ಕೊಲೆಗಡುಕರನ್ನು ಸಮರ್ಥಿಸುತ್ತಿರುವ ಬಿಜೆಪಿ ನಾಯಕರು: ಖರ್ಗೆ

ನವದೆಹಲಿ, ಸೋಮವಾರ, 31 ಜುಲೈ 2017 (12:50 IST)

ಗೋವು ರಕ್ಷಣೆಯ ನೆಪದಲ್ಲಿ ಬಿಜೆಪಿ ನಾಯಕರು ಕೊಲೆಗಡುಕರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
 
ಲೋಕಸಭೆಯ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಗೋವು ರಕ್ಷಣೆಯ ನೆಪದಲ್ಲಿ ಹತ್ಯೆಗಳನ್ನು ಎಸಗುತ್ತಿದ್ದಾರೆ. ಇದರಲ್ಲಿ ಬಿಜೆಪಿ ಸಂಪರ್ಕದಲ್ಲಿರುವ ಭಜರಂಗದಳ ಸೇರಿದಂತೆ ಸಂಘಟನೆಗಳು ಭಾಗಿಯಾಗಿವೆ ಎಂದು ಆರೋಪಿಸಿದರು.
 
70 ವರ್ಷಗಳ ಇತಿಹಾಸದಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲ.ಆದರೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿ ಪಕ್ಷ ಬಹಿರಂಗವಾಗಿ ಕೊಲೆಗಡುಕರನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಪ್ರಧಾನಿ ಮೋದಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಸದನದಲ್ಲಿ ಕೋಲಾಹಲವೆಬ್ಬಿಸಿದವು 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿ ಪ್ರಧಾನಿ ಮೋದಿ ಅಮಿತ್ ಶಾ ಸಂಸತ್ ಅಧಿವೇಶನ Bjp Mallikarjun Kharge Pm Modi Amit Sha Parliament Session

ಸುದ್ದಿಗಳು

news

ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಇನ್ನಿಲ್ಲ

ಬಿಜೆಪಿಯ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ವಿಧಿವಶರಾಗಿದ್ದಾರೆ. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಬಿ. ...

news

ಪತ್ನಿಯನ್ನ ಕೂಡಿ ಹಾಕಿ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ ಪತಿ ಬಂಧನ

ಪಾಪಿ ಪತಿಯೊಬ್ಬ ಮಹಿಳೆಯನ್ನ ಕಬ್ಬಿಣದ ಸರಳಿನಲ್ಲಿ ಬಂಧಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ...

news

ಇನ್ಮುಂದೆ ಎಸಿ ಬೋಗಿಗಳಲ್ಲಿ ಹೊದಿಕೆ ನೀಡದಿರಲು ರೈಲ್ವೆ ಇಲಾಖೆ ಚಿಂತನೆ

ರೈಲಿನ ಎ.ಸಿ.ಬೋಗಿಯಲ್ಲಿ ಪ್ರಯಾಣಿಸುವವರಿಗೆ ಕಹಿಸುದ್ದಿ. ಇನ್ಮುಂದೆ ಪ್ರಯಾಣಿಕರಿಗೆ ಹೊದಿಕೆಗಳನ್ನು ನೀಡದೆ ...

news

ಪಟಾಕಿ ಗೋದಾಮಿನಲ್ಲಿ ಬೆಂಕಿ: ಇಬ್ಬರು ಬಾಲಕರು ಸಾವು

ಪಟಾಕಿ ಗೋಡೌನ್ ಗೆ ಬೆಂಕಿ ಬಿದ್ದಪರಿಣಾಮ ಇಬ್ಬರು ಬಾಲಕರು ದಾರುಣವಾಗಿ ಮೃತಪಟ್ಟಿರುವ ಘಟನೆ ತಿರುಪತಿಯ ...

Widgets Magazine