ಮದುವೆ ಡ್ರೆಸ್ ಕದಿಯಲು ಮಹಿಳೆಯನ್ನು ಕೊಲೆ ಮಾಡಿದ ದಂಪತಿ!

ನೋಯ್ಡಾ, ಬುಧವಾರ, 12 ಸೆಪ್ಟಂಬರ್ 2018 (08:58 IST)


ನೋಯ್ಡಾ: ಯಾವುದೆಲ್ಲಾ ಕಾರಣಕ್ಕೆ ಕೊಲೆ ನಡೆಯುತ್ತದೆ ಎಂದು ಈ ಘಟನೆ ಓದಿದರೆ ಅಚ್ಚರಿಯಾಗುತ್ತದೆ. ಇಲ್ಲೊಬ್ಬ ದಂಪತಿ ಮದುವೆಯ ಬೆಲೆ ಬಾಳುವ ಡ್ರೆಸ್ ಕದಿಯಲು ತಮ್ಮ ಬಂಧುವನ್ನೇ ಕೊಲೆ ಮಾಡಿದ್ದಾರೆ.
 
ಇದು ನಡೆದಿರುವುದು ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ. ಕೊಲೆಯಾದ 25 ವರ್ಷದ ಮಹಿಳೆ ಮಾಲಾ ಗುಪ್ತಾ ಎರಡು ವರ್ಷಗಳ ಹಿಂದೆ ಕುಟುಂಬದವರ ವಿರೋಧದ ನಡುವೆ ಮದುವೆಯಾಗಿದ್ದಳು. ಮದುವೆ ಬಳಿಕ ಇವರಿಬ್ಬರೂ ಗಾಝಿಯಾಬಾದ್ ನ ಅಪಾರ್ಟ್ ಮೆಂಟ್ ಒಂದರ ಎರಡನೇ ಮಹಡಿಯಲ್ಲಿ ವಾಸವಿದ್ದರು.
 
ಅದೇ ಅಪಾರ್ಟ್ ಮೆಂಟ್ ನ ಒಂದನೇ ಮಹಡಿಯಲ್ಲಿ ವಾಸವಿದ್ದ ಇವರ ಬಂಧುಗಳೆನಿಸಿಕೊಂಡ ಆರೋಪಿ ದಂಪತಿ ಸೌರವ್ ದಿವಾಕರ್ ಮತ್ತು ರಿತು ನೆಂಟಸ್ತನ ನೆಪದಿಂದ ಕೊಲೆಗೀಡಾದ ಮಹಿಳೆ ಮಾಲಾ ಮನೆಗೆ ಬಂದಿದ್ದರು. ಈ ವೇಳೆ ಮಾಲಾ ತನ್ನ ಮದುವೆಯ ಸಂದರ್ಭದಲ್ಲಿ ತೊಟ್ಟುಕೊಂಡಿದ್ದ ಬೆಲೆ ಬಾಳುವ ಉಡುಪುಗಳನ್ನು ಇವರಿಗೆ ತೋರಿಸಿದ್ದಳು.
 
ಈ ವೇಳೆ ದುಬಾರಿ ಬೆಲೆಯ ಡ್ರೆಸ್ ನೋಡಿ ದುರಾಸೆಗೊಳಗಾದ ದಂಪತಿ ಮರುದಿನ ಮಾಲಾಳನ್ನು ಊಟದ ನೆಪದಲ್ಲಿ ತಮ್ಮ ಮನೆಗೆ ಕರೆದೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಮಾಲಾ ಇರುವ ಫ್ಲ್ಯಾಟ್ ಗೆ ತೆರಳಿ ಎರಡು ಸೂಟ್ ಕೇಸ್ ತೆಗೆದುಕೊಂಡು ಒಂದರಲ್ಲಿ ಬೆಲೆ ಬಾಳು ಡ್ರೆಸ್ ಗಳನ್ನು ತುಂಬಿದ್ದಾರೆ. ಇನ್ನೊಂದು ಸೂಟ್ ಕೇಸ್ ನ್ನು ಮನೆಗೆ ತಂದು ಮಾಲಾ ಮೃತದೇಹವನ್ನು ತುಂಬಿ ಗಾಝಿಯಾಬಾದ್ ನ ನಡುರಸ್ತೆಯೊಂದರಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ತಪ್ಪೊಪ್ಪಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಮ ತೃಷೆಯನ್ನು ನೀಗಿಸಿಕೊಳ್ಳಲು ಮೂವರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ನೀಚ ತಂದೆ

ಗುಜರಾತ್ : ಕಾಮುಕರ ಕೈಯಿಂದ ತನ್ನ ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ತಂದೆಯೇ ತನ್ನ ಮೂವರು ಹೆಣ್ಣುಮಕ್ಕಳ ...

news

ಮತ್ತೆ ಅಮೀರ್ ಖಾನ್ ಫೋಟೊ ಹಾಕಿ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ ನಟಿ ರಮ್ಯಾ

ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆ ಏರುತ್ತಿರುವ ಹಿನ್ನಲೆಯಲ್ಲಿ ಇದೀಗ ನಟಿ ರಮ್ಯಾ ಮತ್ತೆ ಕೇಂದ್ರ ...

news

ರುಂಡದೊಂದಿಗೆ ಕೊಲೆಗಡುಕರು ಪರಾರಿ!

ಕೊಲೆ ಮಾಡಿ ವ್ಯಕ್ತಿಯ ರುಂಡದೊಂದಿಗೆ ಕೊಲೆಗಾರರು ಪರಾರಿಯಾಗಿರುವ ಘಟನೆ ನಡೆದಿದೆ.

news

ಸುನೀಲ್ ಗೌಡ ಪಾಟೀಲ್ ಗೆಲುವಿಗೆ ಸಂತಸ

ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಸುನೀಲಗೌಡ ಪಾಟೀಲ್ ಗೆದ್ದಿರುವುದಕ್ಕೆ ಹಾಲಿ ವಿಧಾನ ಪರಿಷತ್ ...

Widgets Magazine
Widgets Magazine