ರಾಹುಲ್ ಗಾಂಧಿ ವಿರುದ್ಧ ಅಶ್ಲೀಲ ಪದ ಬಳಸಿದ ಬಿಜೆಪಿ ರಾಜ್ಯಾಧ್ಯಕ್ಷ

ನವದೆಹಲಿ, ಸೋಮವಾರ, 15 ಏಪ್ರಿಲ್ 2019 (16:08 IST)

ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ರಾಜ್ಯಾಧ್ಯಕ್ಷನೊಬ್ಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅತ್ಯಂತ ಕೀಳುಮಟ್ಟದ ಪದ ಬಳಕೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಹಿಮಾಚಲ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸತ್ಪಾಲ್ ಸಿಂಗ್, ಚೌಕಿದಾರ್ ಚೋರ್ ಹೈ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ವಿರುದ್ಧ ಅಶ್ಲೀಲ, ಅತ್ಯಂತ ಕೀಳುಮಟ್ಟದ ಪದ ಬಳಕೆ ಮಾಡಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
 
ಶಿಮ್ಲಾ ಲೋಕಸಭೆ ಕ್ಷೇತ್ರದ ಬಡ್ಡಿ ಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸತ್ಪಾಲ್, ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಚೋರ್ ಎನ್ನಬಹುದಾದರೇ ನಾವು ಅವರ ವಿರುದ್ಧ ಅಶ್ಲೀಲ ಪದ ಬಳಸುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಬರ್ಟ್ ವಾದ್ರಾ ಬೇಲ್ ಮೇಲಿದ್ದಾರೆ. ಆದಾಗ್ಯೂ ಪ್ರಧಾನಮಂತ್ರಿಯನ್ನು ಚೋರ್ ಎನ್ನುತ್ತಾರೆ. ಒಂದು ವೇಳೆ ಪ್ರಧಾನಿ ಮೋದಿ ಚೋರ್ ಆದರೆ, ನೀನು..... ಎಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
 
ಹಿಮಾಚಲ ಪ್ರದೇಶದ ಕಾಂಗ್ರೆಸ್ ಪಕ್ಷದ ವಕ್ತಾರರಾದ ನರೇಶ್ ಚೌಹಾನ್ ಮಾತನಾಡಿ, ಪಕ್ಷದ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು ಶೀಘ್ರದಲ್ಲಿಯೇ ದೂರು ನೀಡಲಾಗುವುದು. ಚುನಾವಣೆ ಆಯೋಗಕ್ಕೂ ವಿಡಿಯೋ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
 
ಹಿರಿಯ ರಾಜಕಾರಣಿಯಿಂದ ಇಂತಹ ಕೆಟ್ಟ ಶಬ್ದಗಳ ಬಳಕೆ ನಿರೀಕ್ಷಿಸಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಕುಲದೀಪ್ ರಾಠೋರ್ ಬೇಸರ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಯಿಯ ಎದುರೇ ಪುತ್ರಿಯ ಮೇಲೆ ಗ್ಯಾಂಗ್‌ರೇಪ್

ಮುಜಾಫರ್‌ನಗರ್: ಹೆತ್ತ ತಾಯಿಯ ಎದುರೇ ಪುತ್ರಿಯ ಮೇಲೆ ಇಬ್ಬರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ...

news

ಸಿದ್ದರಾಮಯ್ಯನವರೇ ನನ್ನ ನಾಯಕ ಎಂದ ಬಿಜೆಪಿ ಅಭ್ಯರ್ಥಿ ಯಾರು ಗೊತ್ತಾ?

ಹಾಸನ : ಈಗಲೂ ಸಿದ್ದರಾಮಯ್ಯನವರೇ ನನ್ನ ನಾಯಕ ಎಂದು ಹೇಳುವುದರ ಮೂಲಕ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ...

news

ಬ್ರಿಟನ್ ನಲ್ಲಿ ಪಾನ್ ತಿಂದು ಎಲ್ಲೆಂದರಲ್ಲಿ ಉಗಿಯುವವರಿಗೊಂದು ಶಾಕಿಂಗ್ ನ್ಯೂಸ್

ಬ್ರಿಟನ್ : ಬ್ರಿಟನ್ ನ ಲಿಸಿಸ್ಟರ್ ನಗರದಲ್ಲಿ ಗುಟ್ಕಾ ಅಥವಾ ಪಾನ್ ತಿಂದು ಉಗಿಯುವವರಿಗೆ ದಂಡ ...

news

ಮೂರು ಬಾರಿ ಗರ್ಭಪಾತ ಆಗಿದ್ದಕ್ಕೆ ಪತ್ನಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಏನು ಮಾಡಲಿ

ಬೆಂಗಳೂರು : ಪ್ರಶ್ನೆ: ನಾನು 34 ವರ್ಷದ ವಿವಾಹಿತ. ನನ್ನ ಹೆಂಡತಿ ಐವಿಎಫ್ ಚಿಕಿತ್ಸೆಗೊಳಗಾಗಿದ್ದಾಳೆ. ...

Widgets Magazine