ಎರಡನೇ ಬಾರಿಯೂ ಹೆಣ್ಣು ಮಗು ಹುಟ್ಟಿತೆಂದು ಮೊದಲ ಮಗುವನ್ನು ಟೆರೇಸ್ ನಿಂದ ತಳ್ಳಿದ ಅಪ್ಪ

ಉತ್ತರಪ್ರದೇಶ, ಶನಿವಾರ, 15 ಸೆಪ್ಟಂಬರ್ 2018 (16:27 IST)

: ಎಷ್ಟೇ ಅಭಿವೃದ್ಧಿ ಹೊಂದಿ ಹೆಣ್ಣು ಮಕ್ಕಳಿಗಾಗಿ ಹೊಸ ಹೊಸ ಕಾನೂನುಗಳನ್ನು, ಯೋಜನೆಗಳನ್ನು  ಜಾರಿಗೆ ತಂದರೂ ಕೂಡ ಇನ್ನು ಹೆಣ್ಣು ಮಕ್ಕಳ ಮೇಲಿನ ಕೀಳರಿಮೆ ಹೋಗಿಲ್ಲ. ಇದಕ್ಕೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸಿಬಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.


ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸಿಬಿ ಗಂಜ್ ನಲ್ಲಿ ಕುಡುಕ ವ್ಯಕ್ತಿಯೊಬ್ಬ ತನ್ನ ಪತ್ನಿ ಎರಡನೇ ಬಾರಿಯೂ ಹೆಣ್ಣು ಮಗುವನ್ನು ಹೆತ್ತಳೆಂಬ ಕಾರಣಕ್ಕೆ ತನ್ನ ಮೊದಲ ಮಗಳನ್ನು ಟೆರೇಸ್ ಮೇಲಿನಿಂದ ಎಸೆದ ಅಮಾನವೀಯ ಘಟನೆ ನಡೆದಿದೆ.


ಆ ಪಾಪಿ ತಂದೆ ಅರವಿಂದ್ ಗಂಗ್ವಾರ್ ಎಂಬುದಾಗಿ ತಿಳಿದುಬಂದಿದ್ದು, ಇತ ಕುಡಿದ ಮತ್ತಿನಲ್ಲಿ ಇಂತಹ ಕೃತ್ಯ ಎಸಗಿ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಪೊಲೀಸರು ಈಗ ಆ ವ್ಯಕ್ತಿಯ ಹುಡುಕಾಟದಲ್ಲಿ  ತೊಡಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಭಿನ್ನಮತ ಶಮನವಾಗಿದೆ ಎಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ರಾಜ್ಯಾದ್ಯಂತ ಸುದ್ದಿಯಾಗಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಷಯ ಮುಗಿದು ಹೋದ ಅಧ್ಯಾಯವಾಗಿದೆ ...

news

ಸಲಿಂಗಕಾಮ ಅಪಚಾರವಲ್ಲ ಎಂದ ಕೇಂದ್ರ ಸಚಿವ

ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ. ಬದಲಾಗಿ ಅದು ಬದುಕಿನ ವ್ಯವಸ್ಥೆಯಾಗಿದೆ ಎಂದ ಕೇಂದ್ರ ಸಚಿವ ...

news

ಅತ್ಯಾಚಾರದ ಆರೋಪಕ್ಕೆ ಕಾರಣವಾಯ್ತು ಈ ಕಾಂಡೋಮ್

ಜಿಂಬಾಬ್ವೆ : ವೇಶ್ಯೆಯೊಬ್ಬಳು 34 ವರ್ಷದ ವ್ಯಕ್ತಿ ಮೇಲೆ ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾಳೆ. ...

news

ಛಬ್ಬಿ ಗಣಪತಿಗೆ ಮೊರೆ ಹೋಗುತ್ತಿರುವ ಲಕ್ಷಾಂತರ ಭಕ್ತರು

ಛಬ್ಬಿ ಗಣೇಶ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದು ಹೆಸರು ವಾಸಿಯಾಗಿದ್ದಾನೆ. ಹೀಗಾಗಿ ತನ್ನದೇ ...

Widgets Magazine