ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಲಿ: ಸುಬ್ರಹ್ಮಣ್ಯಂ ಸ್ವಾಮಿ

ಬೆಂಗಳೂರು, ಭಾನುವಾರ, 21 ಜನವರಿ 2018 (18:06 IST)

ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ರಾಮಚಂದ್ರಪುರ ಮಠದಲ್ಲಿ ಮಾತನಾಡಿದ ಅವರು, ಗೋಹತ್ಯೆ ಮಾಡಿದವರಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಯಾಗಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಗೋಹತ್ಯೆ ನಿಷೇಧಿಸಲಾಗುವುದು ಎಂದು ತಿಳಿಸಿದ್ದಾರೆ.
 
ಹಿಂದೂಗಳಾಗಲಿ ಅಥವಾ ಮುಸ್ಲಿಮರಾಗಲಿ ಗೋಮಾಂಸ ಸೇವಿಸಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಗೋಮಾಂಸ ಸೇವಿಸುವವರು ಸಂವಿಧಾನ ವಿರೋಧಿಗಳು. ಅಂತಹವರಿಗೆ ಶಿಕ್ಷೆಯಾಗಲೇಬೇಕು ಎಂದು ಕಿಡಿಕಾರಿದ್ದಾರೆ.
 
ಕಾಂಗ್ರೆಸ್ ಸರಕಾರ ಗೋಹತ್ಯೆ ಮಾಡುವವರ ಪರವಾಗಿದೆ. ಇಂತಹ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನನ್ನ ಅಪ್ಪ, ಅಮ್ಮ ಕುರುಬರಾಗಿದ್ದರಿಂದ ನಾನು ಕುರುಬ ಜಾತಿಯವನಾಗಿದ್ದೇನೆ-ಸಿಎಂ ಸಿದ್ದರಾಮಯ್ಯ

ಬಾಗೇಪಲ್ಲಿ : 'ನಾನೇನು ಅರ್ಜಿ ಹಾಕಿಕೊಂಡು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನಾ? ನನ್ನ ಅಪ್ಪ , ಅಮ್ಮ ಕುರುಬ ...

news

20 ಆಪ್ ಶಾಸಕರು ಅನರ್ಹ: ರಾಷ್ಟ್ರಪತಿ ಕೋವಿಂದ್ ಅಂಕಿತ

ನವದೆಹಲಿ: ಲಾಭದಾಯಕ ಹುದ್ದೆಹೊಂದಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಕೋವಿಂದ್ 20 ಆಮ್ ಆದ್ಮಿ ಪಕ್ಷದ ...

news

ಮಣ್ಣಿನ ಮಗ ಟೈಟಲ್‌ಗಾಗಿ ಅಪ್ಪ-ಮಗ ಪೈಪೋಟಿ: ಸಿಎಂ ಲೇವಡಿ

ಚಿಕ್ಕಬಳ್ಳಾಪುರ: ಮಣ್ಣಿನ ಮಗ ಟೈಟಲ್‌ಗಾಗಿ ಅಪ್ಪ-ಮಗ ಪೈಪೋಟಿ ನಡೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ...

news

ಕೇಂದ್ರ ಸಚಿವ ಹೆಗಡೆ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ

ಬೆಂಗಳೂರು: ಕನ್ನಡ ಪರ ಅವಹೇಳನಾಕಾರಿ ಹೇಳಿಕೆ ನೀಡುತ್ತಿರುವುದಲ್ಲದೇ ಕನ್ನಡ ಭಾಷೆಯ ಸಾಹಿತಿಗಳನ್ನು ...

Widgets Magazine