ಅಬ್ದುಲ್ ಕಲಾಂ ಸಮಾಧಿ ಬಳಿ ಭಗವದ್ಗೀತೆ ಪುಸ್ತಕ ವಿವಾದಕ್ಕೆ ಕಾರಣವಾಯ್ತು

ರಾಮೇಶ್ವರಂ, ಸೋಮವಾರ, 31 ಜುಲೈ 2017 (10:29 IST)

ರಾಮೇಶ್ವರಂ: ದಿವಂಗತ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಬದುಕಿದ್ದಾಗ ಸರ್ವಧರ್ಮವೂ ಒಂದೇ ಎಂದು ಅಕ್ಷರಶಃ ಪಾಲಿಸಿದವರು. ಆದರೆ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡ ಅವರ ಸಮಾಧಿ ಸ್ಮಾರಕದಲ್ಲಿ ಭಗವದ್ಗೀತೆ ಪುಸ್ತಕ ಇರಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.


 
ಸ್ಮಾರಕದಲ್ಲಿರುವ ಕಲಾಂ ಮರದ ಪ್ರತಿಮೆಯ ಬಳಿ ಹಿಂದೂಗಳ ಪವಿತ್ರ ಧರ್ಮ ಗ್ರಂಥವಾದ ಭಗವದ್ಗೀತೆ ಇರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿವಾದವನ್ನು ಬಗೆಹರಿಸಲು ಮುಂದಾಗಿರುವ ಕಲಾಂ ಕುಟುಂಬಸ್ಥರು ಅಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಗ್ರಂಥವಾದ ಖುರಾನ್ ಮತ್ತು ಬೈಬಲ್ ನ್ನೂ ಇಡಲು ಸಲಹೆ ನೀಡಿದೆ.
 
ಆದರೆ ಸ್ಮಾರಕದ ಬಳಿ ಖುರಾನ್ ಮತ್ತು ಬೈಬಲ್ ನ್ನು ಇಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಹಿಂದೂ ಸಂಘಟನೆ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇಲ್ಲಿ ಭಗವದ್ಗೀತೆ ಹೊರತುಪಡಿಸಿ ಬೇರೆ ಗ್ರಂಥಗಳನ್ನು ಇಡಲು ಅನುಮತಿ ಇರಲಿಲ್ಲ ಎನ್ನುವುದು ಈ ನಾಯಕರ ವಾದ. ಆದರೆ ಕಲಾಂ ಎಲ್ಲಾ ಭಾರತೀಯರಿಗೂ ಸೇರಿದವರಾಗಿದ್ದರು. ಅವರು ಯಾವುದೇ ಧರ್ಮಕ್ಕೆ ಸೀಮಿತವಾದವರಲ್ಲ. ಈ ವಿಚಾರದಲ್ಲಿ ವಿವಾದ ಮಾಡಬೇಡಿ ಎಂದು ಕಲಾಂ ಕುಟುಂಬ ಮನವಿ ಮಾಡಿದೆ.
 
ಇದನ್ನೂ ಓದಿ..  ಕೊಹ್ಲಿ ಜತೆ ಬರಿಮೈ ತೋರಿಸಿದ ಕೆಎಲ್ ರಾಹುಲ್ ಕಾಲೆಳೆದ ಯುವರಾಜ್ ಸಿಂಗ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇಶದ ಈ 29 ನಗರಗಳಲ್ಲಿ ಯಾವಾಗ ಬೇಕಾದರೂ ಭೂಕಂಪವಾಗಬಹುದು..!

ದೆಹಲಿ ಮತ್ತು 9 ರಾಜ್ಯಗಳ ರಾಜಧಾನಿಗಳು ಸೇರಿ ದೇಶದ 29 ನಗರಗಳು ಮತ್ತು ಪಟ್ಟಣಗಳು ತೀವ್ರ ಮತ್ತು ಅತೀ ತೀವ್ರ ...

news

ಮತದಾನದವರೆಗೂ ಗುಜರಾತ್ ಶಾಸಕರು ಕರ್ನಾಟಕದಲ್ಲೇ?

ಬೆಂಗಳೂರು: ಗುಜರಾತ್ ನಲ್ಲಿ ರಾಜ್ಯ ಸಭೆ ಚುನಾವಣೆ ನಡೆಯುವವರೆಗೂ ಅಲ್ಲಿನ ಶಾಸಕರಿಗೆ ಬೆಂಗಳೂರೇ ...

news

ಐಟಿ ರಿಟರ್ನ್ಸ್ ಗೆ ಇಂದೇ ಕಡೇ ದಿನ: ಗಡುವು ವಿಸ್ತರಣೆ ಇಲ್ಲ

2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌(ಐಟಿಆರ್‌) ಸಲ್ಲಿಸಲು ಇಂದೇ ಕಡೆಯ ದಿನವಾಗಿದ್ದು, ಈ ...

news

ಶತೃಗಳನ್ನು ಮಣಿಸುವ ಸಾಮರ್ಥ್ಯ ನಮ್ಮ ಸೇನೆಗಿದೆ: ಕ್ಸಿ ಜಿನ್ ಪಿಂಗ್

ಶತೃ ರಾಷ್ಟ್ರಗಳ ಎದುರು ಬಲಿಷ್ಠ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿ ಹೊಸ ಅಧ್ಯಾಯ ಸೃಷ್ಟಿಸುವ ಸಾಮರ್ಥ್ಯ ...

Widgets Magazine