ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳ

ನವದೆಹಲಿ, ಮಂಗಳವಾರ, 12 ಸೆಪ್ಟಂಬರ್ 2017 (17:48 IST)

ಕೇಂದ್ರ ಸರಕಾರಿ ನೌಕರರ ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ. ಕೇಂದ್ರ ಸಚಿವ ಸಂಪುಟ ನೌಕರರ ತುಟ್ಟಿಭತ್ಯೆಯಲ್ಲಿ ಶೇ.1 ರಷ್ಟು ಹೆಚ್ಚಳಗೊಳಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಸಚಿವ ಸಂಪುಟದ ನಿರ್ಧಾರದಿಂದಾಗಿ 48.85 ಲಕ್ಷ ಕೇಂದ್ರ ಸರಕಾರದ ಉದ್ಯೋಗಿಗಳಉ ಮತ್ತು 55.51 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ, ಕೇಂದ್ರ ಸರಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಹೆಚ್ಚುವರಿ ಭತ್ಯೆ ಬಿಡುಗಡೆಗೊಳಿಸಿ ಜುಲೈ 1, 2017 ರಿಂದ ಜಾರಿಗೆ ಬರುವಂತೆ ಅನುಮತಿ ನೀಡಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
 
7 ನೇ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ಸ್ವೀಕರಿಸಲಾದ ಸೂತ್ರಕ್ಕೆ ಅನುಗುಣವಾಗಿ ದರ ಏರಿಕೆಯನ್ನು ಸರಿದೂಗಿಸಲು ಸರಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯಲ್ಲಿ ಹೆಚ್ಚಳಗೊಳಿಸಲಾಗಿದೆ ಎಂದು ವಿತ್ತ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
 
ಕೇಂದ್ರ ಸರಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಹೆಚ್ಚಳದಿಂದಾಗಿ ಕೇಂದ್ರ ಸರಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 3,068.26 ಕೋಟಿ ರೂಪಾಯಿಗಳ ಹೊರೆಯಾಗಲಿದೆ. ಪ್ರಸಕ್ತ ಆರ್ಥಿಕ ವರ್ಷವಾದ 2017-18ರಲ್ಲಿ 2,045.50 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಮಿಳುನಾಡಿನ 200ಕ್ಕೂ ಅಧಿಕ ಪೊಲೀಸರು ಕೊಡಗಿನ ರೆಸಾರ್ಟ್`ಗೆ ಬಂದಿದ್ದೇಕೆ..?

ವಿ.ಕೆ. ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನ ಅಣ್ಣಾಡಿಎಂಕೆ ಪಕ್ಷದ ಹುದ್ದೆಯಿಂದ ಉಚ್ಚಾಟಿಸಿದ ಬಳಿಕ ...

news

ಬಿಜೆಪಿಯವರಂತೆ ಸಿಬಿಐ ಪ್ರಾಮಾಣಿಕತೆ ನಾವು ಪ್ರಶ್ನಿಸೋಲ್ಲ: ಸಿಎಂ

ಬಳ್ಳಾರಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ವಿಪಕ್ಷದಲ್ಲಿದ್ದ ...

news

ಬಿಬಿಎಂಪಿ ಮೇಯರ್, ಉಪಮೇಯರ್ ಸ್ಥಾನ ಬಿಜೆಪಿಗೆ ಒಲಿಯಲಿದೆ: ಅಶೋಕ್

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಗೆ ಆಸಕ್ತಿ ಇಲ್ಲ ...

news

ನಾನು ನೋಡಿದ್ದನ್ನ, ಕೇಳಿದ್ದನ್ನ ಹೇಳಿದ್ದೇನೆ: ಎಂ.ಬಿ. ಪಾಟೀಲ್ ಪ್ರತಿಕ್ರಿಯೆ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳ ಬೆಂಬಲವಿದೆ. ಶ್ರೀಗಳ ನನ್ನ ಜೊತೆ ಹೇಳಿದ್ದಾರೆಂದು ...

Widgets Magazine