ರಾಜಕೀಯ ಪಕ್ಷಗಳಿಗೆ 2 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ನೀಡಬೇಡಿ: ಐಟಿ ಇಲಾಖೆ

ಬೆಂಗಳೂರು, ಮಂಗಳವಾರ, 23 ಜನವರಿ 2018 (17:25 IST)

ರಾಜಕೀಯ ಪಕ್ಷಗಳಿಗೆ 2 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ನೀಡಬೇಡಿ. ಕಾನೂನುಬಾಹಿರವಾಗಿ ಹಣ ವರ್ಗಾವಣೆ ಮಾಡಿದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದೆ.
ಚುನಾವಣೆಯಲ್ಲಿ ಹಣದ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ಎಸ್‌ಬಿಐ ಬ್ಯಾಂಕ್ ಮೂಲಕ ಎಲೆಕ್ಟ್ರೋಲ್ ಬಾಂಡ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಯಾವುದೇ ವ್ಯಕ್ತಿ ರಾಜಕೀಯ ಪಕ್ಷಗಳಿಗೆ 2000 ರೂಪಾಯಿಗಳಿಗಿಂತ ಹೆಚ್ಚಿನ ಹಣ ದೇಣಿಗೆ ನೀಡುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  
 
ಆದಾಯ ತೆರಿಗೆ ಇಲಾಖೆ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಜಾಹೀರಾತು ನೀಡುತ್ತಿದ್ದು, ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳಿಗೆ 2000 ರೂಪಾಯಿಗಳಿಗಿಂತ ಹೆಚ್ಚಿನ ನಗದು ದೇಣಿಗೆ ನೀಡುವುದು ಕಾನೂನುಬಾಹಿರ ಎನ್ನುವ ಮಾಹಿತಿಯನ್ನು ರವಾನಿಸುತ್ತಿದೆ.
 
ರಾಜಕೀಯ ಪಕ್ಷಗಳು ಯಾವುದೇ ಒಬ್ಬ ವ್ಯಕ್ತಿಯಿಂದ ಒಂದೇ ಬಾರಿಗೆ ಒಂದೇ ದಿನದಂದು ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಬಾರದು ಎಂದು ಐಟಿ ಇಲಾಖೆ ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಆದಾಯ ತೆರಿಗೆ ಇಲಾಖೆ ಅನಧಿಕೃತ ಹಣ ವರ್ಗಾವಣೆ ರಾಜಕೀಯ ಪಕ್ಷಗಳು ದೇಣಿಗೆ I-t Department Political Parties Illegal Cash Transaction

ಸುದ್ದಿಗಳು

news

‘ಸಿದ್ದರಾಮಯ್ಯನವರೇ ನೀವೇನು ಸಾಚಾ ಮುಖ್ಯಮಂತ್ರಿನಾ?’- ಬಿಎಸ್ ಯಡಿಯೂರಪ್ಪ

ಬೆಂಗಳೂರು : ಬಿಎಸ್ ಯಡಿಯೂರಪ್ಪ ಅವರು ‘ಸಿದ್ದರಾಮಯ್ಯನವರೇ ನೀವೇನು ಸಾಚಾ ಮುಖ್ಯಮಂತ್ರಿನಾ?’ ಎಂದು ...

news

ಮಂಡ್ಯದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಹೀರೋಯಿನ್ ಗಳ ಕಾದಾಟ?!

ಬೆಂಗಳೂರು: ಮುಂಬರುವ ರಾಜ್ಯ ಚುನಾವಣೆಗೆ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿದೆ. ...

news

ಬಿಜೆಪಿಯ ಮರ್ಜಿಯಂತೆ ನಡೆಯುತ್ತಿರುವ ದೇಶ– ಹಾರ್ದಿಕ್‌

ಸಂವಿಧಾನದಂತೆ ನಡೆಯಬೇಕಾದ ದೇಶ ಬಿಜೆಪಿ ನಾಯಕರ ಮರ್ಜಿಯಂತೆ ನಡೆಯುತ್ತಿದೆ ಎಂದು ಗುಜರಾತಿನ ಹೋರಾಟಗಾರ ...

news

ಮೋದಿ, ಅಮಿತ್ ಶಾ ಎಂದರೆ ಕನಸಲ್ಲೂ ಗಡಗಡ ನಡಗುವ ಸಿದ್ದರಾಮಯ್ಯ– ಡಿವಿಎಸ್‌

ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂದರೆ ಮುಖ್ಯಮಂತ್ರಿ ...

Widgets Magazine
Widgets Magazine