ವಂಚಕನ ಪ್ರೀತಿಗೆ ಮೋಸಹೋಗಿ ಕಿಡ್ನಿ ಮಾರಲು ಮುಂದಾಗಿದ್ದ ವಿಚ್ಛೇದಿತೆ

ನವದೆಹಲಿ, ಬುಧವಾರ, 18 ಅಕ್ಟೋಬರ್ 2017 (12:56 IST)

ನವದೆಹಲಿ: ನಿಜವಾದ ಪ್ರೀತಿಗೆ ಎಂದಿಗೂ ಸಾವಿಲ್ಲ. ಹೀಗೆ ಪ್ರೀತಿಯ ಬಲೆಗೆ ಬಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಕಿಡ್ನಿ ಮಾರಲು ಮುಂದಾದ ಘಟನೆ ದೆಹಲಿಯಲ್ಲಿ ನಡೆದಿದೆ.


ವಿಚ್ಛೇದಿತೆಯಾಗಿದ್ದ ಬಿಹಾರ ಮೂಲದ 21 ವರ್ಷದ ಯುವತಿ ತನ್ನ ತವರು ಮನೆಯಲ್ಲಿ ಬಂದು ನೆಲೆಸಿದ್ದಳು. ಈ ಸಂದರ್ಭದಲ್ಲಿ ತನ್ನ ನೆರೆ ಮನೆಯ ಯುವಕನೊಂದಿಗೆ ಆಕೆಗೆ ಪ್ರೇಮಾಂಕುರವಾಗಿದೆ. ಈ ವಿಚಾರ ಆತನಿಗೆ ತಿಳಿಸಿ ಮದುವೆಯಾಗುವಂತೆ ಹೇಳಿದಾಗ ಆತ ಹಣ ನೀಡಿದರೆ ಮಾತ್ರ ಮದುವೆಯಾಗುವುದಾಗಿ ಹೇಳಿದ್ದಾನೆ. ಇದಕ್ಕಾಗಿ ಆಕೆ ಮಾಡಿದ್ದೇನು ಗೊತ್ತಾ…?

ವಿಚ್ಛೇದಿತ ಮಹಿಳೆ 1.8 ಲಕ್ಷಕ್ಕೆ ತನ್ನ ಕಿಡ್ನಿ ಮಾರಾಟಕ್ಕಾಗಿ ದೆಹಲಿಯ ಆಸ್ಪತ್ರೆಯೊಂದಕ್ಕೆ ಬಂದಿದ್ದಾಳೆ. ಈ ವೇಳೆ ಆಸ್ಪತ್ರೆಯವರು ಇದು ಅಕ್ರಮ ಅಂಗಾಂಗ ಮಾರಾಟ ಮಾಫಿಯಾ ಇರಬಹುದು ಎನ್ನುವ ಶಂಕೆಯಲ್ಲಿ ಮಹಿಳಾ ಆಯೋಗ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಮಹಿಳಾ ಆಯೋಗದವರು ಆಕೆಯನ್ನು ವಿಚಾರಿಸಿದಾಗ ತಾನು ಹಣ ನೀಡಿದರೆ ತನ್ನ ಪ್ರೇಮಿ ತನ್ನನ್ನು ಮದುವೆಯಾಗುತ್ತಾನೆ. ಅಷ್ಟೊಂದು ಹಣವಿಲ್ಲದ ಕಾರಣ ಕಿಡ್ನಿ ಮಾರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಮಹಿಳಾ ಆಯೋಗದವರು ಆಕೆಗೆ ಗೆಳೆಯನ ವಿರುದ್ಧ ದೂರು ನೀಡುವಂತೆ ಸಲಹೆ ನೀಡಿದರೂ ಸಹ ಆಕೆ ದೂರು ನೀಡಲು ಒಪ್ಪಿಲ್ಲ. ಇತ್ತ ಆಸ್ಪತ್ರೆಯವರೂ ಸಹ ಕಿಡ್ನಿ ಆಪರೇಷನ್‌ ಮಾಡಲು ಮುಂದಾಗಿಲ್ಲ.  ಹೀಗಾಗಿ ಆಕೆ ವಾಪಸ್‌ ತನ್ನೂರಿಗೆ ಮರಳಿದ್ದಾಳೆ.

ಇದಾದ ಬಳಿಕ ದೆಹಲಿ ಮಹಿಳಾ ಆಯೋಗ ಬಿಹಾರ ಮಹಿಳಾ ಆಯೋಗವನ್ನು ಸಂಪರ್ಕಿಸಿ, ಮಹಿಳೆಗೆ ಅಗತ್ಯವಾದ ಸಹಾಯ ಮಾಡಿ ಆಕೆಯ ಪ್ರೇಮಿಯ ವಿರುದ್ಧ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಿನ್ನದ ಬಿಸ್ಕತ್, ಆಡಂಬರಕ್ಕೆ ಬ್ರೇಕ್… ಟೀಕಾಕಾರರ ಬಾಯ್ಮುಚ್ಚಿಸಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ತಂದ ಅನಾಹುತ ಒಂದು ಕಡೆ ಸಮಸ್ಯೆಯಾದರೆ, ಇದರ ಜತೆಗೆ ಅನೇಕ ಸಮಸ್ಯೆಗಳವೂ ...

news

ಮತದಾನಕ್ಕೂ ಇನ್ನುಮುಂದೆ ಆಧಾರ್ ಕಾರ್ಡ್ ಕಡ್ಡಾಯ…?

ನವದೆಹಲಿ: ಶೀಘ್ರವೇ ಮತದಾನಕ್ಕೂ ಆಧಾರ್ ಕಾರ್ಡನ್ನು ಏಕೈಕ ಗುರುತು ಪತ್ರವಾಗಿ ಬಳಸಬಹುದು ಎಂದು ಮಾಜಿ ಮುಖ್ಯ ...

news

ದಿಗ್ವಿಜಯ್ ಸಿಂಗ್ ಅಳಿಯ 1.15 ಕೋಟಿ ಲಂಚ ಪಡೆದಿದ್ದಾರೆ: ಬಾಬುರಾವ್ ಚೌಹಾಣ್

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ ವಿರುದ್ಧ ಕೇಳಿ ಬಂದಿರುವ ...

news

ಜೀವನದಿ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ

ಮಡಿಕೇರಿ: ಕನ್ನಡ ನಾಡಿನ ಜೀವನದಿ ತಲಕಾವೇರಿಯಲ್ಲಿ ಇಂದು 12.33ಕ್ಕೆ ಪವಿತ್ರ ತೀರ್ಥೋದ್ಭವವಾಯಿತು. ರಾಜ್ಯದ ...

Widgets Magazine
Widgets Magazine