಲೇ ದೇಶ ...

news

ಭ್ರಷ್ಟಾಚಾರ ತಡೆಗೆ ಮೋದಿ ಸರ್ಕಾರದ ಹೊಸ ಐಡಿಯಾ!

ನವದೆಹಲಿ: ನೋಟು ನಿಷೇಧ, ಜಿಎಸ್ ಟಿ ಸೇರಿದಂತೆ ಕಪ್ಪು ಹಣ, ಭ್ರಷ್ಟಾಚಾರ ನಿಗ್ರಹಕ್ಕೆ ಸಾಕಷ್ಟು ಕ್ರಮ ...

news

ಅಬ್ದುಲ್ ಕಲಾಂ ಸಮಾಧಿ ಬಳಿ ಭಗವದ್ಗೀತೆ ಪುಸ್ತಕ ವಿವಾದಕ್ಕೆ ಕಾರಣವಾಯ್ತು

ರಾಮೇಶ್ವರಂ: ದಿವಂಗತ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಬದುಕಿದ್ದಾಗ ಸರ್ವಧರ್ಮವೂ ...

news

ದೇಶದ ಈ 29 ನಗರಗಳಲ್ಲಿ ಯಾವಾಗ ಬೇಕಾದರೂ ಭೂಕಂಪವಾಗಬಹುದು..!

ದೆಹಲಿ ಮತ್ತು 9 ರಾಜ್ಯಗಳ ರಾಜಧಾನಿಗಳು ಸೇರಿ ದೇಶದ 29 ನಗರಗಳು ಮತ್ತು ಪಟ್ಟಣಗಳು ತೀವ್ರ ಮತ್ತು ಅತೀ ತೀವ್ರ ...

Widgets Magazine