ಕ್ಯಾಬ್‌ ಚಾಲಕ, ಸ್ನೇಹಿತರಿಂದ ಯುವತಿಯ ಮೇಲೆ ಗ್ಯಾಂಗ್‌ರೇಪ್

ನವದೆಹಲಿ, ಶುಕ್ರವಾರ, 17 ನವೆಂಬರ್ 2017 (12:28 IST)

rape victim

ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಆಕೆಯ ಬಳಿಯಿದ್ದ ಹಣ, ಚಿನ್ನ ಮತ್ತು ಮೊಬೈಲ್ ದೋಚಿದ ಹೇಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ವರದಿಯಾಗಿದೆ.
 
ಯುವತಿ ರಾತ್ರಿ ವೇಳೆ ಕ್ಯಾಬ್‌ನಲ್ಲಿ ತನ್ನ ಮನೆಯತ್ತ ಹೊರಟಿದ್ದಾಗ ಮಾರ್ಗಮಧ್ಯದಲ್ಲಿ ಕಾರು ನಿಲ್ಲಿಸಿದ ಚಾಲಕ ತನ್ನ ಗೆಳೆಯರನ್ನು ಹತ್ತಿಸಿಕೊಂಡಿದ್ದಾನೆ. ನಂತರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾಳೆ. ಯುವತಿ ಜೋರಾಗಿ ಕೂಗಲು ಯತ್ನಿಸಿದಾಗ ಆಕೆಯ ಬಾಯಿ ಮುಚ್ಚಿದ್ದ ಕಾಮುಕರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಸರದಿಯಲ್ಲಿ ಗ್ಯಾಂಗ್‌ ರೇಪ್ ಎಸಗಿದ್ದಾರೆ.
 
ಯುವತಿಯ ಕೊರಳಲ್ಲಿದ್ದ ಚಿನ್ನ ಮತ್ತು ಪರ್ಸ್‌ನಲ್ಲಿದ್ದ 12 ಸಾವಿರ ರೂಪಾಯಿ ಹಾಗೂ ಮೊಬೈಲ್ ದೋಚಿ ಅವಳನ್ನು ರಸ್ತೆಯ ಮೇಲೆ ಎಸೆದು ಪರಾರಿಯಾಗಿದ್ದಾರೆ.
 
ಯುವತಿ ನಂತರ ಹತ್ತಿರದಲ್ಲಿದ್ದ ಹಾಜ್ ಖಾಸ್ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್, ಅಪಹರಣ ದೂರು ದಾಖಲಿಸಿದ್ದಾಳೆ.
 
ದೂರು ದಾಖಲಿಸಿಕೊಂಡ ಪೊಲೀಸರು ಯುವತಿ ನೀಡಿದ ಹೇಳಿಕೆಯಂತೆ ತನಿಖೆ ಮುಂದುವರಿಸಿದ್ದಾರೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಈ ಸಂಬಂಧ ಹಾಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ನಾಯಕರಿಂದಲೇ ಯಡಿಯೂರಪ್ಪ, ಶೋಭಾ ಅಶ್ಲೀಲ ಫೋಟೋಗಳ ಬಿಡುಗಡೆ?: ದೂರು ದಾಖಲು

ಮಂಗಳೂರು: ಸಾಮಾಜಿಕ ಅಂತರ್ಜಾಲ ತಾಣವಾದ ವಾಟ್ಸಪ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ...

news

ಮುತಾಲಿಕ್‌ ಫೋಟೋದೊಂದಿಗೆ ಅಶ್ಲೀಲ ಫೋಟೋ: ಜೆಡಿಎಸ್ ಮುಖಂಡನ ಬಂಧನ

ಬೆಳಗಾವಿ: ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಫೋಟೋದೊಂದಿಗೆ ಅಶ್ಲೀಲ ಫೋಟೋ ಲಗತ್ತಿಸಿ ಪೋಸ್ಟ್ ...

news

ಸಿಎಂ ಸಿದ್ದರಾಮಯ್ಯಗೆ ತುರ್ತು ಕರೆ ಮಾಡಿದ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದೂ ನಾಲ್ವರು ...

news

ಸದನಕ್ಕೆ ತಲೆತೋರಿಸಿ ಕಲಾಪಕ್ಕೆ ನಾಪತ್ತೆಯಾದ ಕುಮಾರಸ್ವಾಮಿ

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನ ಆರಂಭವಾಗಿ ನಾಲ್ಕು ದಿನ ಕಳೆದರೂ ...

Widgets Magazine
Widgets Magazine