ಎಂತಾ ಕಾಲ ಬಂತಪ್ಪಾ: 4 ವರ್ಷದ ಬಾಲಕನ ವಿರುದ್ಧ ರೇಪ್ ಕೇಸ್ ದಾಖಲು

ನವದೆಹಲಿ:, ಗುರುವಾರ, 23 ನವೆಂಬರ್ 2017 (15:30 IST)

ದೆಹಲಿಯ ದ್ವಾರಕಾದಲ್ಲಿರುವ ಮ್ಯಾಕ್ಸ್‌ಫೋರ್ಟ್ ಶಾಲೆಯ ಆವರಣದಲ್ಲಿ ಸಹಪಾಠಿಗೆ ನೀಡಿದ   ಆರೋಪದ ಮೇಲೆ ನಾಲ್ಕು ವರ್ಷ ವಯಸ್ಸಿನ ಬಾಲಕನ ವಿರುದ್ಧ ಕೇಸ್ ದಾಖಲಾಗಿದೆ.
 
ಪೋಷಕರ ದೂರಿನ ಪ್ರಕಾರ, ಬಾಲಕಿ ಶಾಲೆಯಿಂದ ಮನೆಗೆ ಬಂದ ಕೂಡಲೇ ಗುಪ್ತಾಂಗದಲ್ಲಿ  ನೋವಾಗಿದೆ ಎಂದು ದೂರಿದ್ದಾಳೆ. ಮಾರನೇ ದಿನ ಮೌನ ಮುರಿದು ನಡೆದ ಘಟನೆಯನ್ನು ವಿವರಿಸಿದ್ದಾಳೆ.
 
ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಬಾಯಿಬಿಟ್ಟ ಬಾಲಕಿ ತನ್ನ ಸಹಪಾಠಿಯಾಗಿರುವ ಬಾಲಕನೊಬ್ಬ ಪ್ಯಾಂಟ್‌ ಬಿಚ್ಚಿ, ತನ್ನ ಗುಪ್ತಾಂಗದಲ್ಲಿ ಬೆರಳು ತೂರಿಸಿದ್ದಾನೆ ಎಂದು ತಿಳಿಸಿದ್ದಾಳೆ. 
 
ಬಾಲಕಿ ಅವನನ್ನು ದೂರ ತಳ್ಳಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಹತ್ತಿರ ಯಾವುದೇ ಸಿಬ್ಬಂದಿಯಿಲ್ಲದ ಕಾರಣ ಇತರರ ನೆರವು ಕೇಳಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾಳೆ. 
 
ಶಾಲೆಯ ಶಿಕ್ಷಕಿ ಮತ್ತು ಸಂಚಾಲಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಾಲಕಿಯ ಪೋಷಕರು, ಶಾಲೆಯ ಪ್ರಾಂಶುಪಾಲ ಆರೋಪಿ ವಿದ್ಯಾರ್ಥಿಯ ವಿವರಗಳನ್ನು ಕೂಡಾ ನೀಡಲು ನಿರಾಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ರಾಕ್‌ಲಾಂಡ್ ಆಸ್ಪತ್ರೆಯ ವೈದ್ಯರು ಬಾಲಕಿಯ ಪರೀಕ್ಷೆ ನಡೆಸಿದಾಗ ಲೈಂಗಿಕ ದೌರ್ಜನ್ಯವಾಗಿರುವುದು ಸಾಬೀತಾಗಿದೆ. ನಂತರ ಪೋಷಕರು ಬಾಲಕನ ವಿರುದ್ಧ ದ್ವಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಲೈಂಗಿಕ ಕಿರುಕುಳ ಮ್ಯಾಕ್ಸ್‌ಫೋರ್ಟ್ ಬಾಲಕಿ ರೇಪ್ ಬಾಲಕ Girl Boy Sexually Assault Private Parts Maxfort School

ಸುದ್ದಿಗಳು

ಪಾಪ ಮಾಡಿದ್ರೆ ಕ್ಯಾನ್ಸರ್ ಬರುತ್ತೆ!

ಗುವಾಹಟಿ: 'ಪಾಪ ಮಾಡಿದ್ದರೆ ಕ್ಯಾನ್ಸರ್ ಬರುತ್ತದೆ' ಇದನ್ನು ಯಾರೋ ಜ್ಯೋತಿಷಿ ಹೇಳುತ್ತಿದ್ದಾರೆ ...

news

ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರೆವಸಗಿದ 85 ವರ್ಷದ ವೃದ್ಧ ಅರೆಸ್ಟ್

ಹೈದ್ರಾಬಾದ್: ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರೆವಸಗಿದ ಆರೋಪಿ 85 ವರ್ಷದ ವೃದ್ಧನನ್ನು ಪೊಲೀಸರು ...

ಶವವೂ ಅದಲಿ ಬದಲಿ ಆಗ್ಹೋಯ್ತು!

ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಬೇಜಾವಾಬ್ದಾರಿಯಿಂದ ಶವವನ್ನು ಅದಲು ಬದಲಾಗಿ ...

news

ಶಾಕಿಂಗ್! ನಾಲ್ಕು ವರ್ಷದ ಬಾಲಕನಿಂದ ಗೆಳತಿಯ ಮೇಲೆ ಅತ್ಯಾಚಾರ!

ನವದೆಹಲಿ: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ದೆಹಲಿಯ ಮ್ಯಾಕ್ಸ್ ಫೋರ್ಟ್ ...

Widgets Magazine