ಮೋದಿಗೆ ಹೆದರಿ ಅಫ್ಗನ್-ಪಾಕ್ ಗಡಿಗೆ ಪಲಾಯನವಾದ ದಾವೂದ್

ಮುಂಬೈ, ಮಂಗಳವಾರ, 20 ಮೇ 2014 (13:28 IST)

ನರೇಂದ್ರ  ಮೋದಿ ಭಾರತದ  ಮುಂದಿನ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ತನ್ನ ನಿವಾಸವನ್ನು ಅಪಘಾನಿಸ್ತಾನ್- ಪಾಕ್ ಗಡಿಗೆ ಸ್ಥಳಾಂತರ ಮಾಡಿದ್ದಾನೆ ಎಂದು ವರದಿಯಾಗಿದೆ. 
 
ಕುತೂಹಲಕಾರಿಯಾದ ವಿಷಯವೇನೆಂದರೆ  ತನ್ನ ಚುನಾವಣಾ ಪ್ರಚಾರ ಅಭಿಯಾನದ ಸಂದರ್ಭದಲ್ಲಿ ಗುಜರಾತಿನ  ಸುದ್ದಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮೋದಿ ದಾವೂದ್ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. 
 
ಸದ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಬಿಜೆಪಿ ನಾಯಕ,  1993 ರ ಮುಂಬೈ ಸ್ಫೋಟದ ರೂವಾರಿ ದಾವೂದ್‌ನನ್ನು ಬಂಧಿಸಲು ಮುಂದಾಗಲಿದ್ದಾರೆ ಎಂದು ಗುಪ್ತಚರ ಘಟಕ ಭಾವಿಸಿದೆ. 
 
ವರದಿಗಳ ಪ್ರಕಾರ ಮೋದಿಯವರ ಮುಂದಿನ ನಡೆಯನ್ನು ಗ್ರಹಿಸಿರುವ ದಾವೂದ್, ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ನನ್ನು ಕಮಾಂಡೋ ಶೈಲಿಯ ಕಾರ್ಯಾಚರಣೆಯ ಮೂಲಕ ಅಬ್ಬೋತ್ತಬಾದ್ ರಲ್ಲಿ ಕೊಂದ ಅಮೇರಿಕಾದ ಮಾದರಿಯನ್ನು ಮೋದಿ ತನ್ನ ವಿಷಯದಲ್ಲಿ ಪ್ರಯೋಗಿಸಲಿದ್ದಾರೆ ಎಂದು ಆತಂಕಿತರಾಗಿದ್ದಾರೆ.  ಈ ಭಯದಿಂದ  ತನ್ನ ಸ್ಥಳವನ್ನು ಬದಲಾಯಿಸಿರುವ ಭೂಗತ ಡಾನ್ ತನಗೆ ನೀಡಲಾಗಿರುವ ಭದ್ರತೆಯನ್ನು ವರ್ಧಿಸಲು ಪಾಕಿಸ್ತಾನದ ಐಎಸ್ಐಗೆ ಮನವಿ ಮಾಡಿಕೊಂಡಿದ್ದಾರೆ. 
 
ಕೇವಲ ದಾವೂದ್, ಮಾತ್ರವಲ್ಲ, ಭಾರತದ ಭೂಗತ ಲೋಕದ ಹಬ್ ಎಂದು ಗುರುತಿಸಲ್ಪಡುವ, ಆರ್ಥಿಕ ರಾಜಧಾನಿ ಮುಂಬೈನಲ್ಲಿ ವಾಸವಾಗಿರುವ ದಾವೂದ್ ಸಹಚರರು ಕೂಡ ಮುಂಬೈನಿಂದ ಪರಾರಿಯಾಗಿದ್ದಾರೆ.
 
ಸೋಮವಾರ  ಮೋದಿ ಅವರನ್ನು ಭೇಟಿಯಾಗಿರುವ, ಇಂಟೆಲಿಜೆನ್ಸ್ ಬ್ಯೂರೋನ ಮಾಜಿ ನಿರ್ದೇಶಕ ಅಜಿತ್ ದೋವಲ್ ಮೋದಿ ಅವರನ್ನು ಭೇಟಿಯಾಗಿ ದೇಶ ಎದುರಿಸುತ್ತಿರುವ ಭದ್ರತಾ ಸವಾಲುಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. 
 
ದೇಶದ, ಹೊರಗಿನ ಮತ್ತು ಒಳಗಿನ ಬೆದರಿಕೆಗಳ ಬಗೆಗಿನ ಪಡೆಯಲು ಮೋದಿ   69 ವರ್ಷದ ದೋವಲ್ ಸಹಾಯ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೀವು ಎಂದಾದರು ಮಾವಿನ ಮರದ ಮದುವೆ ನೋಡಿದ್ದಿರಾ ?

ಬಿಲಾಸಪುರ: ಕೇಳಲು ಸ್ವಲ್ಪ ವಿಚಿತ್ರ ಎನಿಸಬಹುದು ಆದರೆ ಇದು ಸತ್ಯವಾಗಿದೆ. ಛತ್ತಿಸ್‌ಘಡ್‌ದ ರತನ್‌‌‌ಪುರ ...

news

ನಿಯೋಜಿತ ಪ್ರಧಾನಿ ಮೋದಿ ಭಾವುಕರಾದ ಕ್ಷಣ ಕೆಳಗಿದೆ ಓದಿ

ನವದೆಹಲಿ: ನರೇಂದ್ರ ಮೋದಿ ಅವರ ಹೆಸರನ್ನು ಸಂಸದೀಯ ನಾಯಕರಾಗಿ ಹಿರಿಯ ಮುಖಂಡ ಅಡ್ವಾಣಿ ಸೂಚಿಸಿದ ಬಳಿಕ ಮೋದಿ ...

news

ನಿಮ್ಮ ಮಚ್ವೆಗಳು ಕೂಡ ಶುಭ ಅಶುಭದ ಸಂಕೇತಗಳಾಗಿವೆ

ಮಚ್ಚೆಗಳು ಕೂಡ ವಿವಿಧ ಸ್ಥಾನಗಳಲ್ಲಿ ವಿವಿಧ ರೀತಿಯ ಪರಿಣಾಮ ಬೀರುತ್ತವೆ. ಮಚ್ಚೆಗಳು ಕಪ್ಪು ಬಣ್ಣದಲ್ಲಿ ...

news

ಜಮ್ಮುವಿನಲ್ಲಿ ಭೀಕರ ರಸ್ತೆ ದುರಂತ: 17 ಸಾವು, 27 ಮಂದಿಗೆ ಗಾಯ

ಕಾಶ್ಮೀರ ಕಣಿವೆಯಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಆಳವಾದ ಕಣಿವೆಗೆ ಬಿದ್ದು ...

Widgets Magazine