ನಟಿ ಪ್ರಿಯಾಂಕ ಚೋಪ್ರಾ ಗೆ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್ ಪಕ್ಷ

ಮುಂಬೈ, ಶುಕ್ರವಾರ, 13 ಜುಲೈ 2018 (14:05 IST)

ಮುಂಬೈ : ರಾಜಕೀಯ ನಾಯಕರು ಮಾಡುವ ಭರದಿಂದ ಎಡವಿ ಅಪಹಾಸ್ಯಕ್ಕೆ ಗುರಿಯಾಗಿರುವುದನ್ನು ನಾವು ಹಲವು ಬಾರಿ ಕೇಳಿರುತ್ತೇವೆ. ಅದೇರೀತಿ ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಹೆಸರಿನಲ್ಲಿ ಎಡವಟ್ಟುವೊಂದನ್ನು  ಮಾಡಿಕೊಂಡು ಅಪಹಾಸ್ಯಕ್ಕೆ ಗುರಿಯಾಗಿದೆ.


ಗುರುವಾರ ಸಂಜೆ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಲೈವ್ ಆಗಿ, ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆಂದು ದೂರಿದ್ದಾರೆ. ಹಾಗೇ ಯುಪಿಎ ಆಡಳಿತಾವಧಿಯಲ್ಲಿ ದೇಶಾದ್ಯಂತ 1141 ಮಣ್ಣು ಪರೀಕ್ಷಾ ಲ್ಯಾಬ್​ಗಳಿದ್ದವು ಎಂದು ತಿಳಿಸಿದ್ದಾರೆ.


ಆದರೆ ಈ ಟ್ವೀಟ್​ ಅನ್ನು ಬಿಜೆಪಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರಿಗೆ ಟ್ಯಾಗ್​ ಮಾಡಬೇಕಿದ್ದವರು ಬಾಲಿವುಡ್ ನಟಿ​ ಪ್ರಿಯಾಂಕ ಚೋಪ್ರಾ ಅವರಿಗೆ ಟ್ಯಾಗ್ ಮಾಡಿ ಎಲ್ಲರ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಈ ತಪ್ಪು ಗಮನಕ್ಕೆ ಬಂದ ತಕ್ಷಣವೇ ಕಾಂಗ್ರೆಸ್​ ಈ  ಟ್ವೀಟ್ ನ್ನು ಡಿಲೀಟ್ ಮಾಡಿತಾದರೂ ಈ ಯಡವಟ್ಟಿನಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಂದಲೂ ಅಪಹಾಸ್ಯಕ್ಕೆ ಒಳಗಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ರಾಜಕೀಯ ನಾಯಕರು ಭಾಷಣ ಕಾಂಗ್ರೆಸ್ ಪಕ್ಷ ಬಾಲಿವುಡ್ ಪ್ರಿಯಾಂಕ ಚೋಪ್ರಾ Mumbai Speech Bollywood Congress Party Political Leader Priyanka Chopra

ಸುದ್ದಿಗಳು

news

ಕಾಲೇಜ್ ಆಡಳಿತದ ತರಬೇತಿಯಲ್ಲಿ ಜೀವ ಕಳೆದುಕೊಂಡ ತಮಿಳುನಾಡಿನ ಹುಡುಗಿ

ಕೊಯಮತ್ತೂರಿನ ಖಾಸಗಿ ಕಾಲೇಜಿ ಒಂದರಲ್ಲಿ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿ ನಡೆಸಿದ ಡ್ರಿಲ್ ತರಬೇತಿಯಲ್ಲಿ ...

news

ಕಾಡಾನೆ ದಾಳಿ; ಗಂಭೀರ ಗಾಯ

ಒಂದೆಡೆ ಮಳೆ ಮುಂದುವರೆದು ಜನ ಜೀವನ ತತ್ತರಗೊಳ್ಳುವಂತೆ ಮಾಡಿದ್ದರೆ ಮತ್ತೊಂದೆಡೆ, ಕಾಡಾನೆ ಹಾವಳಿ ಜನರ ...

news

ಗೋಲಿ ಆಡಲು ಬಾರದ ಗೆಳೆಯನನ್ನು ಕೊಲೆ ಮಾಡಿದ ಆರೋಪಿಗಳು ಅರೆಸ್ಟ್!

ಆತ ತನ್ನ ಪಾಡಿಗೆ ತಾನಿದ್ದ. ಗೆಳೆಯರು ಗೋಲಿ ಆಡೋಣ ಬಾ ಕಣೋ ಎಂದು ಕರೆದಿದ್ದಾರೆ. ಆದರೆ ಆತ ಊಹೂಂ... ನಾನು ...

news

ಕಡಲ್ಕೊರೆತ: ಎಕೈಕ ರಸ್ತೆ ಸಂಪರ್ಕ ಕಳೆದುಕೊಳ್ಳುವ ಭೀತಿ

ಭಾರಿ ಮಳೆ ಈ ಭಾಗದ ಜನರನ್ನು ಹೈರಾಣಾಗಿಸಿದೆ. ಈಗ ಇಲ್ಲಿರುವ ಏಕೈಕ ರಸ್ತೆ ಕಡಲ ಕೊರೆತಕ್ಕೆ ಸಿಲುಕಿದೆ. ...

Widgets Magazine