ಫೇಸ್‌ಬುಕ್ ಗೆಳೆಯರಿಂದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ

ರೂರ್ಕೆ, ಬುಧವಾರ, 25 ಅಕ್ಟೋಬರ್ 2017 (13:05 IST)

Widgets Magazine

ಫೇಸ್‌ಬುಕ್ ಗೆಳೆಯನ ಆಹ್ವಾನದ ಮೇರೆಗೆ ಉತ್ತರಾಖಂಡ್‌ಗೆ ತೆರಳಿದ್ದ ಕರ್ನಾಟಕ ಮೂಲದ ಇಬ್ಬರು ಯುವತಿಯರು ಅತ್ಯಾಚಾರಕ್ಕೊಳಗಾದ ಹೇಯ ಘಟನೆ ವರದಿಯಾಗಿದೆ.
ಇಬ್ಬರು ಯುವತಿಯರು ರೂರ್ಕೆ ಪೊಲೀಸ್ ಠಾಣೆಗೆ ತೆರಳಿ ಇಬ್ಬರು ಆರೋಪಿಗಳ ವಿರುದ್ಧ ಅತ್ಯಾಚಾರದ ದೂರು ನೀಡಿದ್ದಾರೆ.
 
ಸಹರಣಪುರ್ ಜಿಲ್ಲೆಯ ಫೇಸ್‌ಬುಕ್ ಗೆಳೆಯರನ್ನು ಮೂರು ತಿಂಗಳುಗಳ ಹಿಂದೆ ಭೇಟಿ ಮಾಡಿದ್ದೇವೆ. ಅವರ ಆಹ್ವಾನದ ಮೇರೆಗೆ ಉತ್ತರಾಖಂಡ್‌ಗೆ ಆಗಮಿಸಿದಾಗ ಇಬ್ಬರು ನಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
 
ಕರ್ನಾಟಕದ ಚಿತ್ರದುರ್ಗ ಮೂಲದವರಾದ 20 ವರ್ಷ ವಯಸ್ಸಿನ ಯುವತಿಯರು, ಸಚಿನ್ ಕುಮಾರ್ ಎಂಬಾತನನ್ನು ಮೂರು ತಿಂಗಳುಗಳ ಹಿಂದೆ ಭೇಟಿ ಮಾಡಿದ್ದರು. ನಂತರ ಉತ್ತರಾಖಂಡ್ ಪ್ರವಾಸಕ್ಕೆ ತೆರಳುವ ಬಗ್ಗೆ ಯೋಜನೆ ರೂಪಿಸಿದ್ದರು.
 
ಪಿರನ್ ಕಲಿಯಾರ್ ಎನ್ನುವ ಪಟ್ಟಣದಲ್ಲಿ ಗೆಸ್ಟ್ ಹೌಸ್‌ನಲ್ಲಿ ಇಬ್ಬರು ಯುವತಿಯರು ತಮ್ಮ ಫೇಸ್‌ಬುಕ್ ಗೆಳೆಯರಾದ ಸಚಿನ್ ಮತ್ತು ಮೋನು ಎನ್ನುವವರೊಂದಿಗೆ ವಾಸ್ತವ್ಯ ಹೂಡಿದ್ದಾರೆ. ಇಬ್ಬರು ಯುವತಿಯರಿಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರೆವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಯುವತಿಯರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಸಚಿನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದು, ಮೋನು ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಜ್ರ ಮಹೋತ್ಸವದ ವಿಶೇಷ ಕಾರ್ಯಕ್ರಮಗಳೇನು

ಬೆಂಗಳೂರು: ಅದ್ಭುತ ಶಿಲ್ಪಕಲಾ ವೈಭವ ಹೊಂದಿರುವ ವಿಧಾನಸೌಧಕ್ಕೆ ವಜ್ರ ಮಹೋತ್ಸವದ ಸಂಭ್ರಮ. ಹೀಗಾಗಿ ಅನೇಕ ...

news

ಸುರಂಗದಲ್ಲಿ ಪತ್ತೆಯಾಗಿದ್ದು ಶೆರಿನ್ ಶವ: ದೃಢಪಡಿಸಿದ ಪೊಲೀಸರು

ಅಮೆರಿಕ: ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಭಾರತ ಮೂಲದ ಅಮೆರಿಕ ನಿವಾಸಿ ಬಾಲಕಿ ಶೆರಿನ್ ಮ್ಯಾಥ್ಯೂಸ್ ...

news

ಉತ್ತರ ಪ್ರದೇಶ ಸಿಎಂ ಯೋಗಿ ಸಹೋದರ ಗಡಿ ಕಾಯುವ ಯೋಧ!

ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕುಟುಂಬದವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಅಣ್ಣ ...

news

ಚೀನಾಗೆ ಅವರದ್ದೇ ಭಾಷೆಯಲ್ಲಿ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜು

ನವದೆಹಲಿ: ಡೋಕ್ಲಾಂ ಗಡಿ ವಿವಾದದ ನಂತರ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಕಾರ್ಯಕ್ಷಮತೆ ಮೇಲ್ದರ್ಜೆಗೇರಿಸಲು ...

Widgets Magazine